ಜ್ಯೋತಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗೆ ಎಲ್ಲೋ ಒಂದೆಡೆ ನಿಮ್ಮನ್ನು ನೀವು ಕುಬ್ಜರು ಎಂದುಕೊಳ್ಳುವಿರಿ.  ಆತ್ಮವಿಶ್ವಾಸದಿಂದ ಗೆಲುವಿದೆ

vijayavani

ಮೇಷ: ಕೆಲಸಗಳನ್ನೆಲ್ಲ ಮಾಡಿ ಮುಗಿಸಿದ ನಂತರದ ಸಮಾಧಾನ, ನೆಮ್ಮದಿಗಳು ನಿಮಗಿಂದು ಲಭ್ಯವಾಗಲಿವೆ. ಶುಭಸಂಖ್ಯೆ: 4

ವೃಷಭ: ಭಾಗ್ಯದ ವಿಚಾರ ಪ್ರತಿಯೊಬ್ಬನಿಗೂ ಬೇರೆ ಬೇರೆ. ಹೆಣಗಾಡುವುದು ಇದ್ದೇ ಇದೆ. ಗುರಿ ತಲುಪುತ್ತೀರಿ. ಶುಭಸಂಖ್ಯೆ: 9

ಮಿಥುನ: ಮುಖ್ಯವಾದ ವಿಚಾರಕ್ಕಾಗಿ ಪರದಾಟಗಳನ್ನು ಎದುರಿಸುತ್ತೀರಿ. ಆದರೂ ಧೈರ್ಯ ಇರಲಿ. ಒಳಿತಾಗಲಿದೆ. ಶುಭಸಂಖ್ಯೆ: 3

ಕಟಕ: ತಾಯಿ ದುರ್ಗಾಳನ್ನು ಆರಾಧಿಸುವುದರ ಮೂಲಕ ಆವಶ್ಯಕವಾದ ಶಕ್ತಿ ಉತ್ಸಾಹಗಳನ್ನು ಪಡೆಯಬಲ್ಲಿರಿ. ಶುಭಸಂಖ್ಯೆ: 6

ಸಿಂಹ: ನಿಮ್ಮದಾದ ಒಂದಿಷ್ಟು ಪ್ರಯತ್ನಗಳ ದಾರಿಯಲ್ಲಿ ಹಣವನ್ನು ಬಳಕೆ ಮಾಡಿ. ಆದರೆ ತುಸು ಬಿಗಿ ಇರಲಿ. ಶುಭಸಂಖ್ಯೆ: 2

ಕನ್ಯಾ: ಮುಖದಲ್ಲಿ ನಿಸ್ತೇಜತೆ, ವೈಫಲ್ಯಗಳನ್ನು ತೋರಿಸಬೇಡಿ. ಛಲದಿಂದ ಮುನ್ನುಗ್ಗಿ. ದಾರಿ ಗೋಚರಿಸಲಿದೆ. ಶುಭಸಂಖ್ಯೆ: 8

ತುಲಾ: ಮಕ್ಕಳ ಬಗೆಗಿನ ವಿಚಾರದಲ್ಲಿ ಏಕಾಏಕಿ ಕೆಲವು ತೊಂದರೆಗಳು ಎದ್ದೇಳಬಹುದು. ಸ್ವಲ್ಪ ಎಚ್ಚರ ಇರಲಿ. ಶುಭಸಂಖ್ಯೆ: 5

ವೃಶ್ಚಿಕ: ನಿಮ್ಮದೇ ಆದ ಸಮಸ್ಯೆಗಳನ್ನು ಆಲಿಸಲು ಕೆಲವು ಹಿರಿಯರು ಸಿಗಲಿದ್ದಾರೆ. ಚಿಂತೆ ಬಿಟ್ಟು ನಿರಾಳರಾಗಿ. ಶುಭಸಂಖ್ಯೆ: 9

ಧನಸ್ಸು: ಹೇಗೋ, ಏನೋ, ಎಂತೋ ಎಂಬ ಭಯವಿದ್ದರೂ ನರಸಿಂಹನ ಅನುಗ್ರಹದಿಂದ ಎಲ್ಲ ಸುಸೂತ್ರವಾಗಲಿದೆ. ಶುಭಸಂಖ್ಯೆ: 3

ಮಕರ: ನಿಮಗೇ ತಿಳಿಯದ ರೀತಿಯಲ್ಲಿ ಮಕ್ಕಳ ಅಭ್ಯುದಯಕ್ಕೆ ದಾರಿಯೊಂದರ ನಿರ್ಮಾಣ ಸಾಧ್ಯವಾಗಲಿದೆ. ಶುಭಸಂಖ್ಯೆ: 5

ಕುಂಭ: ತಾವೇ ಬುದ್ಧಿವಂತರು ಎಂದು ಭಾವಿಸಿಕೊಂಡು ಬಂದವರ ಜತೆಗೆ ಚರ್ಚೆಗೆ ಹೋಗದಿರಿ. ಮೌನವೇ ಸೂಕ್ತ. ಶುಭಸಂಖ್ಯೆ: 7

ಮೀನ: ಎಲ್ಲೋ ಒಂದೆಡೆ ನಿಮ್ಮನ್ನು ನೀವು ಕುಬ್ಜರು ಎಂದು ಗುರುತಿಸಿಕೊಳ್ಳುವಿರಿ. ಆತ್ಮವಿಶ್ವಾಸದಿಂದ ಗೆಲುವಿದೆ. ಶುಭಸಂಖ್ಯೆ: 1