ಜ್ಯೋತಿಷ್ಯ

ಈ ರಾಶಿಯ ಸಾಂಸ್ಕೃತಿಕ ಕ್ಷೇತ್ರದ ಜನರಿಗೆ ಇಂದು ಹೆಚ್ಚಿನ ಅವಕಾಶ ಲಭಿಸಲಿದೆ

vinaymk1969

ಮೇಷ: ಯಾವುದೇ ವ್ಯರ್ಥ ಚರ್ಚೆ ಮುಂದುವರಿಸಲು ಹೋಗಬೇಡಿ. ನಿಮ್ಮ ಸೋಲು ಇತರರಿಗೂ ದೊಡ್ಡ ಪಾಠವನ್ನು ಕಲಿಸಿದೆ. ಶುಭಸಂಖ್ಯೆ: 1

ವೃಷಭ: ಎಲ್ಲ ರೀತಿಯ ಬಂಧುಗಳೂ ಇರುತ್ತಾರೆ. ಕೆಲವು ಉತ್ತಮರ ನೆರವಿನಿಂದ ಅನೇಕ ರೀತಿಯ ಲಾಭಗಳಾಗಲಿವೆ. ಶುಭಸಂಖ್ಯೆ: 5

ಮಿಥುನ: ಕುಟುಂಬದಲ್ಲಿ ಸೌಹಾರ್ದದ ವಾತಾವರಣ ಇರಲಿದೆ. ಕುಲದೇವರನ್ನು ಭಕ್ತಿಯಿಂದ ಸ್ಮರಿಸಿ. ಆರೋಗ್ಯದ ಬಗ್ಗೆ ಎಚ್ಚರ. ಶುಭಸಂಖ್ಯೆ: 9

ಕಟಕ: ಸಾಂಸ್ಕೃತಿಕ ಕ್ಷೇತ್ರದ ಜನರಿಗೆ ಹೆಚ್ಚಿನ ಅವಕಾಶ ಲಭ್ಯ. ನಿಮ್ಮ ಬಹುದಿನಗಳ ಬೇಡಿಕೆ ಬೇಗ ಈಡೇರಲಿದೆ. ಶುಭಸಂಖ್ಯೆ: 2

ಸಿಂಹ: ಮರದ ವ್ಯಾಪಾರ, ಪೀಠೋಪಕರಣಗಳ ವ್ಯವಹಾರ ನಡೆಸುವವರಿಗೆ ಎಚ್ಚರಿಕೆಯಲ್ಲಿ ಇರಬೇಕಾದ ದಿನವಿದು. ಶುಭಸಂಖ್ಯೆ: 6

ಕನ್ಯಾ: ಸ್ವಾಭಿಮಾನಿಯಾದ ನಿಮ್ಮ ಕೆಲಸಕ್ಕೆ ತಕ್ಕ ಸಂಬಳ ಸಿಗುತ್ತಿಲ್ಲ ಎನಿಸಿದರೆ ಮುಖ್ಯಸ್ಥರ ಜತೆ ಮಾತಾಡಿ. ಶುಭಸಂಖ್ಯೆ: 1

ತುಲಾ: ಆರೋಗ್ಯವೇ ಭಾಗ್ಯ ಎಂಬ ವಿಷಯ ತಿಳಿದಿರಲಿ. ತೀವ್ರ ಆಯಾಸ ಉಂಟುಮಾಡುವ ಕಾರ್ಯಗಳನ್ನು ಮಾಡದಿರಿ. ಶುಭಸಂಖ್ಯೆ: 3

ವೃಶ್ಚಿಕ: ಶ್ರೀ ವೆಂಕಟೇಶ್ವರನನ್ನು ಭಕ್ತಿಯಿಂದ ಸ್ತುತಿಸಿ. ವಿಳಂಬಗೊಂಡ ಕಾರ್ಯಗಳು ಶೀಘ್ರ ಮುನ್ನಡೆ ಹೊಂದಲಿವೆ. ಶುಭಸಂಖ್ಯೆ: 7

ಧನಸ್ಸು: ನಿಮ್ಮ ಕೆಲಸದ ಬಗ್ಗೆ ಬಾಸ್ ತೃಪ್ತರಾಗಿದ್ದಾರೆ. ಮುಂದಿನ ಭವಿಷ್ಯಕ್ಕೆ ಇದು ಸುಭದ್ರ ಬುನಾದಿಯಾಗುವುದು. ಶುಭಸಂಖ್ಯೆ: 5

ಮಕರ:  ನಿಮ್ಮ ದೌರ್ಬಲ್ಯಗಳನ್ನು ಮೀರಲು ಪ್ರಯತ್ನ ಮಾಡಿ. ಹಿರಿಯರಿಂದ ಸಹಾಯ ಸಹಕಾರ ದೊರೆಯಲಿದೆ. ಶುಭಸಂಖ್ಯೆ: 4

ಕುಂಭ: ಬೌದ್ಧಿಕ ಸಾಮರ್ಥ್ಯದಲ್ಲಿ ನಿಮ್ಮನ್ನು ಮೀರಿಸುವವರು ಇಲ್ಲ. ಒಂದೇ ಒಂದು ಅನಗತ್ಯ ಮಾತನ್ನೂ ಆಡದಿರಿ. ಶುಭಸಂಖ್ಯೆ: 8

ಮೀನ: ಸಾರ್ವಜನಿಕ ಜೀವನದಲ್ಲಿ ಮೆಚ್ಚುಗೆ ಗಳಿಸಿದ್ದೀರಿ. ಮಾತಿನ ಚಾತುರ್ಯವೇ ನಿಮ್ಮ ಆಸ್ತಿ. ಮಹಾವಿಷ್ಣುವನ್ನು ಸ್ತುತಿಸಿ. ಶುಭಸಂಖ್ಯೆ: 9