ಮೇಷ: ಹೊಸ ಉತ್ಸಾಹದಿಂದ ಕಚೇರಿ ಕೆಲಸ ನಿರ್ವಹಿಸುವಿರಿ. ಕುಟುಂಬದಲ್ಲಿ ಆಸ್ತಿ ವಿಚಾರದಲ್ಲಿ ಚಿಕ್ಕಪುಟ್ಟ ಮನಸ್ತಾಪ ಉಂಟಾಗಲಿದೆ. ಶುಭಸಂಖ್ಯೆ:1
ವೃಷಭ: ಸಣ್ಣಪುಟ್ಟ ವ್ಯವಹಾರದಲ್ಲಿ ಲಾಭ. ಹೊಸ ಯೋಜನೆಗಳು ಯಶಸ್ವಿಯಾಗಲಿದೆ. ಸ್ನೇಹಿತರ ಸಹಕಾರದಿಂದ ಸಾಲ ಸಿಗುತ್ತದೆ. ಶುಭಸಂಖ್ಯೆ:5
ಮಿಥುನ: ದೂರ ಪ್ರಯಾಣ ಸಾಧ್ಯತೆ. ನಿಮ್ಮ ಕಾರ್ಯ ಚತುರತೆಗೆ ಅಧಿಕಾರಿಗಳ ಮೆಚ್ಚುಗೆ ದೊರೆಯುತ್ತದೆ. ಆರೋಗ್ಯದ ಕಡೆ ಕಾಳಜಿ ಇರಲಿ. ಶುಭಸಂಖ್ಯೆ: 8
ಕಟಕ: ಸಿದ್ಧಪಡಿಸಿದ ಆಹಾರದ ಮಾರಾಟದಲ್ಲಿ ಲಾಭ. ಪ್ರಮುಖ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ. ಹೊಸ ಅವಕಾಶ ಬಂದೀತು. ಶುಭಸಂಖ್ಯೆ:4
ಸಿಂಹ: ಹೊಸ ಪರಿಚಯಗಳು ಲಾಭದಾಯಕವಾಗಲಿದೆ. ಮಾನಸಿಕ ಶಾಂತಿ ದೊರೆಯುತ್ತದೆ. ಕುಲದೇವರನ್ನು ಭಕ್ತಿಯಿಂದ ಭಜಿಸಿ. ಶುಭಸಂಖ್ಯೆ:8
ಕನ್ಯಾ: ಯೋಜನೆಗಳನ್ನು ಜಾಗರೂಕತೆಯಿಂದ ನಿರ್ವಹಿಸಿ. ಮಾಡುವ ಪ್ರಯತ್ನದಲ್ಲಿ ಫಲ ಖಚಿತ. ಬಂಧುಗಳಿಂದ ಸಂತೋಷದ ಸುದ್ದಿ. ಶುಭಸಂಖ್ಯೆ:2
ತುಲಾ: ಹೊಸ ವಿಷಯ ಕಲಿಯುವ ಆಸಕ್ತಿ ಹೆಚ್ಚುತ್ತದೆ. ಹಣದ ವಿಚಾರದಲ್ಲಿ ದುಡುಕಬೇಡಿ. ಪಾಲುದಾರಿಕೆ ವ್ಯವಹಾರದಲ್ಲಿ ನಿರೀಕ್ಷಿತ ಲಾಭ. ಶುಭಸಂಖ್ಯೆ: 6.
ವೃಶ್ಚಿಕ: ಕುಟುಂಬ ಜೀವನದಲ್ಲಿ ಅನಿರೀಕ್ಷಿತ ತಿರುವು. ಗೃಹ ನಿರ್ವಣಕ್ಕೆ ಉತ್ತಮ ದಿನ. ಉದರ ಸಂಬಂಧಿ ರೋಗ ಸುಧಾರಣೆಯಾಗಲಿದೆ. ಶುಭಸಂಖ್ಯೆ: 3
ಧನಸ್ಸು: ಮಹತ್ವದ ನಿರ್ಧಾರಕ್ಕೆ ಹಿರಿಯರ ಸಲಹೆ ಅವಶ್ಯಕ. ಪ್ರಯತ್ನದಲ್ಲಿ ಸ್ವಲ್ಪ ವಿಳಂಬ. ಧಾರ್ವಿುಕ ಕಾರ್ಯದಲ್ಲಿ ತೊಡಗಿಸಿಕೊಳ್ಳಿ. ಶುಭಸಂಖ್ಯೆ:6.
ಮಕರ: ಪ್ರತಿಭೆಗೆ ಸೂಕ್ತ ವೇದಿಕೆ ಸಿಗಲಿದೆ. ಸ್ವಂತ ಉದ್ಯಮದವರಿಗೆ ಕೆಲಸದ ಒತ್ತಡ ಕಡಿಮೆಯಾಗುತ್ತದೆ. ಹಣಕಾಸಿನ ಸ್ಥಿತಿ ಸುಧಾರಣೆ. ಶುಭಸಂಖ್ಯೆ: 5
ಕುಂಭ: ಪ್ರೇಮವಿವಾಹಕ್ಕೆ ಸ್ನೇಹಿತರಿಂದ ಬೆಂಬಲ. ಹೊಸ ವ್ಯವಹಾರದಿಂದ ಹೆಚ್ಚಿನ ಆದಾಯ. ಸಂಗಾತಿಯ ಆರೋಗ್ಯ ಸುಧಾರಣೆ. ಶುಭಸಂಖ್ಯೆ:4
ಮೀನ: ಬಹುದಿನಗಳ ನಂತರ ಮನೆಯಲ್ಲಿ ಸಂತಸದ ಸುದ್ದಿ. ಧಾರ್ವಿುಕ ಕಾರ್ಯದಲ್ಲಿ ಭಾಗಿ. ವಿದ್ಯುತ್ ಸಂಬಂಧಿ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 9