ಮೇಷ: ಸಹೋದ್ಯೋಗಿಗಳು ಕೂಡ ನಿಮ್ಮ ಪಾಲಿಗೆ ಮಿತ್ರರಾಗಿ ಸಹಕಾರ ನೀಡಲಿದ್ದಾರೆ. ಒತ್ತಡ ದೂರ ಮಾಡಿಕೊಂಡರೆ ಕ್ಷೇಮ. ಶುಭಸಂಖ್ಯೆ: 1
ವೃಷಭ: ಜಟಿಲ ವಿಷಯಗಳೆಲ್ಲ ಮಿಂಚಿನ ಹಾಗೆ ಮಾಯವಾಗಲಿವೆ. ಶ್ರೀ ಲಕ್ಷ್ಮೀನರಸಿಂಹ ಸ್ತೋತ್ರವನ್ನು ಭಕ್ತಿಯಿಂದ ಪಠಿಸಿ. ಶುಭಸಂಖ್ಯೆ: 5
ಮಿಥುನ: ಆರೋಗ್ಯದ ಏರುಪೇರುಗಳನ್ನು ಕಡೆಗಣಿಸದಿರಿ. ತಜ್ಞರಾದ ವೈದ್ಯರಿಂದ ಸರಿಯಾದ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಿ. ಶುಭಸಂಖ್ಯೆ: 9
ಕಟಕ: ಪ್ರೀತಿ ಪ್ರಣಯದ ಭ್ರಾಂತಿಯು ಸ್ವಲ್ಪಮಟ್ಟಿಗೆ ತೊಂದರೆಯನ್ನೇ ತಂದೀತು. ಮದನಾರಿಯಾದ ಪರಮೇಶ್ವರನನ್ನು ಪ್ರಾರ್ಥಿಸಿ. ಶುಭಸಂಖ್ಯೆ: 4
ಸಿಂಹ: ವಿರೋಧಿಗಳನ್ನು ಜಾಣತನದಿಂದಲೇ ನಿಗ್ರಹ ಮಾಡಿ. ನೀವೂ ಕೂಗಾಡಿದರೆ ಸಮಸ್ಯೆಗಳಿಗೆ ದಾರಿ ಸೃಷ್ಟಿಯಾಗಬಹುದು. ಶುಭಸಂಖ್ಯೆ: 7
ಕನ್ಯಾ: ಮತ್ತೆ ಮತ್ತೆ ಅದೃಷ್ಟದ ಕುರಿತಾಗಿ ಹುಡುಕಾಟ ನಡೆಸುತ್ತಿದ್ದೀರಿ. ಈ ಕಾತರದಿಂದ ದೂರವಾದರೆ ಒಳಿತಾದುದನ್ನು ಪಡೆಯಲಿದ್ದಿರಿ. ಶುಭಸಂಖ್ಯೆ: 3
ತುಲಾ: ವಿವಾಹಾಪೇಕ್ಷಿಗಳಿಗೆ ಸ್ವಲ್ಪ ಮಟ್ಟಿಗೆ ಚಿಂತೆಯ ಮೋಡ ಕವಿಯಬಹುದು. ಶ್ರೀ ಸ್ವಯಂವರ ಪಾರ್ವತಿಯನ್ನು ಆರಾಧಿಸಿ. ಶುಭಸಂಖ್ಯೆ: 8
ವೃಶ್ಚಿಕ: ಗೆಳೆಯರೆನಿಸಿದವರು ನಿಮ್ಮ ನೆರವಿಗೆ ಸಿಗುವುದು ವಿರಳ. ಆದರೆ ಆ ಬಗೆಗೆ ಬೇಸರಿಸುವುದು ಬೇಡ. ತಾಳ್ಮೆಯೇ ಧ್ಯೇಯವಾಗಿರಲಿ. ಶುಭಸಂಖ್ಯೆ: 2
ಧನುಸ್ಸು: ಹಾಸ್ಯಾಸ್ಪದ ತೀರ್ಮಾನಗಳಿಂದ ತಮಾಷೆಗೆ ಗುರಿಯಾದೀರಿ. ನಿಮ್ಮತ್ತ ನೋಡಿ ನಗುವವರಿಗೆ ಅವಕಾಶವನ್ನು ಮಾಡಿಕೊಡದಿರಿ. ಶುಭಸಂಖ್ಯೆ: 6
ಮಕರ: ಹೊಸ ಸಾಲಗಳಿಗೆ ಪ್ರಯತ್ನಿಸದಿರಿ. ಬಂಡವಾಳದ ವಿಚಾರದಲ್ಲಿ ತುಸು ಜಾಣತನವನ್ನು ತೋರಿಸಿದರೆ ಉತ್ತಮವಾದ ದಾರಿಗಳು ಲಭ್ಯ. ಶುಭಸಂಖ್ಯೆ: 1
ಕುಂಭ: ನಿಮ್ಮ ಎಲ್ಲ ಬಗೆಯ ಕೆಲಸಕಾರ್ಯಗಳಲ್ಲಿ ವಿಜಯವನ್ನು ಸಾಧಿಸುವಿರಿ. ಮನದಲ್ಲಿಯೇ ಮಹಾವಿಷ್ಣುವನ್ನು ಧ್ಯಾನಿಸುತ್ತಿರಿ. ಶುಭಸಂಖ್ಯೆ: 9
ಮೀನ: ಮಕ್ಕಳ ಸಮಸ್ಯೆಗಳನ್ನು ಖಂಡಿತ ನಿರ್ಲಕ್ಷಿಸದಿರಿ. ಓದಿನ ಕುರಿತ ಒತ್ತಡ ಅವರ ಮನೋವೇದನೆಗೆ ಕಾರಣವಾದೀತು. ತಾಳ್ಮೆ ವಹಿಸಿ. ಶುಭಸಂಖ್ಯೆ: 5