ಜ್ಯೋತಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗೆ ದೂರದ ಪ್ರಯಾಣ ಕೊನೆಯ ಕ್ಷಣದಲ್ಲಿ ರದ್ದಾಗಬಹುದು. ಏನೇ ಆದರೂ ಮಾನಸಿಕ ತಳಮಳ ಬೇಡ.

ರಮೇಶ್​ ಕುಮಾರ್​​ ಬಿ ಎಡಮೋಳೆ

ಮೇಷ: ಯಾವುದೂ ಕಷ್ಟ ಎಂದು ಬರುವುದಿಲ್ಲ. ಒಂದು ಪಕ್ಷ ಬಂದರೂ ಸಹಾಯಕ್ಕೆ ಜನ ಇದ್ದಾರೆ. ಧೈರ್ಯವಾಗಿರಿ. ಅದೃಷ್ಟಸಂಖ್ಯೆ: 1

ವೃಷಭ: ಇನ್ನೊಬ್ಬರೊಂದಿಗೆ ಸೇರಿ ಮಾಡುತ್ತಿರುವ ವ್ಯವಹಾರಗಳಲ್ಲಿ ಲಾಭ. ಮನೆಯಲ್ಲಿನ ಒಗ್ಗಟ್ಟು ಸಂತಸ ನೀಡುತ್ತದೆ. ಅದೃಷ್ಟಸಂಖ್ಯೆ: 7

ಮಿಥುನ: ಹಿರಿಯರು ನಿಮ್ಮ ಪರವಾಗಿ ಸಹಾಯಕ್ಕೆ ಬರುತ್ತಾರೆ. ಗಣಪತಿಯ ಆರಾಧನೆ ಬಹಳ ಸಹಕಾರಿಯಾಗಲಿದೆ. ಅದೃಷ್ಟಸಂಖ್ಯೆ: 9

ಕಟಕ: ದೂರದ ಪ್ರಯಾಣವೊಂದು ಕೊನೆಯ ಕ್ಷಣದಲ್ಲಿ ರದ್ದಾಗಬಹುದು. ಏನೇ ಆದರೂ ಮಾನಸಿಕ ತಳಮಳ ಬೇಡ. ಅದೃಷ್ಟಸಂಖ್ಯೆ: 4

ಸಿಂಹ: ನಿಮ್ಮ ಮಾತುಗಳು ಸೂಜಿಯಂತೆ ಚುಚ್ಚುತ್ತವೆ. ಆದುದರಿಂದ ಮೌನವಾಗಿದ್ದರೆ ಅತ್ಯಂತ ಶುಭ ಎನಿಸುತ್ತಿದೆ. ಅದೃಷ್ಟಸಂಖ್ಯೆ: 5

ಕನ್ಯಾ: ಯಾವುದೇ ಕೆಲಸಕಾರ್ಯಗಳನ್ನು ಕೂಡ ಸ್ವಲ್ಪವೂ ಬೇಸರ ಮಾಡಿಕೊಳ್ಳದೆ ಬಹಳ ಪ್ರೀತಿಯಿಂದ ಮಾಡುತ್ತೀರಿ. ಅದೃಷ್ಟಸಂಖ್ಯೆ: 7

ತುಲಾ: ವ್ಯಾಪಾರಿಗಳಿಗೆ ಲಾಭದ ದಿನ. ಆದರೆ ಲಾಭ ಹಣದ ರೂಪದಲ್ಲಿ ಕೈ ಸೇರಲು ಮಾತ್ರ ಸ್ವಲ್ಪ ಕಾಲ ಕಾಯಬೇಕು. ಅದೃಷ್ಟಸಂಖ್ಯೆ: 6

ವೃಶ್ಚಿಕ: ಯಾರನ್ನೂ ಅತಿಯಾಗಿ ನಂಬಿ ದುಡುಕಿ ಯಾವುದೇ ಹೂಡಿಕೆ ಮಾಡಬೇಡಿ. ನಿಮಗಿಂತ ಶತ್ರುಗಳ ಹೆಚ್ಚು. ಅದೃಷ್ಟಸಂಖ್ಯೆ: 2

ಧನಸ್ಸು: ನಿಮ್ಮ ಮಾತಿನ ಚಾಕಚಕ್ಯತೆ ಬಳಸಿ ಹಣವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಅದು ವ್ಯರ್ಥವಾಗಬಹುದು. ಅದೃಷ್ಟಸಂಖ್ಯೆ: 1

ಮಕರ: ಚಿಂತೆಯ ಅಗತ್ಯ ಇಲ್ಲ ಎಂಬ ಮನಃಸ್ಥಿತಿಯಲ್ಲಿರುತ್ತೀರಿ. ಮೇಲಿಂದ ಮೇಲೆ ಶುಭ ಸುದ್ದಿಗಳೇ ಬಂದು ಸಂತಸ. ಅದೃಷ್ಟಸಂಖ್ಯೆ: 3

ಕುಂಭ: ವ್ಯಾಪಾರಿಗಳಿಗೆ ಸ್ವಲ್ಪ ನಷ್ಟ. ಆದ್ದರಿಂದ ಎಚ್ಚರ ವಹಿಸಿ. ಕಣ್ಣಿಗೆ ಕಾಣುವ ವಸ್ತು ಕೈಗೆಟುಕದೆ ಒದ್ದಾಟವಾದೀತು. ಅದೃಷ್ಟಸಂಖ್ಯೆ: 4

ಮೀನ: ನೆನಪಿನ ಶಕ್ತಿಯ ಮೇಲೆ ಜಾಸ್ತಿ ಒತ್ತಡ ಹಾಕಿ ಎಲ್ಲ ನೆನಪು ಮಾಡಿಕೊಂಡು ಕೆಲಸ ಮುಗಿಸಬೇಕಾಗಬಹುದು. ಅದೃಷ್ಟಸಂಖ್ಯೆ: 2