ಮೇಷ: ಕೈಗೆಟುಕದ ಕಾರ್ಯವೊಂದು ನಿಮ್ಮ ಪ್ರಯತ್ನದಿಂದ ಥಟ್ಟನೆ ಸಿದ್ಧಿಸಬಹುದು. ದುರ್ಗಾ ಸ್ತೋತ್ರವನ್ನು ಪಠಿಸಿ. ಶುಭಸಂಖ್ಯೆ: 9
ವೃಷಭ: ಸಂಗಾತಿಯೊಡನೆ ಸ್ನೇಹದಿಂದ ವರ್ತಿಸಿದರೆ ನಿಮ್ಮ ಕಾರ್ಯಕ್ಕೆ ಬೆಂಬಲ ನೀಡವರು. ಆರೋಗ್ಯದತ್ತ ಗಮನವಿರಲಿ. ಶುಭಸಂಖ್ಯೆ: 1
ಮಿಥುನ: ಹಣಕಾಸು ವ್ಯವಹಾರದಲ್ಲಿ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ ಸಹಿ ಮಾಡಿ. ಇಲ್ಲವಾದಲ್ಲಿ ತೊಂದರೆಯಾದೀತು. ಶುಭಸಂಖ್ಯೆ: 5
ಕಟಕ: ಸಂಚರಿಸುವ ಮೂಲಕ ಜನರಿಗೆ ನಿಮ್ಮ ವಿಚಾರಗಳನ್ನು ತಿಳಿಸುವಿರಿ. ಆರ್ಥಿಕ ಸ್ಥಿತಿ ಕ್ರಮೇಣ ಉತ್ತಮಗೊಳ್ಳಲಿದೆ. ಶುಭಸಂಖ್ಯೆ: 7
ಸಿಂಹ: ನಿಮ್ಮ ಭಾವನೆಗಳಿಗೆ ಮಕ್ಕಳು ಸ್ಪಂದಿಸದೆ ಇರುವುದು ಬೇಸರವನ್ನುಂಟು ಮಾಡುತ್ತದೆ. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 3
ಕನ್ಯಾ: ಮನೆಯಲ್ಲಿ ಅತಿಯಾದ ಬಿಗುವನ್ನು ಮಾಡಿದರೆ ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಕಾಣಲಾರರು. ಶುಭಸಂಖ್ಯೆ: 6
ಇದನ್ನೂ ಓದಿ: ಲಾಕ್ಡೌನ್ನಲ್ಲಿ ‘ಸಿಂಗಲ್ಸ್’ ಕಷ್ಟಕ್ಕೆ ಸ್ಪಂದಿಸಿದೆ ಈ ಸರ್ಕಾರ; ಸೆಕ್ಸ್ಗೆ ಸಂಗಾತಿ ಹುಡುಕಿಕೊಳ್ಳಲು ಸಲಹೆ
ತುಲಾ: ರಿಯಲ್ ಎಸ್ಟೇಟ್ನಲ್ಲಿ ಹಣ ಹೂಡುವ ಮುನ್ನ ಎರಡೆರಡು ಬಾರಿ ಚಿಂತಿಸಿ. ಇಲ್ಲವಾದರೆ ಸಮಸ್ಯೆಗೆ ಸಿಲುಕುವಿರಿ. ಶುಭಸಂಖ್ಯೆ: 2
ವೃಶ್ಚಿಕ: ವಿವಾದಗಳನ್ನು ದಾಟಿ ಹೊರಕ್ಕೆ ಬಂದಿರುವಿರಿ. ಹಲವಾರು ಕಾರ್ಯಕ್ರಮಗಳು ನಿಮ್ಮ ಪ್ರತಿಭೆಯನ್ನು ಬೆಳಗಿಸಲಿವೆ. ಶುಭಸಂಖ್ಯೆ: 4
ಧನಸ್ಸು: ಮನೋಭಿಲಾಷೆಗಳು ಪೂರ್ಣಗೊಳ್ಳುವುದಕ್ಕೆ ಹಲವು ಅಡೆತಡೆಗಳು ಎದುರಾಗುತ್ತವೆ. ಮಾರುತಿ ಸ್ತೋತ್ರ ಪಠಿಸಿ. ಶುಭಸಂಖ್ಯೆ: 8
ಮಕರ: ತುಸು ಎಚ್ಚರಿಕೆಯಿಂದಲೇ ವ್ಯಾಪಾರ ವ್ಯವಹಾರ ಗಳನ್ನು ನಡೆಸಿ. ನಗದು ವ್ಯವಹಾರವನ್ನು ಮಾಡದಿದ್ದರೆ ಉತ್ತಮ. ಶುಭಸಂಖ್ಯೆ: 1
ಕುಂಭ: ಹಲವು ಅವಕಾಶಗಳಿಂದ ವರ್ಚಸ್ಸು ಬೆಳೆಸಿ ಕೊಳ್ಳುವಿರಿ. ಸೂರ್ಯನನ್ನು ಆರಾಧಿಸಿ. ಆರೋಗ್ಯ ಸುಧಾರಣೆಯಾಗಲಿದೆ. ಶುಭಸಂಖ್ಯೆ: 9
ಮೀನ: ಖರ್ಚಿಗಾಗಿ ಅನೇಕ ಹೊಸ ದಾರಿಗಳು ತೆರೆದುಕೊಳ್ಳುವುದರಿಂದ ಅನಗತ್ಯ ವಸ್ತುಗಳನ್ನು ಖರೀದಿಸದಿರುವುದು ಕ್ಷೇಮಕರ. ಶುಭಸಂಖ್ಯೆ: 5