ಜ್ಯೋತಿಷ್ಯ

ಈ ರಾಶಿಯವರು ನಿಂದನೆಗೆ ಒಳಗಾಗುವ ಅಪಾಯ ಇದೆ. ಎಚ್ಚರ

kumarvrl

ಮೇಷ: ಎಷ್ಟೇ ಹತ್ತಿರದವರಾದರೂ ಕೆಲವು ರಹಸ್ಯ ವಿಚಾರಗಳನ್ನು ಬಾಯಿ ಬಿಡಬಾರದು ಎಂದು ನಿಮಗೆ ಅನಿಸುತ್ತದೆ. ಅದೃಷ್ಟಸಂಖ್ಯೆ: 4

ವೃಷಭ: ಶುಚಿತ್ವಕ್ಕೆ ಆದ್ಯತೆ ಕೊಡದಿರುವುದು ಮುಂದೆ ದೊಡ್ಡ ಸಮಸ್ಯೆ ಇಲ್ಲವೇ ಆರೋಗ್ಯಬಾಧೆಗೆ ಕಾರಣವಾಗಲಿದೆ. ಅದೃಷ್ಟಸಂಖ್ಯೆ: 7

ಮಿಥುನ: ನಿಮ್ಮಿಂದ ಮುಖ್ಯ ವಿಚಾರ ಮುಚ್ಚಿಟ್ಟಿದ್ದರೂ ಅದರಿಂದ ಬೇಸರವಾಗಿಲ್ಲ ಎಂದು ತೋರಿಸಿಕೊಳ್ಳುವಿರಿ. ಅದೃಷ್ಟಸಂಖ್ಯೆ: 3

ಕಟಕ: ಬಹಳ ದಿನಗಳಿಂದ ಬಳಸದ ಕಾರಣ ನಿಮ್ಮ ಬಹು ಅಮೂಲ್ಯ ವಸ್ತು ಹಾಳಾಗಿರುವುದು ಗಮನಕ್ಕೆ ಬರುತ್ತದೆ. ಅದೃಷ್ಟಸಂಖ್ಯೆ: 1

ಸಿಂಹ: ಸರಿಯಾಗಿ ಮಾತಾಡಲಾಗದೆ, ಹೇಳಬೇಕಾದ ವಿಚಾರವನ್ನು ಹೇಗೆ ಹೇಳಬೇಕು ಎಂದು ತಿಳಿಯದೆ ಪರಿತಪಿಸುವಿರಿ. ಅದೃಷ್ಟಸಂಖ್ಯೆ: 9

ಕನ್ಯಾ:  ಹಲವಾರು ಕಾರಣಗಳಿಂದ ನಿಮಗೆ ವಹಿಸಿದ ಕೆಲಸಗಳನ್ನು ಮಾಡಿ ಮುಗಿಸದೆ ಮತ್ತೆ ನಿಂದನೆಗೆ ಒಳಗಾಗುತ್ತೀರಿ. ಅದೃಷ್ಟಸಂಖ್ಯೆ: 3

ತುಲಾ: ನಿಮ್ಮ ಬುದ್ಧಿವಂತಿಕೆಯನ್ನು ಬಳಸಿ ನಿಮ್ಮ ಆಪ್ತರನ್ನು ಅಥವಾ ಸಹೋದರನ್ನು ಉಳಿಸಬೇಕಾಗಿ ಬರುತ್ತದೆ. ಅದೃಷ್ಟಸಂಖ್ಯೆ: 5

ವೃಶ್ಚಿಕ: ಇತರರಿಗೆ ನಿಮ್ಮ ಸಾಮರ್ಥ್ಯದ ಮೇಲೆ ಸಂಶಯ ಬಂದರೂ ನೀವು ಧೃತಿಗೆಡದೆ ನಿರ್ಧಾರಗಳಿಗೆ ಬದ್ಧವಾಗಿರಿ. ಅದೃಷ್ಟಸಂಖ್ಯೆ: 2

ಧನಸ್ಸು: ಸಮಯವಿದ್ದ ಕಾರಣ ನಿಧಾನಕ್ಕೆ ಮಾಡೋಣ ಎಂದುಕೊಂಡಿದ್ದ ಕೆಲಸ ಸಮಯದ ಕೊರತೆಯಿಂದ ನಿಲ್ಲುತ್ತದೆ. ಅದೃಷ್ಟಸಂಖ್ಯೆ: 6

ಮಕರ: ಕೈಗೆ ಏಟು ಮಾಡಿಕೊಳ್ಳುವ ಸಾಧ್ಯತೆ ಜಾಸ್ತಿ. ಹೀಗಾಗಿ ಕೆಲಸ ಮಾಡುವಾಗ ಜಾಗ್ರತೆ ವಹಿಸುವುದು ಉತ್ತಮ. ಅದೃಷ್ಟಸಂಖ್ಯೆ: 1

ಕುಂಭ: ನಿಮ್ಮಿಂದ ವೃಥಾ ಖರ್ಚು ಉಂಟಾಗುವ ಸಾಧ್ಯತೆ ಇರುವುದರಿಂದ ಸಂಗಾತಿಯ ಜತೆ ಮನಸ್ತಾಪವಾದೀತು. ಅದೃಷ್ಟಸಂಖ್ಯೆ: 5

ಮೀನ: ದೊಡ್ಡ ದೊಡ್ಡ ಯೋಚನೆಗಳ ಮಧ್ಯೆ ಹೆಚ್ಚಿನ ಲಾಭ ನೀಡುವ ಚಿಕ್ಕಪುಟ್ಟ ವ್ಯವಹಾರ ಗಮನಕ್ಕೇ ಬರುವುದಿಲ್ಲ. ಅದೃಷ್ಟಸಂಖ್ಯೆ: 4