ಮೇಷ: ಮನದ ತುಂಬ ಗೊಂದಲಗಳು ತುಂಬಿದ್ದರೆ ನಿಮ್ಮ ಕಷ್ಟಗಳನ್ನು ಹಿರಿಯರ ಬಳಿಯಲ್ಲಿ ಹಂಚಿಕೊಳ್ಳಿ. ನೆಮ್ಮದಿ ಲಭ್ಯ. ಶುಭಸಂಖ್ಯೆ: 9
ವೃಷಭ: ಸಂಗಾತಿಯಿಂದ ಸಂತಸದ ವಾರ್ತೆಯನ್ನು ಕೇಳುವಿರಿ. ರಾಮರಕ್ಷಾ ಸ್ತೋತ್ರ ಪಠಿಸಿ. ಇದರಿಂದ ಒಳಿತಾಗಲಿದೆ. ಶುಭಸಂಖ್ಯೆ: 1
ಮಿಥುನ: ನಿಮ್ಮ ಪ್ರತಿಭೆಯನ್ನು ಗುರುತಿಸುವ ಜನರನ್ನು ಭೇಟಿ ಮಾಡುತ್ತೀರಿ. ಏನೂ ಬೇಡದಿರಿ. ಸಹಜ ಅವಕಾಶಗಳೇ ಲಭ್ಯ. ಶುಭಸಂಖ್ಯೆ: 8
ಕಟಕ: ದಿನದ ಹೆಚ್ಚಿನ ಸಮಯ ಕಿರಿಕಿರಿಯಿಂದಲೇ ಕಳೆಯಬಹುದು. ಆತ್ಮವಿಶ್ವಾಸದಿಂದ ಉನ್ನತಿ ಸಾಧಿಸಲು ಸಾಧ್ಯವಾಗಲಿದೆ. ಶುಭಸಂಖ್ಯೆ: 2
ಸಿಂಹ: ನೀವು ಮುಂದೆ ಸಾಗಿದಷ್ಟೂ ದಾರಿ ಇದೆ.ನಿಮ್ಮ ಅದೃಷ್ಟವು ಭಾಗ್ಯದ ಹೆಬ್ಬಾಗಿಲನ್ನೇ ನಿಮಗೆ ತೆರೆದುಕೊಡಲಿದೆ. ಶುಭಸಂಖ್ಯೆ: 7
ಕನ್ಯಾ: ಹರಟೆ ಹೊಡೆಯುವುದೇ ಗುರಿಯಾಗಿ ಇರುವವರಿಂದ ದೂರವಿರಿ. ನಿಮ್ಮ ಮಾತುಗಳು ಕೂಡ ಮಿತವಾಗಿಯೇ ಇರಲಿ. ಶುಭಸಂಖ್ಯೆ: 3
ತುಲಾ: ಹಳೆಯ ವಿವಾದಕ್ಕೆ ಮುಕ್ತಿ ಸಿಗುವುದರ ಜತೆಗೆ ಲಾಭಕ್ಕೂ ದಾರಿ ತೆರೆದುಕೊಳ್ಳಲಿದೆ. ಲಕ್ಷ್ಮೀ ಸ್ತೋತ್ರವನ್ನು ಪಠಿಸಿ. ಶುಭಸಂಖ್ಯೆ: 6
ವೃಶ್ಚಿಕ: ಗುರಿಯನ್ನು ತಲುಪುವ ದಾರಿ ದೂರವಿದೆ ಎಂಬ ಹತಾಶೆ ಬೇಡ. ಚಿಂತೆಯನ್ನು ಬಿಟ್ಟು ಪ್ರಯತ್ನವನ್ನು ನಡೆಸುತ್ತಿರಿ. ಶುಭಸಂಖ್ಯೆ: 4
ಧನುಸ್ಸು: ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಿ. ಕುರುಕಲು ಆಹಾರ ಸೇವನೆ ಬೇಡವೇ ಬೇಡ. ತುಸು ವಿಶ್ರಾಂತಿಯನ್ನು ಪಡೆಯಿರಿ. ಶುಭಸಂಖ್ಯೆ: 9
ಮಕರ: ನಿಮ್ಮ ಸಂಕಲ್ಪಿತ ಕಾರ್ಯಗಳೆಲ್ಲ ಅದುಕೊಂಡಷ್ಟು ಸಲೀಸಾಗಿ ನೆರವೇರಲಾರವು. ಆದರೆ ಅವನ್ನು ಅರ್ಧಕ್ಕೇ ಬಿಟ್ಟುಬಿಡಬೇಡಿ. ಶುಭಸಂಖ್ಯೆ: 5
ಕುಂಭ:ಹೊಸ ವ್ಯವಹಾರದಲ್ಲಿ ಲಾಭ ಕಡಿಮೆ ಅನಿಸಿದರೂ ಹಣಕ್ಕಾಗಿ ಅಡ್ಡ ದಾರಿಗಳನ್ನು ಹುಡುಕದಿರಿ. ಸತ್ಯಕ್ಕೇ ಜಯ. ಶುಭಸಂಖ್ಯೆ: 2
ಮೀನ: ಕೆಲವರು ನಿಮ್ಮ ದಾರಿ ತಪ್ಪಿಸಬಹುದು. ಆ ಬಗ್ಗೆ ಎಚ್ಚರವಾಗಿರಿ. ನಿಮ್ಮ ಪ್ರಾಮಾಣಿಕ ನಡೆಗೆ ಯಶಸ್ಸು ಸಿಗಲಿದೆ. ಶುಭಸಂಖ್ಯೆ: 8