ಮೇಷ: ಮನಸ್ಸಿನ ಅಭಿಲಾಷೆಗಳು ಸಾಕಾರಗೊಳ್ಳಲಿವೆ. ಆದರೆ ನಿಮ್ಮ ಕ್ರಿಯಾಶೀಲ ಸಹಭಾಗಿತ್ವವೂ ಅತ್ಯಗತ್ಯವೇ ಆಗಿರುತ್ತದೆ. ಶುಭಸಂಖ್ಯೆ: 7
ವೃಷಭ: ಅಜೀರ್ಣದ ತೊಂದರೆ ಎದುರಾಗಬಹುದು. ಅನಾರೋಗ್ಯದ ಮಧ್ಯೆಯೂ ವ್ಯಾವಹಾರಿಕ ಲಾಭದಿಂದ ಸಂತಸಪಡುವಿರಿ. ಶುಭಸಂಖ್ಯೆ: 4
ಮಿಥುನ: ಆತ್ಮೀಯರಿಂದಲೇ ಕಿರುಕುಳವಿದೆ. ಕೆಲಸದಲ್ಲಿ ಬದಲಾವಣೆ ಉಂಟಾದೀತು. ಒಬ್ಬ ಹಿರಿಯ ಮಹಿಳೆ ನೆರವಾಗುವರು. ಶುಭಸಂಖ್ಯೆ: 1
ಕಟಕ: ಸಹೋದ್ಯೋಗಿಗಳು ಸಹಾಯ ಮಾಡಲಿದ್ದಾರೆ. ಸಂಬಂಧಗಳಲ್ಲಿ ಎಚ್ಚರ ವಹಿಸುವುದು ಅಗತ್ಯ. ಆತ್ಮವಿಶ್ವಾಸ ಕಳೆದುಕೊಳ್ಳದಿರಿ. ಶುಭಸಂಖ್ಯೆ: 2
ಸಿಂಹ: ರಾಜಕಾರಣಿಗಳಿಗೆ ಕಷ್ಟದಿಂದ ಯಶಸ್ಸು ಲಭ್ಯ. ಕಾರ್ವಿುಕ ವರ್ಗದವರಿಗೆ ಸಂಕಷ್ಟ. ಲಕ್ಷ್ಮೀನೃಸಿಂಹನನ್ನು ಸ್ತುತಿಸಿ. ಶುಭಸಂಖ್ಯೆ: 5
ಕನ್ಯಾ: ದುಡುಕಿನಿಂದ ಯಾವುದೇ ನಿರ್ಧಾರವನ್ನೂ ಕೈಗೊಳ್ಳಬೇಡಿ. ಸಣ್ಣ ಮಟ್ಟದ ವ್ಯಾಪಾರಿಗಳಿಗೆ ಹೆಚ್ಚೇ ಲಾಭ ನಿಶ್ಚಿತವಾಗಿದೆ. ಶುಭಸಂಖ್ಯೆ: 8
ತುಲಾ: ರಕ್ತದೊತ್ತಡ, ಮಧುಮೇಹವುಳ್ಳವರು ಎಚ್ಚರ ವಹಿಸಬೇಕು. ಆರೋಗ್ಯದ ಚೇತರಿಕೆಗೆ ಧನ್ವಂತರಿ ಸ್ತೋತ್ರವನ್ನು ಓದಿ. ಶುಭಸಂಖ್ಯೆ: 9
ವೃಶ್ಚಿಕ: ಹಳೆಯ ವಸ್ತುಗಳ ವಿಲೇವಾರಿ ಮಾಡುವವರಿಗೆ ಹೆಚ್ಚಿನದಾದ ಲಾಭವಿದೆ. ದೂರಪ್ರಯಾಣವನ್ನು ಮುಂದೂಡಿದರೆ ಕ್ಷೇಮವಿದೆ. ಶುಭಸಂಖ್ಯೆ: 6
ಧನುಸ್ಸು: ವೃತ್ತಿನಿಮಿತ್ತ ಪ್ರಯಾಣ ಮಾಡಬೇಕಾಗುತ್ತದೆ. ಬಾಳಸಂಗಾತಿಯ ಸಹಕಾರದಿಂದ ಕಾರ್ಯಗಳಲ್ಲಿ ಗೆಲುವಿದೆ. ಶುಭಸಂಖ್ಯೆ: 3
ಕುಂಭ: ಕಷ್ಟ - ಸುಖ ಎರಡನ್ನೂ ಸಮಾನವಾಗಿಯೇ ಸ್ವೀಕರಿಸಬೇಕಾಗುತ್ತದೆ. ವ್ಯವಹಾರದಲ್ಲಿ ಸ್ವಲ್ಪ ಮಟ್ಟಿನ ಲಾಭವಿದೆ. ಶುಭಸಂಖ್ಯೆ: 9
ಮಕರ: ಹೂವು, ಹಣ್ಣುಗಳ ಮಾರಾಟಗಾರರು, ಹೈನೋದ್ಯಮಿಗಳಿಗೆ ಮಿಶ್ರ ಫಲ. ಚಿನ್ನಾಭರಣ ವ್ಯಾಪಾರಿಗಳಿಗೆ ತುಸು ನಷ್ಟ. ಶುಭಸಂಖ್ಯೆ: 8
ಮೀನ: ಮನೆಯವರ ಜತೆ ಸೇರಿ ಶುಭಕಾರ್ಯದ ಬಗ್ಗೆ ನಿರ್ಧರಿಸá-ವಿರಿ. ಇದರಿಂದ ಕುಟುಂಬಕ್ಕೂ ಮನ್ನಣೆ ದೊರೆಯಲಿದೆ. ಶುಭಸಂಖ್ಯೆ: 7