ಜ್ಯೋತಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರು ನಿರ್ದಿಷ್ಟ ಕೆಲಸಗಳನ್ನು ನಿರಾಳವಾಗಿ ಮಾಡಿ ಮುಗಿಸುವುದಕ್ಕೆ ಮುಂದಾಗಬೇಕು. ಇದರಿಂದ ಗೆಲುವು ಸಿಗಲಿದೆ

vijayavani

ಮೇಷ: ನಿಮ್ಮ ನಿರ್ದಿಷ್ಟ ಕೆಲಸಗಳನ್ನು ನಿರಾಳವಾಗಿ ಮಾಡಿ ಮುಗಿಸುವುದಕ್ಕೆ ಮುಂದಾಗಿ. ಗೆಲುವು ಸಿಗಲಿದೆ. ಶುಭಸಂಖ್ಯೆ: 3

ವೃಷಭ: ಸಾಕಷ್ಟು ಶ್ರಮ ವಹಿಸಿ ಈವರೆಗಿನ ದೂರ ಕ್ರಮಿಸಿದ್ದೀರಿ. ನಿಲ್ಲದೆ ಮುಂದುವರಿಯಿರಿ. ನಿರಾಳತೆ ಲಭ್ಯವಾಗಲಿದೆ. ಶುಭಸಂಖ್ಯೆ: 1

ಮಿಥುನ: ನಿಗೂಢ ಶಕ್ತಿಯ ಬೆಂಬಲ ಪಡೆದಿರುತ್ತೀರಿ. ಮುಗಿಯದು ಎಂದುಕೊಂಡ ಕಾರ್ಯವನ್ನು ಮುಗಿಸುವಿರಿ. ಶುಭಸಂಖ್ಯೆ: 5

ಕಟಕ: ಸೂಕ್ಷ್ಮವಾಗಿ ತೊಡಗಿಕೊಳ್ಳುವ ಕಲೆಯನ್ನು ಹಸ್ತಗತ ಮಾಡಿಕೊಳ್ಳಿ. ಇದರಿಂದ ಧೂರ್ತರು ದೂರವಾಗುವರು. ಶುಭಸಂಖ್ಯೆ: 7

ಸಿಂಹ: ಹೊಸದಾದ ಸ್ಥಾನಮಾನಗಳ ನಿರೀಕ್ಷೆ ಮಾಡಿ, ಆತ್ಮೀಯರ ಮೂಲಕವಾಗಿ ಅದನ್ನು ಕೈವಶ ಮಾಡಿಕೊಳ್ಳಿ. ಶುಭಸಂಖ್ಯೆ: 4

ಕನ್ಯಾ:  ಭಕ್ತಿಯಿಂದ ಶ್ರೀಶೈಲ ಮಲ್ಲಿಕಾರ್ಜುನನ ಆರಾಧನೆ ಮಾಡಿ. ಮನಸಿನ ಇಚ್ಛೆಗಳಿಗೆ ನಿಶ್ಚಿತ ದಾರಿ ಸಿಗಲಿದೆ. ಶುಭಸಂಖ್ಯೆ: 6

ತುಲಾ: ಸಾಧು ಸ್ವಭಾವ ಹೊಂದಿದ್ದರೆ ನಿಮ್ಮನ್ನು ಪೂರ್ತಿಯಾಗಿ ಮುಗಿಸುವ ಪ್ರಯತ್ನ ನಡೆಸುತ್ತಾರೆ. ಎಚ್ಚರ ಇರಲಿ. ಶುಭಸಂಖ್ಯೆ: 3

ವೃಶ್ಚಿಕ: ನಿಮಗೆ ನೀವೇ ಸೆರೆಮನೆಯೊಂದನ್ನು ನಿರ್ವಿುಸಿಕೊಳ್ಳುವ ಉಡಾಫೆತನ ಸಂಭವಿಸಬಹುದು. ಜಾಗ್ರತೆ. ಶುಭಸಂಖ್ಯೆ: 9

ಧನಸ್ಸು: ಇದ್ದಕ್ಕಿದ್ದಂತೆ ಕೆಲವು ಕಿರಿಕಿರಿಗಳನ್ನು ಎದುರಿಸಬೇಕಾಗಬಹುದು. ಈ ಸಂದರ್ಭವನ್ನು ಎದುರಿಸಿಯೇ ಗೆಲ್ಲಿ. ಶುಭಸಂಖ್ಯೆ: 2

ಮಕರ: ನಿಮಗೆ ಪರಿಚಯವೇ ಇರದ ಸಾತ್ವಿಕ ಹೃದಯದಲ್ಲಿ ವ್ಯಕ್ತಿಯ ಮಾರ್ಗದರ್ಶನವು ಲಾಭವನ್ನು ತರಲಿದೆ. ಶುಭಸಂಖ್ಯೆ: 5

ಕುಂಭ: ಶ್ರೀ ಶಕ್ತಿದೇವಿ ತಾರಾಳನ್ನು ಧ್ಯಾನಿಸಿ. ಎದುರಿಸಲಾಗದ ಅಡೆತಡೆಗಳೆಲ್ಲ ಬೇಗ ಬೇಗನೆ ದೂರವಾಗಲಿವೆ. ಶುಭಸಂಖ್ಯೆ: 8

ಮೀನ: ಕೂಡುವ, ಕಳೆಯುವ ಲೆಕ್ಕದಲ್ಲಿ ವೇಳೆ ಹಾಳು ಮಾಡದಿರಿ. ಧೈರ್ಯದಿಂದ ಹೆಜ್ಜೆ ಇಡಿ. ಒಳಿತಾಗಲಿದೆ. ಶುಭಸಂಖ್ಯೆ: 1