ಮೇಷ: ಅವಸರ ಮಾಡದೆ ಸಂಯಮದಿಂದಲೇ ತುರ್ತು ಕೆಲಸಗಳನ್ನು ನಿರ್ವಹಿಸಿ. ಉತ್ತಮ ಆದಾಯದಿಂದ ನೆಮ್ಮದಿ. ಶುಭಸಂಖ್ಯೆ: 7
ವೃಷಭ: ಮಕ್ಕಳ ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ. ನಿಮ್ಮ ಉದಾಸೀನತೆಯಿಂದ ವ್ಯವಹಾರ ಇಳಿಮುಖವಾಗಬಹುದು. ಶುಭಸಂಖ್ಯೆ: 5
ಮಿಥುನ: ನಿರುದ್ಯೋಗಿಗಳಿಗೆ ನೌಕರಿ ಸಿಗಲಿದೆ. ವೇತನ ಕಡಿಮೆ ಇದ್ದರೂ ಸದ್ಯಕ್ಕೆ ಹೊಂದಿಕೊಂಡು ಹೋಗುವುದೇ ಉತ್ತಮ. ಶುಭಸಂಖ್ಯೆ: 3
ಕಟಕ: ಮನೆಯವರ ಆರೋಗ್ಯದ ಬಗ್ಗೆ ಕಾಳಜಿ ತೋರುವ ನೀವು ನಿಮ್ಮ ಆರೋಗ್ಯದ ಕಡೆ ನಿರ್ಲಕ್ಷ್ಯ ತೋರಿಸದಿರಿ. ಶುಭಸಂಖ್ಯೆ: 1
ಸಿಂಹ: ಮನೆಯ ಹಿರಿಯರ ಆಶೀರ್ವಾದವನ್ನು ಪಡೆಯಿರಿ. ಸಾಧ್ಯವಿದ್ದರೆ ನೆರವು ಕೋರಿದ ಸಹೋದ್ಯೋಗಿಗೆ ಸಹಕರಿಸಿ. ಶುಭಸಂಖ್ಯೆ: 9
ಕನ್ಯಾ: ಒಂದೆಡೆ ಉಳಿತಾಯಕ್ಕೆ ಯತ್ನಿಸುತ್ತಿದ್ದರೆ ಮತ್ತೊಂದೆಡೆ ಖರ್ಚು ಹೆಚ್ಚಲಿದೆ. ಮತ್ತೊಬ್ಬರ ಬಗ್ಗೆ ಕೆಟ್ಟ ಮಾತುಗಳು ಬೇಡ. ಶುಭಸಂಖ್ಯೆ: 8
ಇದನ್ನೂ ಓದಿ: ತಿರುಪತಿ ದೇವಾಲಯಕ್ಕೆ 400 ಕೋಟಿ ರೂ. ನಷ್ಟ!
ತುಲಾ: ಕೆಲಸದಲ್ಲಿ ಬಹಳ ಅವಸರ ತೋರುವ ನಿಮ್ಮ ಈ ಸ್ವಭಾವದಿಂದ ಇತರರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಿ. ಶುಭಸಂಖ್ಯೆ: 2
ವೃಶ್ಚಿಕ: ನೀವು ನಡೆಸಿಕೊಂಡು ಹೋಗುತ್ತಿರುವ ವ್ಯವಹಾರದಲ್ಲಿ ನಿಮ್ಮ ಕಠಿಣ ಪರಿಶ್ರಮವು ಯಶಸ್ಸನ್ನು ತಂದುಕೊಡಲಿದೆ. ಶುಭಸಂಖ್ಯೆ: 4
ಧನಸ್ಸು: ಭೂವ್ಯವಹಾರಗಳು ಮತ್ತೆ ಗರಿಗೆದರಲಿವೆ. ಹಲವಾರು ಬಾರಿ ಯೋಚಿಸಿಯೇ ಹೊಸ ಯೋಜನೆಗಳನ್ನು ಆರಂಭಿಸಿ. ಶುಭಸಂಖ್ಯೆ: 6
ಮಕರ: ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕು. ಕಾಲಕ್ಕೆ ತಕ್ಕ ಹೊಂದಾಣಿಕೆ ಮಾಡಿಕೊಳ್ಳುವುದು ಬಾಳಿನಲ್ಲಿ ಅನಿವಾರ್ಯವಾಗಿದೆ. ಶುಭಸಂಖ್ಯೆ: 5
ಕುಂಭ: ಕೆಲವರು ನಿಮ್ಮ ಜಾಣ್ಮೆ, ಪರಿಶ್ರಮ ಗಮನಿಸಿ ಧನಸಹಾಯ ಮಾಡುವರು. ನಿಮ್ಮ ಮನದ ಇಚ್ಛೆಗಳು ಬೇಗ ಈಡೇರಲಿವೆ. ಶುಭಸಂಖ್ಯೆ: 7
ಮೀನ: ಆಸ್ತಿ ಖರೀದಿಗೆ ಸಕಾಲ. ಅದಕ್ಕೆ ಬೇಕಾದ ಆರ್ಥಿಕ ಬೆಂಬಲವು ಬಂಧುಗಳಿಂದ ತಾನಾಗಿಯೇ ಒದಗಿಬರಲಿದೆ. ಶುಭಸಂಖ್ಯೆ: 3