ಮೇಷ: ಬಹಳ ಕೆಲಸಗಳಿವೆ, ನಿಧಾನ ಮಾಡದೆ ಬಹಳ ಚುರುಕಾಗಿ ಕೆಲಸ ಮಾಡಬೇಕೆಂಬ ಮಾತುಗಳನ್ನು ಕೇಳುವಿರಿ. ಅದೃಷ್ಟ ಸಂಖ್ಯೆ: 3
ವೃಷಭ: ಯಾರೋ ಏನೋ ಕೆಟ್ಟ ಮಾತನಾಡಿದರು ಎಂಬ ಕಾರಣಕ್ಕೆ ಬೇಸರಗೊಂಡು ದಿನವನ್ನು ಹಾಳುಮಾಡಿಕೊಳ್ಳದಿರಿ. ಅದೃಷ್ಟ ಸಂಖ್ಯೆ: 5
ಮಿಥುನ: ಬೆರಳಿನಲ್ಲಿ ಮುಗಿಯುವುದನ್ನು ಕೊರಳಿಗೆ ತಂದುಕೊಳ್ಳಬಾರದು ಎಂಬ ಮಾತಿನ ಹಿನ್ನೆಲೆ ಅರ್ಥವಾಗಲಿದೆ. ಅದೃಷ್ಟ ಸಂಖ್ಯೆ: 4
ಕಟಕ: ಕಾಲು ಕೆರೆದುಕೊಂಡು ಜಗಳಕ್ಕೆ ಬರುವ ಜನರ ಸಂಖ್ಯೆ ತುಸು ಹೆಚ್ಚಾಗುತ್ತದೆ. ಆದ್ದರಿಂದ ತುಸು ತಾಳ್ಮೆಯಿಂದಿರಿ. ಅದೃಷ್ಟ ಸಂಖ್ಯೆ: 9
ಸಿಂಹ: ಅದನ್ನು ಮಾಡಬೇಕು, ಇದನ್ನು ಮಾಡಬೇಕು ಎಂದುಕೊಳ್ಳುತ್ತಲೇ ಏನನ್ನೂ ಮಾಡದೆ ಸಮಯ ವ್ಯಯಿಸುವಿರಿ. ಅದೃಷ್ಟ ಸಂಖ್ಯೆ: 1
ಕನ್ಯಾ: ದೃಷ್ಟಿ ತಗಲುವ ದಿನವಿದು. ಆದುದರಿಂದ ಏನನ್ನೂ ಹೆಚ್ಚು ಪ್ರದರ್ಶಿಸಲು ಹೋಗದೆ ಗೌಪ್ಯತೆಯನ್ನು ಕಾಪಾಡಿ. ಅದೃಷ್ಟ ಸಂಖ್ಯೆ: 5
ತುಲಾ: ಅದೃಷ್ಟವನ್ನು ನಂಬಿ ಮಾಡುವ ಚಿಕ್ಕ ಕೆಲಸವು ದೊಡ್ಡ ಸಹಾಯ ಮಾಡಬಹುದು ಎನಿಸುತ್ತಿದೆ. ಎಚ್ಚರ ಅಗತ್ಯ. ಅದೃಷ್ಟ ಸಂಖ್ಯೆ: 2
ವೃಶ್ಚಿಕ: ನಿಮಗರಿವಿಲ್ಲದೆ ಆಹಾರ ಅಥವಾ ನೀರಿನ ವ್ಯತ್ಯಾಸಗಳು ಅನಾರೋಗ್ಯಕ್ಕೆ ಕಾರಣ ಆಗಬಹುದು. ಎಚ್ಚರ. ಅದೃಷ್ಟ ಸಂಖ್ಯೆ: 6
ಧನಸ್ಸು: ಉದ್ಯೋಗಸ್ಥಳದಲ್ಲಿ ನಿಮ್ಮನ್ನು ಆಕರ್ಷಿಸುವ ವಸ್ತು ಕೈಗೆ ಸಿಗಲಿಲ್ಲ ಎನ್ನುವ ಕಾರಣಕ್ಕೆ ಬಹಳ ದುಃಖಪಡುತ್ತೀರಿ. ಅದೃಷ್ಟ ಸಂಖ್ಯೆ: 7
ಮಕರ: ಶಿಸ್ತು ಅಳವಡಿಸಿಕೊಂಡಿಲ್ಲ ಎಂದು ನೀವು ಗೌರವಿಸುವ ವ್ಯಕ್ತಿಯಿಂದ ಅವಮಾನಕ್ಕೆ ಗುರಿಯಾಗುವ ಸಾಧ್ಯತೆ. ಅದೃಷ್ಟ ಸಂಖ್ಯೆ: 3
ಕುಂಭ: ವ್ಯವಹಾರವೊಂದು ಕಡಿಮೆ ಯತ್ನದಿಂದ ಕೈಗೆ ಸಿಗುತ್ತದೆ. ಬಾಯಿಗೆ ಬರಲು ಹೆಚ್ಚಿನ ಶ್ರಮ ಅವಶ್ಯವಾಗಿದೆ. ಅದೃಷ್ಟ ಸಂಖ್ಯೆ: 1
ಮೀನ: ಪಿತ್ತದ ತೊಂದರೆ ಜಾಸ್ತಿಯಾಗಿ ತಲೆನೋವು ವಾಂತಿ ಆಗಬಹುದು. ಆಹಾರ ವಿಚಾರಗಳಲ್ಲಿ ಎಚ್ಚರ ವಹಿಸಬೇಕು. ಅದೃಷ್ಟ ಸಂಖ್ಯೆ: 4