ಜ್ಯೋತಿಷ್ಯ

ಈ ರಾಶಿಯವರು ದೊಡ್ಡ ವ್ಯಕ್ತಿಗಳ ಮಾತು ನಂಬಿ ಆರ್ಥಿಕ ನಷ್ಟ ಅನುಭವಿಸುತ್ತಾರೆ

kumarvrl

ಮೇಷ: ಯಾವುದೇ ಕೆಲಸ ಮಾಡುವಾಗಲೂ ಒತ್ತಡ. ಮಾನಸಿಕ ಒತ್ತಡ ಎಲ್ಲರ ಹತ್ತಿರ ಜಗಳ ವಾಡುವಂತೆ ಮಾಡುತ್ತದೆ. ಅದೃಷ್ಟಸಂಖ್ಯೆ: 4

ವೃಷಭ: ಪರರು ಬಹಳ ಸಮಯ ತೆಗೆದುಕೊಂಡು ಮಾಡುವ ಕೆಲಸವನ್ನು ನೀವು ಬೇಗ ಮಾಡಿ ಅಚ್ಚರಿ ಮೂಡಿಸುವಿರಿ. ಅದೃಷ್ಟಸಂಖ್ಯೆ: 7

ಮಿಥುನ: ಎಲ್ಲರೂ ವಿಶ್ರಾಂತಿ ಸಾಕು, ಕೆಲಸ ಮಾಡೋಣ ಎಂದುಕೊಂಡರೆ ನೀವು ಮಾತ್ರ ಇನ್ನೂ ವಿಶ್ರಾಂತಿ ಬೇಕೆನ್ನುತ್ತೀರಿ. ಅದೃಷ್ಟಸಂಖ್ಯೆ: 5

ಕಟಕ: ಬರಿದೇ ಆಶ್ವಾಸನೆ ಕೊಡುವವರ ಬಳಿ ಕೆಲಸ ಮಾಡಿಕೊಡುವಂತೆ ಒತ್ತಾಯಿಸಿ ಜಗಳ ಮಾಡುವ ಸಾಧ್ಯತೆ ಇದೆ. ಅದೃಷ್ಟಸಂಖ್ಯೆ: 9

ಸಿಂಹ: ದೊಡ್ಡ ವ್ಯಕ್ತಿಗಳ ಮಾತು ನಂಬಿ ಆರ್ಥಿಕ ನಷ್ಟ ಅನುಭವಿಸುವ ಸಾಧ್ಯತೆ. ಮನೆಯ ಆಹಾರ ಮಾತ್ರ ಸೇವಿಸಿ. ಅದೃಷ್ಟಸಂಖ್ಯೆ: 7

ಕನ್ಯಾ: ತಪ್ಪು ಮಾಡಿದರೂ ಮಕ್ಕಳ ಪರ ಮಾತಾಡಿ ಸ್ವಾರ್ಥಿಯಾಗುವಿರಿ. ಮನೆಯವರನ್ನು ಕೂಡ ಬೇಸರಪಡಿಸುವಿರಿ. ಅದೃಷ್ಟಸಂಖ್ಯೆ: 3

ತುಲಾ: ಯಾರ ಬಳಿ ಎಷ್ಟು ಮಾತಾಡಬೇಕು ಎಂದು ನಿಮ್ಮಿಂದ ಕಲಿಯುವಷ್ಟು ಚೆನ್ನಾಗಿ ಬುದ್ಧಿವಂತಿಕೆ ಪ್ರದರ್ಶಿಸುತ್ತೀರಿ. ಅದೃಷ್ಟಸಂಖ್ಯೆ: 5

ವೃಶ್ಚಿಕ: ಅನಿವಾರ್ಯ ಓಡಾಟ ಬರುವ ಸಾಧ್ಯತೆ ಹೆಚ್ಚು. ಅದರೆ ಈ ವೇಳೆ ನಿಮ್ಮ ಆರೋಗ್ಯವೇ ಮುಖ್ಯ ಎಂದು ನೆನಪಿರಲಿ. ಅದೃಷ್ಟಸಂಖ್ಯೆ: 2

ಧನಸ್ಸು: ಊಟದ ಬಗ್ಗೆ ಬಹಳ ಅಪೇಕ್ಷೆ ಇಟ್ಟುಕೊಳ್ಳದಿರಿ. ದೊರಕಿದ್ದನ್ನೇ ಪ್ರೀತಿಯಿಂದ ಸ್ವೀಕರಿಸಿ. ಇದು ಪರೀಕ್ಷಾಕಾಲ ಅನಿಸುತ್ತಿದೆ. ಅದೃಷ್ಟಸಂಖ್ಯೆ: 1

ಮಕರ: ಆಲಸ್ಯದಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದು. ಮನೆಯವರು ನಿಮ್ಮ ಮೇಲೆ ಬೇಸರಪಡಬಹುದು. ಅದೃಷ್ಟಸಂಖ್ಯೆ: 6

ಕುಂಭ: ಸತ್ಯ ಬಹಳ ಕಹಿ ಎಂದು ಕೇಳಿ ತಿಳಿದಿದ್ದೀರಿ. ಆದರೆ ಇಂದು ಅದು ನಿಮ್ಮ ಅನುಭವಕ್ಕೆ ಬರುವ ಸಾಧ್ಯತೆಯಿದೆ. ಅದೃಷ್ಟಸಂಖ್ಯೆ: 7

ಮೀನ: ನೀವು ಕಡಿಮೆ ಮಾತಾಡಿ. ಏನು ಮಾತಾಡಿದರೂ ಅದಕ್ಕೆ ಅಪಾರ್ಥ ಕಲ್ಪಿಸಿ ನಿಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ಅದೃಷ್ಟಸಂಖ್ಯೆ: 3