ಮೇಷ: ಸ್ವೇಚ್ಛೆ ಎಂಬುದು ಯಾವಾಗಲೂ ಆತ್ಮವನ್ನು ನಾಶಪಡಿಸುವಂತಹ ಘೋರ ವಿಷವಾಗಿದೆ. ಎಚ್ಚರ ಇರಲಿ. ಶುಭಸಂಖ್ಯೆ: 6
ವೃಷಭ: ಸ್ವಂತದ್ದಾದ ವಹಿವಾಟನ್ನು ಇನ್ನಷ್ಟು ವಿಸ್ತರಿಸುವುದರ ಕುರಿತು ದಿಢೀರಾದ ನಿರ್ಧಾರವನ್ನು ಕೈಗೊಳ್ಳದಿರಿ. ಶುಭಸಂಖ್ಯೆ: 8
ಮಿಥುನ: ಗೆಳೆಯರು ಸಹಾಯಕ್ಕೆ ಬರುತ್ತಾರೆ ಎಂದು ನಂಬಿ ಮುಂದಾಗದಿರಿ. ನಿಮಗೇ ನೀವೇ ದೊಡ್ಡ ಶಕ್ತಿಯಾಗಿರಿ. ಶುಭಸಂಖ್ಯೆ: 2
ಕಟಕ: ಶಿರಡಿ ಸಾಯಿಬಾಬಾ ಅವರನ್ನು ಪ್ರಾರ್ಥಿಸಿ. ಕಗ್ಗಂಟಾದ ಕೆಲಸಗಳು ಕೂಡ ಸರಾಗವಾಗಿ ಸಫಲತೆ ತರುತ್ತವೆ. ಶುಭಸಂಖ್ಯೆ: 7
ಸಿಂಹ: ವೃಥಾ ತೊಂದರೆ ಕೊಡುವ ಜನರು ಇರುತ್ತಾರೆ. ನಿಮ್ಮ ಚಾತುರ್ಯದಿಂದ ಬಂಡೆಗಳನ್ನು ಒಡೆದು ಮುನ್ನುಗ್ಗಿ. ಶುಭಸಂಖ್ಯೆ: 3
ಕನ್ಯಾ: ನಾನಾ ರೀತಿಯ ಆಸೆ ಆಕಾಂಕ್ಷೆಗಳನ್ನು ಇಟ್ಟುಕೊಳ್ಳುವುದು ಸರಿ. ಆದರೆ ಕಠಿಣ ಪರಿಶ್ರಮದಿಂದಲೇ ಯಶಸ್ಸು. ಶುಭಸಂಖ್ಯೆ: 5
ತುಲಾ: ಮಹಾಗೌರಿಯ ಸ್ತುತಿಯಿಂದ ಅನಿಶ್ಚಿತತೆಯ ಕೆಲಸಕಾರ್ಯಗಳಲ್ಲಿ ಸುಲಭದ ವಿಜಯ ದೊರೆಯಲಿದೆ. ಶುಭಸಂಖ್ಯೆ: 9
ವೃಶ್ಚಿಕ: ಯಶಸ್ವಿಯಾಗಿ ಪೂರೈಸಬೇಕು ಎಂದು ನಿನ್ನೆ ತಳೆದಿದ್ದ ನಿರ್ಧಾರವನ್ನು ಅರ್ಧದಲ್ಲೇ ಬಿಡಲು ಮುಂದಾಗದಿರಿ. ಶುಭಸಂಖ್ಯೆ: 4
ಧನಸ್ಸು: ಮಕ್ಕಳ ಕಾರಣಕ್ಕಾಗಿ ಏಕಾಏಕಿ ವಿಶೇಷವಾದ ನಿರ್ಧಾರವೊಂದನ್ನು ತಳೆಯಬೇಕಾದ ಸಂದರ್ಭ ಎದುರಾದೀತು. ಶುಭಸಂಖ್ಯೆ: 1
ಮಕರ: ನಿಮ್ಮನ್ನು ಗೌರವಿಸುವ ಮಂದಿಯ ತಲ್ಲಣಗಳನ್ನು ಕೇಳಿಸಿಕೊಳ್ಳಿ. ಅವರಿಂದಲೂ ನಿಮಗೆ ಬೆಂಬಲ ಲಭ್ಯ. ಶುಭಸಂಖ್ಯೆ: 8
ಕುಂಭ: ಆಸ್ತಿಯ ವಿಚಾರದಲ್ಲಿ ನಿರೀಕ್ಷೆಯೇ ಇರದ ಧನಲಾಭವೊಂದು ಅರಿವಿರದೆಯೇ ನೆರವೇರಲು ಸಾಧ್ಯವಿದೆ. ಶುಭಸಂಖ್ಯೆ: 5
ಮೀನ: ನಿಮ್ಮ ಮಾತುಗಳನ್ನು ಖಂಡಿಸಲೇಬೇಕು ಎಂದು ನಿರ್ಧರಿಸಿ ಬರುವವರನ್ನು ಕಡೆಗಣಿಸದೆಯೇ ತಾಳ್ಮೆ ವಹಿಸಿ. ಶುಭಸಂಖ್ಯೆ: 1