ಮೇಷ: ಸಮೀಪದಲ್ಲಿನ ವಸ್ತುವಿಗಿಂತ ದೂರದಲ್ಲಿ ಇರುವುದೇ ಸದಾ ಆಕರ್ಷಕವಾಗಿರುತ್ತದೆ. ಹತ್ತಿರ ಹೋಗದಿರಿ. ಎಚ್ಚರ. ಶುಭಸಂಖ್ಯೆ: 2
ವೃಷಭ: ನಿಮ್ಮದೇ ಕೆಲವು ದೌರ್ಬಲ್ಯಗಳ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಿ. ಇದರಿಂದ ಹೊಸ ವರ್ಚಸ್ಸು ಲಭ್ಯವಾಗಲಿದೆ. ಶುಭಸಂಖ್ಯೆ: 1
ಮಿಥುನ: ಮಕ್ಕಳ ಶೈಕ್ಷಣಿಕ ವಿಚಾರಕ್ಕೆ ಸಂಬಂಧಿಸಿದ ಸಂಗತಿಗಳಲ್ಲಿ ಕೆಲವು ವಿಶೇಷವಾದ ಅವಕಾಶಗಳನ್ನು ಕಾಣಲಿದ್ದೀರಿ. ಶುಭಸಂಖ್ಯೆ: 4
ಕಟಕ: ನೀವು ಕೈಗೊಳ್ಳುವಂತಹ ಕೆಲವು ಸಾಮಾಜಿಕ ಕಾರ್ಯಗಳು ನಿಮ್ಮ ಘನತೆಯನ್ನು ಎತ್ತಿ ಹಿಡಿಯಲು ಅನುಕೂಲಕರವಾಗಲಿವೆ. ಶುಭಸಂಖ್ಯೆ: 3
ಸಿಂಹ: ಕೆಲವರು ನಿಮ್ಮ ಒಳಗುಟ್ಟುಗಳನ್ನು ತಿಳಿದು ಶೋಷಿಸಲು ಬರಬಹುದು. ಅಂಥವರಿಂದ ಸಾಕಷ್ಟು ದೂರವೇ ಇರಿ. ಶುಭಸಂಖ್ಯೆ: 6
ಕನ್ಯಾ: ವಿವಾಹದ ಕನಸು ಕಾಣುತ್ತಿರುವವರಿಗೆ ಇದು ಸಕಾಲ. ಹೊಸ ಪ್ರಯತ್ನಗಳಿಂದ ಯಶಸ್ಸನ್ನು ಪಡೆಯಲು ಸಾಧ್ಯ. ಶುಭಸಂಖ್ಯೆ: 5
ತುಲಾ: ಮನೆಯವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ಕೌಟುಂಬಿಕ ಸಂಘಟನೆಯಿಂದ ಸಂತಸಮಯ ವಾತಾವರಣ ಇರಲಿದೆ. ಶುಭಸಂಖ್ಯೆ: 8
ವೃಶ್ಚಿಕ: ಹೊಸ ಬಂಡವಾಳ ಹೂಡಿ ಬೇಗನೆ ಅದನ್ನು ಮರಳಿ ಪಡೆಯುವ ಒತ್ತಡವನ್ನು ನಿರ್ವಿುಸಿಕೊಳ್ಳಲು ಹೋಗದಿರಿ. ಶುಭಸಂಖ್ಯೆ: 7
ಧನುಸ್ಸು: ಒಂದೇ ಬಾರಿಗೆ ಹಲವು ಕೆಲಸಗಳನ್ನು ಮಾಡಲು ಹೋಗದಿರಿ. ಇದರಿಂದ ನಿಮಗೇ ಹೊಸ ತಲೆನೋವಾದೀತು. ಶುಭಸಂಖ್ಯೆ: 9
ಮಕರ: ಬೇರೆಯವರ ಯೋಜನೆಗಳನ್ನು ನಕಲಿಸಿದರೆ ಯಶಸ್ಸು ಸಿಗದು. ನಿಮ್ಮ ಯೋಚನೆಯಿಂದಲೇ ಸಫಲತೆ ಸಿಗಲು ಸಾಧ್ಯವಾಗಲಿದೆ. ಶುಭಸಂಖ್ಯೆ: 2
ಕುಂಭ: ಬಾಳಿನಲ್ಲಿ ಹೊಸ ಹೆಜ್ಜೆಗಳನ್ನು ಇಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದರೆ ವಿಶೇಷ ಸಹಭಾಗಿಗಳು ದೊರೆಯಲಿದ್ದಾರೆ. ಶುಭಸಂಖ್ಯೆ: 1
ಮೀನ: ಹಗಲುಗನಸಿನಿಂದ ಏನೂ ಪ್ರಯೋಜನವಿ ಲ್ಲ. ಚಿಂತಿಸಿದ ವಿಚಾರಗಳನ್ನು ಸಾಕಾರಗೊಳಿಸುವತ್ತ ಧೈರ್ಯದ ಪ್ರಯತ್ನ ಮಾಡಿ. ಶುಭಸಂಖ್ಯೆ: 4