ಜ್ಯೋತಿಷ್ಯ

ಈ ರಾಶಿಯವರನ್ನು ಹಾಡಿ ಹೊಗಳಿ ಮೋಸ ಮಾಡುವ ಜನರು ಎದುರಾಬಹುದು ಎಚ್ಚರ!

ಮೇಷ: ಧನಲಾಭದ ವಿಷಯದಲ್ಲಿ ನಿಮ್ಮದಾದ ಅದೃಷ್ಟರೇಖೆಯೊಂದು ಅದ್ಭುತವಾಗಿ ಕಾರ್ಯ ನಿರ್ವಹಿಸಲಿದೆ. ಶುಭಸಂಖ್ಯೆ: 1

ವೃಷಭ: ಹೊಸಬರೊಂದಿಗೆ ಪಾಲುದಾರಿಕೆ ಹಾಗೂ ಗೆಳೆತನ ಬೆಳೆದು ಲಾಭಕ್ಕೆ ಹೊಸದಾದ ದಾರಿ ಲಭ್ಯವಾಗಲಿದೆ. ಶುಭಸಂಖ್ಯೆ: 2

ಮಿಥುನ: ಕುಟುಂಬದ ಸದಸ್ಯರೊಡನೆ ಬೆರೆಯಲು ಸಮಯವನ್ನು ಇಟ್ಟುಕೊಳ್ಳಿ. ಕೆಲಸದ ಒತ್ತಡ ತುಸು ಕಡಿಮೆಯಾಗಲಿದೆ. ಶುಭಸಂಖ್ಯೆ: 8

ಕಟಕ: ಸುಲಭವಾದ ಮಾತುಗಳಲ್ಲಿಯೇ ಜನರನ್ನು ಗೆಲ್ಲುವ ಅದೃಷ್ಟ ನಿಮಗಿದೆ. ಆದರೆ ನಿಲುವು ಮಾತ್ರ ಪ್ರಾಮಾಣಿಕವಾಗಿರಲಿ. ಶುಭಸಂಖ್ಯೆ: 5

ಸಿಂಹ: ಮೂರ್ಖರು ನಿಮಗಿಂತ ಮುಂದಕ್ಕೆ ಬರುವ ಅಪಾಯ ಇದ್ದರೂ, ಅದರಿಂದ ನಿಮ್ಮ ಬೌದ್ಧಿಕ ಬಲವನ್ನು ಕುಂದಿಸಿಕೊಳ್ಳದಿರಿ. ಶುಭಸಂಖ್ಯೆ: 7

ಕನ್ಯಾ: ಹಿರಿಯರಿಂದ ನಿಮಗೆ ಕೆಲವು ಬಗೆಯ ಅನುಕೂಲಗಳಿವೆ. ಅವರಿಗೆ ಗೌರವ, ಆದರ ತೋರಿದರೆ ನೆಮ್ಮದಿ ಲಭ್ಯ. ಶುಭಸಂಖ್ಯೆ: 5

ತುಲಾ: ಯಾವುದನ್ನು ಕೂಡ ಅತಿಯಾಗಿ ಆದರಿಸಲು ಹೋಗದಿರಿ. ಅದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಬಹುದು. ಶುಭಸಂಖ್ಯೆ: 2

ವೃಶ್ಚಿಕ: ನಿಮ್ಮ ಮೇಲಿನ ವೃಥಾ ಆರೋಪದಿಂದ ಹೊರಬರುವಿರಿ. ಮನೆಯಲ್ಲಿ ಸಂಭ್ರಮದ ವಾತಾವರಣ ಇರಲಿದೆ. ಶುಭಸಂಖ್ಯೆ: 9

ಧನಸ್ಸು: ನಿಮ್ಮನ್ನು ಹಾಡಿ ಹೊಗಳಿ ಮೋಸ ಮಾಡುವ ಜನರೇ ಎದುರಾಗಬಹುದು. ಅಂಥವರ ಬಗ್ಗೆ ಎಚ್ಚರವಾಗಿರುವುದು ಯುಕ್ತ. ಶುಭಸಂಖ್ಯೆ: 4

ಮಕರ: ಯಶಸ್ಸಿನ ಮಾರ್ಗದಲ್ಲಿ ನಡೆಯುತ್ತಿದ್ದರೂ ಅದಕ್ಕೆ ಅಡ್ಡಗಾಲು ಹಾಕುವ ಹಿತಶತ್ರುಗಳ ಬಗ್ಗೆ ಸ್ವಲ್ಪ ಜಾಗ್ರತೆ ಹೊಂದಿರಿ. ಶುಭಸಂಖ್ಯೆ: 1

ಕುಂಭ: ನಿಮ್ಮದು ಮುನ್ನಗ್ಗುವ ಮನೋಧರ್ಮ. ಅದು ಸರಿಯಾಗಿದ್ದರೂ ನಿಶ್ಚಿತ ಕಾರ್ಯಯೋಜನೆ ಕೂಡ ಅದರ ಜತೆಗೇ ಇರಲಿ. ಶುಭಸಂಖ್ಯೆ: 6

ಮೀನ: ಕೆಲವು ಆತುರದ ನಿರ್ಣಯಗಳಿಂದಾಗಿ ನೀವು ತೊಡಗಿಸಿದ ಹಣ ನಷ್ಟವಾದೀತು. ಯೋಚಿಸಿ ಯೋಗ್ಯ ನಿರ್ಣಯ ಕೈಗೊಳ್ಳಿ. ಶುಭಸಂಖ್ಯೆ: 3