ಮೇಷ: ನೀವು ಜನರನ್ನು ನಂಬುತ್ತೀರಾದರೂ ಜನ ಮಾತ್ರ ನಿಮ್ಮನ್ನು ನಂಬಲಾರರು. ಆದರೂ ಕೆಲಸ ಸಾಗಲಿ. ಗೆಲುವಿದೆ. ಶುಭಸಂಖ್ಯೆ: 7
ವೃಷಭ: ಹಲವಾರು ರೀತಿಯ ಶಕ್ತಿಸಂಚಯನಕ್ಕೆ ಸಕಾರಾತ್ಮಕವಾದ ದಾರಿಗಳು ಗೋಚರಿಸಲಿವೆ. ಗಣಪತಿಯನ್ನು ಆರಾಧಿಸಿ. ಶುಭಸಂಖ್ಯೆ: 2
ಮಿಥುನ: ಮನೆಯ ಪರಿಸರದಲ್ಲಿ ವಿರೋಧಿಗಳು ನಾನಾ ರೀತಿಯ ಗೊಂದಲಗಳನ್ನು ತರಬಹುದು. ತಾಳ್ಮೆ ಇರಲಿ. ಒಳಿತಿದೆ. ಶುಭಸಂಖ್ಯೆ: 9
ಕಟಕ: ನಿಮ್ಮಲ್ಲಿ ದೊಡ್ಡದಾದ ಪ್ರತಿಭೆಯಿದೆ. ಸೂಕ್ತವಾದ ಮಾರ್ಗದರ್ಶಕರಿಂದ ಸದ್ಯದ ಸಂದರ್ಭದಲ್ಲಿ ಮಿಂಚಲಿದ್ದೀರಿ. ಶುಭಸಂಖ್ಯೆ: 4
ಸಿಂಹ: ಹಣಕಾಸಿನ ವಿಚಾರದಲ್ಲಿ ಯಶಸ್ಸು ಲಭ್ಯವಾದರೂ ನಿರೀಕ್ಷಿತ ಮಟ್ಟ ತಲುಪುವುದು ತುಸು ಕಷ್ಟವೇ ಆದೀತು. ಶುಭಸಂಖ್ಯೆ: 1
ಕನ್ಯಾ: ಶಕ್ತಿ ಸಂಜೀವಿನಿಯಾದ ಮಾರುತಿರಾಯನನ್ನು ಆರಾಧಿಸಿ. ಈ ಮೂಲಕ ಕ್ಲೇಷಗಳಿಂದ ಹೊರಬರಲು ಸಾಧ್ಯವಿದೆ. ಶುಭಸಂಖ್ಯೆ: 9
ತುಲಾ: ಯಾವುದೇ ರೀತಿಯ ಅಡೆತಡೆಗಳನ್ನು ಕೂಡ ಮೀರಿ ನಿಮ್ಮದಾದ ಗುರಿಯನ್ನು ತಲುಪುತ್ತೀರಿ. ನಿರಾಳರಾಗಿರಿ. ಶುಭಸಂಖ್ಯೆ: 3
ವೃಶ್ಚಿಕ: ನೀವು ಎಷ್ಟೋ ದಿನಗಳ ಕನಸೊಂದು ನನಸಾಗುವಂತಹ ಸ್ಪಷ್ಟವಾದ ಮಾರ್ಗವೊಂದು ಸದ್ಯವೇ ಗೋಚರಿಸಲಿದೆ. ಶುಭಸಂಖ್ಯೆ: 5
ಧನಸ್ಸು: ಬವಣೆಪಡುತ್ತ ಬಸವಳಿದಿದ್ದೀರಿ. ಆದರೆ ಹಿರಿಯರಿಂದ ಸೂಕ್ತವಾದ ಬೆಂಬಲ ಶೀಘ್ರದಲ್ಲಿಯೇ ಲಭ್ಯವಾಗಲಿದೆ. ಶುಭಸಂಖ್ಯೆ: 1
ಮಕರ: ನಿಮ್ಮ ಮಾರ್ಗದರ್ಶನ ಬಯಸಿ ಬರುವವರು ಅಸಂಖ್ಯ. ಆದರೆ ಯೋಗ್ಯರಾದ ಜನರ ಪಾಲಿಗೆ ನೀವೇ ಶಕ್ತಿಯಾಗಿ. ಶುಭಸಂಖ್ಯೆ: 8
ಕುಂಭ: ನಿಮ್ಮದು ಮೃದು ಸ್ವಭಾವ. ನೋವು ತರುವಂಥ ಮಾತಾಡುವ ಜನ ಸಿಗಬಹುದು. ಆದರೆ ಸಮಾಧಾನ ಇರಲಿ. ಶುಭಸಂಖ್ಯೆ: 2
ಮೀನ: ತೀರ ನಂಬಿರುವ ವ್ಯಕ್ತಿಯೊಬ್ಬರು ತುಸು ತೊಂದರೆಯನ್ನು ತರಬಹುದು. ಈ ಬಗ್ಗೆ ಎಚ್ಚರ ವಹಿಸಬೇಕು. ಶುಭಸಂಖ್ಯೆ: 6