ಜ್ಯೋತಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ವ್ಯಾಪಾರದಲ್ಲಿ ಉತ್ತಮ ವಹಿವಾಟು ಇರಲಿದೆ.

Webdesk - Mallikarjun K R

ಮೇಷ: ಸಾಮಾಜಿಕ ಕಾರ್ಯದಲ್ಲಿ ಭಾಗಿ. ಕೃಷಿಕರಿಗೆ ನಾನಾ ಮೂಲದಿಂದ ಲಾಭ. ಅಮೂಲ್ಯ ವಸ್ತು ಖರೀದಿ. ಇತರರ ಭಾವನೆಗೆ ಸ್ಪಂದಿಸಿ. ಶುಭಸಂಖ್ಯೆ: 5

ವೃಷಭ: ಸ್ತ್ರೀಯರು ತಾಳ್ಮೆಯಿಂದ ಇರಿ. ಹಿತ ಶತ್ರು ಬಾಧೆ ಕಾಡಲಿದೆ. ದಾಂಪತ್ಯದಲ್ಲಿ ಕಲಹ ಸಾಧ್ಯತೆ. ಕಲಾವಿದರಿಗೆ ವೇದಿಕೆ ಸಿಗುವುದು. ಶುಭಸಂಖ್ಯೆ: 1

ಮಿಥುನ: ಪರರ ತಪ್ಪಿನಿಂದ ನಿಮ್ಮಗೌರವಕ್ಕೆ ಧಕ್ಕೆ. ವ್ಯಾಪಾರದಲ್ಲಿ ಉತ್ತಮ ವಹಿವಾಟು ಇರಲಿದೆ. ವೈರಿಗಳಿಂದ ತೊಂದರೆಯಾಗಬಹುದು. ಶುಭಸಂಖ್ಯೆ: 9

ಕಟಕ: ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಮಕ್ಕಳಿಂದ ಶುಭ ವಾರ್ತೆ ಬರಲಿದೆ. ಕುಲದೇವರ ಸ್ಮರಣೆಯನ್ನು ಮರೆಯದಿರಿ. ಶುಭಸಂಖ್ಯೆ: 8

ಸಿಂಹ:  ನಂಬಿದ ಜನರಿಂದ ಸಹಾಯ. ಹಿತಶತ್ರು ಬಾಧೆ. ಯತ್ನ ಕಾರ್ಯಗಳಲ್ಲಿ ಜಯ. ಚಿನ್ನ, ಬೆಳ್ಳಿ ವ್ಯಾಪಾರದಲ್ಲಿ ಸಾಧಾರಣ ಫಲ. ಶುಭಸಂಖ್ಯೆ: 2

ಕನ್ಯಾ:  ಸಾಲಬಾಧೆೆ ಹೆಚ್ಚುವುದು. ಸಕಾಲ ಭೋಜನದಿಂದ ಆರೋಗ್ಯ. ಕುಟುಂಬದಲ್ಲಿ ಅಸೌಖ್ಯ. ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಲಭ್ಯ. ಶುಭಸಂಖ್ಯೆ: 7

ತುಲಾ: ಹೃದಯ ಸಂಬಂಧಿ ರೋಗ ಉಲ್ಬಣ. ದ್ರವ್ಯರೂಪದ ವಸ್ತುಗಳಿಂದ ಲಾಭವಿದೆ. ಸಂಬಂಧಿಕರಿಂದ ತೊಂದರೆಯಾಗಬಹುದು. ಶುಭಸಂಖ್ಯೆ:3

ವೃಶ್ಚಿಕ: ರೆಸ್ಟೋರೆಂಟ್ ವ್ಯಾಪಾರ ವ್ಯವಹಾರಗಳಲ್ಲಿ ಅಧಿಕ ಲಾಭ. ಸಂಗಾತಿಗೆ ಅನಾರೋಗ್ಯ. ಕೃಷಿಕರಿಗೆ ಲಾಭ. ದುಷ್ಟರಿಂದ ತೊಂದರೆ. ಶುಭಸಂಖ್ಯೆ:4

ಧನಸ್ಸು: ನ್ಯಾಯಾಲಯದ ಕಾರ್ಯದಲ್ಲಿ ಪ್ರಗತಿ. ದಾಂಪತ್ಯದಲ್ಲಿ ಕಲಹ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಶಾಂತಿ. ಅವಾಚ್ಯ ನಿಂದನೆ. ಶುಭಸಂಖ್ಯೆ:4

ಮಕರ:  ಚಿಕಿತ್ಸೆಗಾಗಿ ಹಣ ವ್ಯಯ. ಅಧಿಕ ಕೋಪದಿಂದ ಕಚೇರಿಯಲ್ಲಿ ನಿಷ್ಠುರ. ಮನಸ್ಸಿನಲ್ಲಿ ನಾನಾ ರೀತಿಯ ಯೋಚನೆ. ದಂಡ ಕಟ್ಟುವಿರಿ. ಶುಭಸಂಖ್ಯೆ: 2

ಕುಂಭ:  ಬಂಧುಗಳ ಹಿತವಚನವನ್ನು ಕೇಳಿಸಿಕೊಳ್ಳಿ. ವಿದೇಶ ಪ್ರಯಾಣದಲ್ಲಿ ತೊಂದರೆ ಸಾಧ್ಯತೆ. ಸಲ್ಲದ ಅಪವಾದ, ನಿಂದನೆ ಬಂದೀತು. ಶುಭಸಂಖ್ಯೆ:7

ಮೀನ: ಮಾತಿನಿಂದ ಅನರ್ಥ. ಮನಸ್ಸಿನಲ್ಲಿ ದುಗುಡ. ದೇವತಾ ಕಾರ್ಯಗಳಲ್ಲಿ ಒಲವು. ಬೇಕರಿ, ಕಾಂಡಿಮೆಂಟ್ಸ್ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 8