ಜ್ಯೋತಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ನಂಬಿದವರಿಂದಲೇ ವಿಶ್ವಾಸದ್ರೋಹ ಸಾಧ್ಯತೆ

Webdesk - Mallikarjun K R

ಮೇಷ: ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ದೊರೆಯುವುದು. ಪ್ರಿಯ ಜನರ ಭೇಟಿಯಾಗಲಿದೆ. ಮಂಗಳ ಕಾರ್ಯಗಳಲ್ಲಿ ಭಾಗಿ. ಶುಭಸಂಖ್ಯೆ: 5

ವೃಷಭ: ಕಾರ್ಯದಲ್ಲಿ ಅಡೆತಡೆ. ಸ್ಥಿರಾಸ್ತಿ ಮಾರಾಟಕ್ಕೆ ನಾನಾ ರೀತಿಯ ತೊಂದರೆ. ನೌಕರಿಯಲ್ಲಿ ಕಿರಿಕಿರಿ. ಇಷ್ಟದೇವರನ್ನು ಪ್ರಾರ್ಥಿಸಿ. ಶುಭಸಂಖ್ಯೆ: 2

ಮಿಥುನ: ವ್ಯಾಪಾರದಲ್ಲಿ ಹಲವಾರು ಸಮಸ್ಯೆ. ವಿದ್ಯಾರ್ಥಿಗಳಲ್ಲಿ ಪ್ರಗತಿ. ಅವಿವಾಹಿತರಿಗೆ ವಿವಾಹ ಯೋಗ. ಆರೋಗ್ಯದಲ್ಲಿ ಏರುಪೇರು. ಶುಭಸಂಖ್ಯೆ: 7

ಕಟಕ: ನಂಬಿದವರಿಂದಲೇ ವಿಶ್ವಾಸದ್ರೋಹ ಸಾಧ್ಯತೆ. ಮನಸ್ಸಿನಲ್ಲಿ ಭಯ ಭೀತಿ. ಯಾರನ್ನೂ ಹೆಚ್ಚಾಗಿ ನಂಬಬೇಡಿ. ಪರರ ಧನ ಪ್ರಾಪ್ತಿ. ಶುಭಸಂಖ್ಯೆ: 9

ಸಿಂಹ: ಕೈ ಹಾಕಿದ ಕೆಲಸಗಳಲ್ಲಿ ವಿಳಂಬವಾಗಿ ಬೇಸರ. ವಿಧೇಯತೆಯಿಂದ ನಡೆದುಕೊಳ್ಳಿ. ಬಂಧುಗಳಲ್ಲಿ ಕಲಹವಾದೀತು. ಧನ ನಷ್ಟ. ಶುಭಸಂಖ್ಯೆ: 3

ಕನ್ಯಾ:  ಅಂಗಡಿಯ ಸ್ಥಳ ಬದಲಾವಣೆ. ಹಣದ ಅಡಚಣೆ. ಸ್ತ್ರೀಯರಿಗೆ ಅಶಾಂತಿ. ಸ್ನೇಹಿತರಿಂದ ಸಹಾಯ. ಅಧಿಕಾರಿಗಳಲ್ಲಿ ಕಲಹ. ಶುಭಸಂಖ್ಯೆ: 8

ತುಲಾ: ಅಲ್ಪ ಆದಾಯ, ಆದರೆ ಅಧಿಕ ಖರ್ಚು. ಆಪ್ತ ಸ್ನೇಹಿತರ ಭೇಟಿ. ಜಲೋತ್ಪನ್ನ ವಸ್ತುಗಳ ವ್ಯಾಪಾರದಲ್ಲಿ ನಿರೀಕ್ಷೆಗೂ ಮೀರಿ ಲಾಭ. ಶುಭಸಂಖ್ಯೆ: 2

ವೃಶ್ಚಿಕ: ತೀರ್ಥಯಾತೆ್ರ, ದೇವರ ದರ್ಶನ. ಅವಿವಾಹಿತರಿಗೆ ವಿವಾಹ ಯೋಗವಿದೆ. ಷೇರು ವ್ಯವಹಾರಗಳಲ್ಲಿ ಲಾಭ. ತಾಯಿಯಿಂದ ಶುಭ. ಶುಭಸಂಖ್ಯೆ: 4

ಧನಸ್ಸು: ಯತ್ನ ಕಾರ್ಯಗಳಲ್ಲಿ ಜಯ. ಪಟ್ಟ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಬಹು ನಿರೀಕ್ಷಿತ ವ್ಯಾಪಾರದಿಂದ ಸಂತಸ. ಆಕಸ್ಮಿಕ ಧನ ಲಾಭ. ಶುಭಸಂಖ್ಯೆ: 8

ಮಕರ: ಹಿರಿಯರ ಸಹಾಯದಿಂದ ಸುಗಮ ವ್ಯವಹಾರ. ಆಹಾರದಲ್ಲಿ ವ್ಯತ್ಯಾಸ. ಅನಾರೋಗ್ಯದಿಂದ ಆಸ್ಪತ್ರೆಗೆ ಭೇಟಿ, ಮಾನಸಿಕ ಒತ್ತಡ. ಶುಭಸಂಖ್ಯೆ: 9

ಕುಂಭ: ಎಲ್ಲರ ಪ್ರೀತಿ ವಿಶ್ವಾಸ ಗಳಿಸುವಿರಿ. ಅಧಿಕ ತಿರುಗಾಟ. ಶಿಕ್ಷಕರಿಗೆ ವಿದ್ಯಾರ್ಥಿಗಳೊಂದಿಗೆ ಮಾತಿನ ಚಕಮಕಿ. ಪುಣ್ಯಕ್ಷೇತ್ರ ದರ್ಶನ. ಶುಭಸಂಖ್ಯೆ: 1

ಮೀನ: ಸಕಾಲದಲ್ಲಿ ಹಣ ಸಹಾಯ ಒದಗಿಬರುವುದು. ನಿಮ್ಮವರಿಂದಲೇ ತೊಂದರೆ. ಉದ್ಯೋಗದಲ್ಲಿ ಬಡ್ತಿ. ಕೃಷಿಕರಿಗೆ ಅಲ್ಪ ಲಾಭ. ಶುಭಸಂಖ್ಯೆ: 2