ಜ್ಯೋತಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಮಗಳ ವಿವಾಹದ ಪ್ರಯತ್ನ ಕೈಗೂಡುತ್ತವೆ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಮಗಳ ವಿವಾಹದ ಪ್ರಯತ್ನ ಕೈಗೂಡುತ್ತವೆ

ಮೇಷ: ನ್ಯಾಯಾಲಯದ ತೀರ್ಪು ನಿಮ್ಮ ಪರ ಬರಲಿದೆ. ಮಗಳ ವಿವಾಹದ ಪ್ರಯತ್ನ ಕೈಗೂಡುತ್ತವೆ. ವಿದೇಶ ಪ್ರಯಾಣ ವಿಳಂಬ. ಶುಭಸಂಖ್ಯೆ: 7

ವೃಷಭ: ವಸ್ತ್ರಾಭರಣ ಕೊಳ್ಳುವಿರಿ. ಲೆಕ್ಕಪರಿಶೋಧಕರ ವಿದ್ಯಾಭ್ಯಾಸದಲ್ಲಿ ನಿರೀಕ್ಷಿತ ಪ್ರಗತಿ ಕಾಣುವಿರಿ. ತೀರ್ಥಯಾತ್ರೆಗೆ ಯೋಜನೆ. ಶುಭಸಂಖ್ಯೆ:1

ಮಿಥುನ: ಅಲಂಕಾರಿಕ ಸಾಮಗ್ರಿ ಮಾರಾಟದಲ್ಲಿ ಧನ ಲಾಭ. ಉದ್ಯೋಗಸ್ಥ ಮಹಿಳೆಯರಿಗೆ ಕಚೇರಿಯಲ್ಲಿ ಅನುಕೂಲಗಳು ಹೆಚ್ಚುತ್ತವೆ. ಶುಭಸಂಖ್ಯೆ: 7

ಕಟಕ: ಹಿರಿಯರ ಮಾರ್ಗದರ್ಶನದಿಂದ ಧನಾಗಮನ. ಬಿಜಿನೆಸ್ ಟೂರ್​ನಿಂದ ನಿರೀಕ್ಷಿತ ಲಾಭ. ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಶುಭಸಂಖ್ಯೆ:5

ಸಿಂಹ: ಕೃಷಿ ಮೂಲದಿಂದ ಆದಾಯ. ಧಾರ್ವಿುಕ ಕೆಲಸಗಳು ನೆರವೇರುತ್ತವೆ. ಮನೆಗೆ ಹೊಸ ವಸ್ತುಗಳ ಖರೀದಿ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ:3

ಕನ್ಯಾ: ತಾಯಿಯ ಆರೋಗ್ಯದಲ್ಲಿ ಸುಧಾರಣೆ. ಕಚೇರಿಯಲ್ಲಿ ಮೇಲಧಿಕಾರಿಗಳಿಂದ ಒತ್ತಡ. ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗಿ ಸಂತಸ. ಶುಭಸಂಖ್ಯೆ:3

ತುಲಾ: ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರ. ಸಂಗಾತಿಯೊಂದಿಗೆ ಪುಣ್ಯಕ್ಷೇತ್ರ ದರ್ಶನ. ನಿರ್ಧಾರ ತೆಗೆದುಕೊಳ್ಳಲು ಉದಾಸೀನ ಬೇಡ. ಶುಭಸಂಖ್ಯೆ:1

ವೃಶ್ಚಿಕ: ಆಹಾರ ಸೇವನೆಯಲ್ಲಿ ಎಚ್ಚರ ಇರಲಿ. ಕೇಂದ್ರಸರ್ಕಾರಿ ನೌಕರರಿಗೆ ವೇತನ ಹೆಚ್ಚಳ. ಪಾಲುದಾರಿಕೆಯಲ್ಲಿ ನಿರೀಕ್ಷೆಗೂ ಮೀರಿ ಲಾಭ. ಶುಭಸಂಖ್ಯೆ:2

ಧನಸ್ಸು: ಕಟ್ಟಡ ಸಾಮಗ್ರಿ ವ್ಯಾಪಾರಿಗಳಿಗೆ ಲಾಭ, ಪೊಲೀಸ್ ಸಿಬ್ಬಂದಿಗೆ ಸರ್ಕಾರದ ನೆರವು. ಹೋಟೆಲ್ ಮಾಲೀಕರಿಗೆ ಬಿಕ್ಕಟ್ಟು ನಿವಾರಣೆ. ಶುಭಸಂಖ್ಯೆ: 4

ಮಕರ: ಧರ್ಮ ಕಾರ್ಯಾಸಕ್ತಿ. ಹೊಸ ಸ್ನೇಹಿತರ ಪರಿಚಯ. ಸಹೋದರರ ಒಡನಾಟದಿಂದ ಪ್ರಯೋಜನ. ಉನ್ನತ ಶಿಕ್ಷಣಕ್ಕೆ ಅವಕಾಶ. ಶುಭಸಂಖ್ಯೆ: 9

ಕುಂಭ: ಕೌಟುಂಬಿಕ ಜೀವನದಲ್ಲಿ ಬದಲಾವಣೆ. ಮನರಂಜನೆ ಗಾಗಿ ಕಾಲಹರಣ. ಆಸ್ತಿ ನೋಂದಣಿಗೆ ಇದ್ದ ಅಡೆತಡೆ ನಿವಾರಣೆ ಆಗಲಿದೆ. ಶುಭಸಂಖ್ಯೆ: 7

ಮೀನ: ಜೋಳ, ರಾಗಿ ಕೃಷಿಕರಿಗೆ ಆಕಸ್ಮಿಕ ಧನಲಾಭ. ಬಂಧುಗಳೊಂದಿಗೆ ಆತ್ಮೀಯತೆ. ವಾಣಿಜ್ಯ ಉದ್ದೇಶಕ್ಕೆ ಭೂಮಿ ಖರೀದಿ ನಿರ್ಧಾರ. ಶುಭಸಂಖ್ಯೆ: 5