ಮೇಷ: ಹಣದ ಖರ್ಚಿನಲ್ಲಿ ನಿಯಂತ್ರಣವಿರಲಿ. ಬಂಧುಗಳೊಂದಿಗೆ ಔತಣ ಕೂಟ. ಆಸ್ತಿ ನೋಂದಣಿಗೆ ಅತ್ಯಂತ ಸೂಕ್ತ ಸಮಯ. ಶುಭಸಂಖ್ಯೆ: 9
ವೃಷಭ: ಅತಿ ಆತ್ಮವಿಶ್ವಾಸ ಒಳ್ಳೆಯದಲ್ಲ. ದುಷ್ಟ ಸ್ನೇಹಿತರಿಂದ ದೂರವಿರಿ. ಸಹೋದ್ಯೋಗಿಗಳ ಸಹಾಯದಿಂದ ಪ್ರಗತಿ ಸಾಧಿಸುವಿರಿ. ಶುಭಸಂಖ್ಯೆ: 6
ಮಿಥುನ: ಪತ್ರಕರ್ತರಿಗೆ ಪರಿಶ್ರಮಕ್ಕೆ ತಕ್ಕ ವರಮಾನ. ತಂಪು ಪಾನೀಯ ಮಾರಾಟದಿಂದ ಲಾಭ. ಉನ್ನತ ವಿದ್ಯಾಭ್ಯಾಸದ ಕನಸು ನನಸು. ಶುಭಸಂಖ್ಯೆ:8
ಕಟಕ: ಪುಣ್ಯಕ್ಷೇತ್ರಕ್ಕೆ ಪ್ರಯಾಣ. ಬಹಳ ವರ್ಷಗಳ ನಂತರ ಮಾಂಗಲ್ಯ ಭಾಗ್ಯ ಕೂಡಿ ಬರಲಿದೆ. ನಿಷ್ಠ್ಠುರ ವರ್ತನೆಯಿಂದ ಮನಸ್ತಾಪ. ಶುಭಸಂಖ್ಯೆ:2
ಸಿಂಹ: ಪತ್ರಕರ್ತರಿಗೆ ವೇತನ ಹೆಚ್ಚಾಗಲಿದೆ. ಜಿಮ್ ತರಬೇತುದಾರರಿಗೆ ಬೇಡಿಕೆ. ಸ್ನೇಹಿತರೊಂದಿಗೆ ಸೇರಿ ಸಮಾಜ ಸೇವೆ ಮಾಡುವಿರಿ. ಶುಭಸಂಖ್ಯೆ:5
ಕನ್ಯಾ: ಮಕ್ಕಳಿಗೆ ಅಭ್ಯಾಸದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಅಡಿಕೆ ವ್ಯಾಪಾರಗಳಿಗೆ ಉತ್ತಮ ಲಾಭ. ಆಸ್ತಿ ಖರೀದಿಯಲ್ಲಿ ಇದ್ದ ವಿಘ್ನ ಪರಿಹಾರ. ಶುಭಸಂಖ್ಯೆ:3
ತುಲಾ: ಔಷಧ ವ್ಯಾಪಾರದಲ್ಲಿ ನಷ್ಟ. ವಿದ್ಯಾಭ್ಯಾಸದಲ್ಲಿ ಪ್ರಗತಿ. ಹಿತ ಶತ್ರುಗಳಿಂದ ತೊಂದರೆ. ಸಾರ್ವಜನಿಕವಾಗಿ ನಿಮ್ಮ ಮಾತಿಗೆ ಮನ್ನಣೆ. ಶುಭಸಂಖ್ಯೆ: 7
ವೃಶ್ಚಿಕ: ಬಂಧುಗಳ ಸಹಾಯದಿಂದ ಸಾಲ ತೀರಿಸುವಿರಿ. ತಾಯಿಯ ಆರೋಗ್ಯದತ್ತ ಗಮನಹರಿಸಿ. ಅನಿರೀಕ್ಷಿತ ಕೀರ್ತಿ ಒದಗಿ ಬರಲಿದೆ.ಶುಭಸಂಖ್ಯೆ:3
ಧನಸ್ಸು: ಆದಾಯದ ಮೂಲದಲ್ಲಿ ಅಧಿಕ ವೃದ್ಧಿ. ನಿಂತ ಕಾರ್ಯಗಳು ಪುನರಾರಂಭವಾಗುವವು. ಪತ್ನಿಯ ಆರೋಗ್ಯದಲ್ಲಿ ಸುಧಾರಣೆ. ಶುಭಸಂಖ್ಯೆ:9
ಮಕರ: ಉದ್ಯೋಗ ಸಂಬಂಧಿ ಸಂದರ್ಶನಗಳಲ್ಲಿ ಯಶಸ್ಸು. ಹಿರಿಯರಿಂದ ಮಾರ್ಗದರ್ಶನ. ಆಹಾರ ಧಾನ್ಯಗಳ ಮಾರಾಟದಲ್ಲಿ ಲಾಭ. ಶುಭಸಂಖ್ಯೆ: 6
ಕುಂಭ: ಹಳೆಯ ಸ್ನೇಹಿತರು ಸಿಗುವರು. ಪ್ರತಿಷ್ಠಿತ ವ್ಯಕ್ತಿಯ ಭೇಟಿ. ಪ್ರತಿಭಾನ್ವಿತರಿಗೆ ಪುರಸ್ಕಾರ. ಸ್ನೇಹಿತರೊಂದಿಗೆ ಅನವಶ್ಯಕ ವಾಗ್ವಾದ. ಶುಭಸಂಖ್ಯೆ: 9
ಮೀನ: ಕ್ರೀಡಾಪಟುಗಳಿಗೆ ವಿದೇಶ ಪ್ರಯಾಣ. ಮಹಿಳೆಯರು ವಾಹನ ಚಾಲನೆಯಲ್ಲಿ ಎಚ್ಚರದಿಂದಿರಿ. ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ. ಶುಭಸಂಖ್ಯೆ: 1