ಮೇಷ: ನ್ಯಾಯವಾದಿಗಳಿಗೆ ಸ್ವಪ್ರಯತ್ನದಿಂದ ಕಾರ್ಯ ಕ್ಷೇತ್ರಗಳಲ್ಲಿ ಮುನ್ನಡೆ ಇದೆ. ಮಕ್ಕಳಿಂದಲೇ ವಾದ-ವಿವಾದ ಹೆಚ್ಚಾಗಬಹುದು. ಶುಭಸಂಖ್ಯೆ: 1
ವೃಷಭ: ಮುಕ್ತ ಭಾವದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ. ಆಶ್ಚರ್ಯಕರ ರೀತಿಯಲ್ಲಿ ವಿರೋಧಿಗಳು ಸಹ ಬೆಂಬಲಿಸುವರು. ಶುಭಸಂಖ್ಯೆ: 3
ಮಿಥುನ: ಹಿರಿಯರ ಸಕಾಲಿಕ ಸಲಹೆಯಿಂದ ನಷ್ಟ ತಪ್ಪಿಸಿಕೊಳ್ಳುವಿರಿ. ಮಕ್ಕಳ ಆರೋಗ್ಯದತ್ತ ಗಮನ ಅಗತ್ಯ. ಹಣದ ಹರಿವು ಸಾಮಾನ್ಯ. ಶುಭಸಂಖ್ಯೆ:1
ಕಟಕ: ಪದೇಪದೆ ನಿರ್ಧಾರ ಬದಲಿಸುವ ನಡವಳಿಕೆಯಿಂದಾಗಿ ಕುಟುಂಬದಲ್ಲಿ ಅಸಹನೆ. ಕರಿದ ಪದಾರ್ಥಗಳ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 5
ಸಿಂಹ: ಆತುರದ ನಿರ್ಧಾರ ಬೇಡ. ಸ್ತ್ರೀಯರಿಗೆ ಕುಟುಂಬ ವ್ಯವಹಾರದಲ್ಲಿ ತೃಪ್ತಿ. ಸಾಮಾಜಿಕ ಕಾರ್ಯದಲ್ಲಿ ಭಾಗವಹಿಸುವ ಅವಕಾಶ. ಶುಭಸಂಖ್ಯೆ:9
ಕನ್ಯಾ: ಸ್ನೇಹಿತರೊಂದಿಗೆ ವಿಚಾರವಿನಿಮಯ ಮಾಡಿ ಭಿನ್ನಾಭಿಪ್ರಾಯ ಹೋಗಲಾಡಿಸಿಕೊಳ್ಳುವಿರಿ. ಸಾಲ ಮರುಪಾವತಿ ಮಾಡುವಿರಿ. ಶುಭಸಂಖ್ಯೆ: 6
ತುಲಾ: ಸಂಪನ್ಮೂಲ ಕ್ರೋಡೀಕರಿಸಲು ಪ್ರಯತ್ನ ಮಾಡುವಿರಿ. ಕೃಷಿಕರಿಗೆ ಬೆಲೆ ಕುಸಿತದ ಆತಂಕ. ಸ್ವ ಉದ್ಯೋಗಿಗಳಿಗೆ ಉತ್ತಮ ಆದಾಯ.ಶುಭಸಂಖ್ಯೆ: 4
ವೃಶ್ಚಿಕ: ಅನಿರೀಕ್ಷಿತ ಮೂಲದಿಂದ ಆರ್ಥಿಕ ಸಹಾಯ. ಬಾಹ್ಯಾಕಾಶ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಭಡ್ತಿ. ಸರ್ಕಾರಿ ಕೆಲಸ ನಿಧಾನ. ಶುಭಸಂಖ್ಯೆ: 6
ಧನಸ್ಸು: ಭಾವೋದ್ವೇಗಕ್ಕೆ ಒಳಗಾಗುವ ಸಾಧ್ಯತೆ. ಬ್ಯಾಂಕ್ ವ್ಯವಹಾರದವರಿಗೆ ಮುನ್ನಡೆ. ಕೃಷಿಕರಿಗೆ ಬೆಳೆಯಿಂದ ಹೆಚ್ಚಿನ ಹಣ ಬರುತ್ತದೆ. ಶುಭಸಂಖ್ಯೆ: 5
ಮಕರ: ಸತ್ಯಶೋಧನೆಯಿಂದ ತಲೆದೋರಿರುವ ಆಂತರಿಕ ಗೊಂದಲ ನಿವಾರಣೆ. ಹಣಕಾಸಿನ ವಿಷಯದಲ್ಲಿ ಸ್ವಲ್ಪ ಜಾಗರೂಕತೆ ಅಗತ್ಯ. ಶುಭಸಂಖ್ಯೆ:8
ಕುಂಭ: ಕೃಷಿ ಯಂತ್ರ ಹೊಂದಿರುವವರಿಗೆ ಬಾಡಿಗೆಯಿಂದ ಆದಾಯ. ಪ್ರೀತಿ-ಪ್ರೇಮದಲ್ಲಿ ಹಿನ್ನಡೆ. ವಿದೇಶಿ ವ್ಯವಹಾರದಲ್ಲಿ ಮುನ್ನಡೆ. ಶುಭಸಂಖ್ಯೆ: 2
ಮೀನ: ಸಾಮರ್ಥ್ಯ ಅರಿತು ಕೆಲಸ ಆಯ್ಕೆಮಾಡಿಕೊಳ್ಳಿ. ನೌಕರಿಯಲ್ಲಿರುವವರಿಗೆ ಬಯಸಿದ್ದ ಸ್ಥಳಕ್ಕೆ ವರ್ಗಾವಣೆ ದೊರೆಯುವ ಸಾಧ್ಯತೆ. ಶುಭಸಂಖ್ಯೆ: 6