ನಿತ್ಯ ಭವಿಷ್ಯ 
ಜ್ಯೋತಿಷ್ಯ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸುಳ್ಳು ಮಾತಿನಿಂದಾಗಿ ಸಂಗಾತಿಯೊಂದಿಗೆ ವಿರಸ

ನಿತ್ಯ ಭವಿಷ್ಯ: ಈ ರಾಶಿಯವರಿಗಿಂದು ಸುಳ್ಳು ಮಾತಿನಿಂದಾಗಿ ಸಂಗಾತಿಯೊಂದಿಗೆ ವಿರಸ

ಮೇಷ: ಸರ್ಕಾರಿ ವ್ಯವಹಾರಗಳಿಂದ ಹಣ ಸಿಗಲಿದೆ. ವಿದ್ಯಾರ್ಥಿಗಳು ಯಶಸ್ಸಿನ ಮೆಟ್ಟಿಲು ಏರಲಿದ್ದೀರಿ. ಅನವಶ್ಯಕ ವೆಚ್ಚ ಮಾಡುವಿರಿ. ಶುಭಸಂಖ್ಯೆ: 8

ವೃಷಭ: ಉದ್ಯಮಿಗಳಿಗೆ ಅಧಿಕ ಲಾಭ. ಅಪರಿಚಿತರ ವಿಷಯದಲ್ಲಿ ಜಾಗ್ರತೆಯಿಂದಿರಿ. ಕುತಂತ್ರದಿಂದ ಹಣ ಸಂಪಾದನೆಗೆ ಯೋಚಿಸಬೇಡಿ. ಶುಭಸಂಖ್ಯೆ: 1

ಮಿಥುನ: ಅತಿಯಾದ ಆತ್ಮವಿಶ್ವಾಸದಿಂದ ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುವಿರಿ. ನಿಮ್ಮ ನಿರ್ಧಾರಕ್ಕೆ ಮಿತ್ರರ ಬೆಂಬಲವಿದೆ. ಕಾರ್ಯ ವಿಕಲ್ಪ. ಶುಭಸಂಖ್ಯೆ: 2

ಕಟಕ: ಮಾಡುವ ಕೆಲಸದಲ್ಲಿ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಅನಗತ್ಯ ಮಾತುಗಳಿಂದ ಕಲಹವಾಗುವ ಸಾಧ್ಯತೆ. ಸೌಜನ್ಯದಿಂದ ವರ್ತಿಸಿ. ಶುಭಸಂಖ್ಯೆ: 7

ಸಿಂಹ: ಅಂದುಕೊಂಡ ಗುರಿ ಸಾಧಿಸುವಿರಿ. ಪರರಿಗೆ ಸಹಾನುಭೂತಿ ತೋರುವಿರಿ. ಗೃಹ ನಿರ್ವಣಕ್ಕೆ ವಿಪರೀತ ಖರ್ಚು ಆದೀತು.ಶುಭಸಂಖ್ಯೆ:4

ಕನ್ಯಾ: ರಾಜಕೀಯ ಕ್ಷೇತ್ರದವರಿಗೆ ಗೊಂದಲ. ದೈವೀ ಚಿಂತನೆಯಿಂದ ಮನಶ್ಶಾಂತಿ. ಕೋಪದಿಂದ ಬಂಧುಗಳೊಂದಿಗೆ ಮನಸ್ತಾಪ. ಶುಭಸಂಖ್ಯೆ: 8

ತುಲಾ: ಋಣಮುಕ್ತರಾಗಲು ಉತ್ತಮ ಅವಕಾಶ ಸಿಗಲಿದೆ. ಸುಳ್ಳು ಮಾತಿನಿಂದಾಗಿ ಸಂಗಾತಿಯೊಂದಿಗೆ ವಿರಸ. ರೇಷ್ಮೆ ಕೃಷಿಯಲ್ಲಿ ಪ್ರಗತಿ. ಶುಭಸಂಖ್ಯೆ: 3

ವೃಶ್ಚಿಕ: ಆದಾಯಕ್ಕಿಂತ ಖರ್ಚು ಜಾಸ್ತಿ. ಪತಿಗೆ ಆರೋಗ್ಯದ ಸಮಸ್ಯೆ. ಸ್ಥಿರಾಸ್ತಿ ಮಾರಾಟಕ್ಕೆ ದಾಖಲೆ ಪತ್ರಗಳ ತೊಂದರೆ. ಕುಟುಂಬ ಸೌಖ್ಯ. ಶುಭಸಂಖ್ಯೆ: 8

ಧನಸ್ಸು: ವಿವಿಧ ರೀತಿಯ ಗೊಂದಲಗಳೊಂದಿಗೆ ಹೊಸ ಮನೆಯ ಪ್ರವೇಶ. ನ್ಯಾಯಾಲಯದ ಕಾರ್ಯಗಳಲ್ಲಿ ಮುನ್ನಡೆ. ಪರಸ್ಥಳವಾಸ. ಶುಭಸಂಖ್ಯೆ:1

ಮಕರ: ರಫ್ತು ಮಾರಾಟದಿಂದ ಲಾಭ. ಬಣ್ಣದ ಮಾತಿಗೆ ಮರುಳಾಗದಿರಿ. ಹಾರ್ಡ್​ವೇರ್ ವ್ಯಾಪಾರದಲ್ಲಿ ಲಾಭ. ಉದ್ಯೋಗದಲ್ಲಿ ಬಡ್ತಿ.ಶುಭಸಂಖ್ಯೆ:1

ಕುಂಭ: ನಿರುದ್ಯೋಗಿಗಳಿಗೆ ಐಟಿ ಉದ್ಯೋಗ ಸಿಗಲಿದೆ. ಸಂಗಾತಿಯ ಭಾವನೆಗಳಿಗೆ ಸ್ಪಂದಿಸುವಿರಿ, ತೀರ್ಥಯಾತ್ರೆ, ದೇವರ ದರ್ಶನ. ಶುಭಸಂಖ್ಯೆ: 6

ಮೀನ: ವಕೀಲರಿಗೆ ವಿಶೇಷ ದಿನ. ಸಾಂಸ್ಕೃತಿಕ ಕಾರ್ಯದಲ್ಲಿ ಪಾಲ್ಗೊಳ್ಳುವಿರಿ. ಆತ್ಮೀಯ ಸ್ನೇಹಿತನಿಂದ ವಂಚನೆ. ದಿನಾಂತ್ಯದಲ್ಲಿ ಶುಭ. ಶುಭಸಂಖ್ಯೆ: 9