ಮೇಷ: ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಹೊಸ ಜವಾಬ್ದಾರಿ ಹುಡುಕಿಕೊಂಡು ಬರಬಹುದು. ಹಣಕಾಸಿನ ವಿಷಯದಲ್ಲಿ ಎಚ್ಚರ. ಶುಭಸಂಖ್ಯೆ: 6
ವೃಷಭ: ಮಿತ್ರರನ್ನು ಭೇಟಿ ಮಾಡುವ ಸಾಧ್ಯತೆ. ಕುಟುಂಬದೊಂದಿಗೆ ಸಂತಸದ ಸಮಯ ಕಳೆಯುವಿರಿ. ಆಸ್ತಿ ಸಂಬಂಧ ಶುಭ ಸುದ್ದಿ. ಶುಭಸಂಖ್ಯೆ:1
ಮಿಥುನ: ಗೊಂದಲ ಪರಿಹಾರವಾಗಲಿದೆ. ಲಲಿತ ಕಲೆಗಳ ಅಧ್ಯಯನದಲ್ಲಿ ಪ್ರಗತಿ. ಒತ್ತಡ ಇದ್ದರೂ, ಯಶಸ್ವಿಯಾಗಿ ನಿಭಾಯಿಸುವಿರಿ. ಶುಭಸಂಖ್ಯೆ:3
ಕಟಕ: ಭಾವನಾತ್ಮಕ ನಿರ್ಧಾರ ಮುಂದೂಡಿ. ವೃತ್ತಿಯಲ್ಲಿ ಅಭಿಪ್ರಾಯಕ್ಕೆ ಬೆಲೆ ಸಿಗುತ್ತದೆ. ಪ್ರಯಾಣದ ಯೋಜನೆ ಯಶಸ್ವಿಯಾಗುತ್ತವೆ. ಶುಭಸಂಖ್ಯೆ: 9
ಸಿಂಹ: ವ್ಯವಹಾರದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಾರ್ವಜನಿಕ ಜೀವನದಲ್ಲಿ ಗೌರವ ಮತ್ತು ಮನ್ನಣೆ ಸಿಗುತ್ತದೆ. ಹೂಡಿಕೆಗೆ ಸುಸಮಯ. ಶುಭಸಂಖ್ಯೆ: 4
ಕನ್ಯಾ: ಆರ್ಥಿಕ ಸ್ಥಿತಿ ಸುಧಾರಣೆ. ಸಾಲಗಾರರಿಗೆ ಹಣ ಮರುಪಾವತಿ ಮಾಡುವಿರಿ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾದೀತು. ಶುಭಸಂಖ್ಯೆ:7
ತುಲಾ: ವ್ಯವಹಾರದಲ್ಲಿ ಪಾಲುದಾರಿಕೆಗಳು ಪ್ರಯೋಜನಕಾರಿ ಯಾಗುತ್ತವೆ. ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ಶುಭಸಂಖ್ಯೆ:3
ವೃಶ್ಚಿಕ: ಪಟ್ಟ ಶ್ರಮಕ್ಕೆ ತಕ್ಕ ಯಶಸ್ಸು. ರಹಸ್ಯ ವಿಚಾರಗಳನ್ನು ಯಾರಿಗೂ ಹೇಳಬೇಡಿ ಸಾರಿಗೆ ಇಲಾಖೆ ನೌಕರರಿಗೆ ವೇತನ ಹೆಚ್ಚಳ. ಶುಭಸಂಖ್ಯೆ: 6
ಧನಸ್ಸು: ಆಧ್ಯಾತ್ಮಿಕ ವಿಷಯದಲ್ಲಿ ಆಸಕ್ತಿ. ದೀರ್ಘಕಾಲದ ಯೋಜನೆ ಪ್ರಾರಂಭಕ್ಕೆ ಸೂಕ್ತ ಸಮಯ. ಉದ್ಯೋಗ ಬದಲಾವಣೆ ಸಾಧ್ಯತೆ. ಶುಭಸಂಖ್ಯೆ: 4
ಮಕರ: ಗೃಹ ನಿರ್ವಣದ ಕಾರ್ಯ ಪರಿಪೂರ್ಣವಾಗಲಿದೆ. ಇಂದು ಆರ್ಥಿಕ ಲಾಭಕ್ಕಿಂತ ಮಾನಸಿಕ ನೆಮ್ಮದಿ ಮುಖ್ಯವಾಗುತ್ತದೆ. ಶುಭಸಂಖ್ಯೆ: 4
ಕುಂಭ: ಸ್ನೇಹಿತರ ಸಹಾಯದಿಂದ ಹೊಸ ಅವಕಾಶ ಸಿಗಲಿದೆ. ಉನ್ನತ ಶಿಕ್ಷಣಕ್ಕೆ ಉತ್ತಮ ದಿನ. ರಕ್ಷಣಾ ಇಲಾಖೆಯಲ್ಲಿ ಉದ್ಯೋಗ. ಶುಭಸಂಖ್ಯೆ:3
ಮೀನ: ವೈದ್ಯಕೀಯ ವೃತ್ತಿಯಲ್ಲಿ ಯಶಸ್ಸು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸಿ. ಶುಭಸಂಖ್ಯೆ:2