ಮೇಷ: ಸ್ನೇಹಿತರಿಂದ ಹಣದ ಸಹಾಯ ಸಿಗಲಿದೆ. ಕೇಂದ್ರ ಸರ್ಕಾರಿ ನೌಕರರಿಗೆ ವರ್ಗಾವಣೆ. ಧಾರ್ವಿುಕ ಪುಸ್ತಕದ ವ್ಯಾಪಾರಿಗಳಿಗೆ ಲಾಭ. ಶುಭಸಂಖ್ಯೆ: 7
ವೃಷಭ: ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಆತಂಕದ ವಾತಾವರಣ. ಸ್ವಂತ ವ್ಯಾಪಾರದಲ್ಲಿ ಲಾಭ ಮಕ್ಕಳಿಗಾಗಿ ಅಧಿಕ ಖರ್ಚು. ಶುಭಸಂಖ್ಯೆ: 1
ಮಿಥುನ: ಬಸ್ ಮಾಲೀಕರಿಗೆ ಧನಲಾಭ. ಬಂಧುಗಳಿಂದ ಹಣಕಾಸಿನ ಸಹಾಯ ಸಿಗುವುದು. ನೀರಿನ ವ್ಯಾಪಾರದಲ್ಲಿ ಹಣ ಗಳಿಸುವಿರಿ. ಶುಭಸಂಖ್ಯೆ: 6
ಕಟಕ: ಅಲಂಕಾರಿಕ ವಸ್ತು ವ್ಯಾಪಾರದಲ್ಲಿ ಅಭಿವೃದ್ಧಿ. ಆರ್ಥಿಕ ಒತ್ತಡದಿಂದ ಅನಾರೋಗ್ಯ. ಅಡಿಕೆ, ಕಾಳುಮೆಣಸು ಬೆಳೆಗಾರರಿಗೆ ಲಾಭ. ಶುಭಸಂಖ್ಯೆ: 3
ಸಿಂಹ: ಆಹಾರ ಸೇವನೆಯಲ್ಲಿ ಎಚ್ಚರಿಕೆ ಇರಲಿ. ಉದ್ಯೋಗದಲ್ಲಿ ಇದ್ದ ಅತಂತ್ರತೆ ದೂರವಾಗಲಿದೆ. ದುಷ್ಟ ಸ್ನೇಹಿತರಿಂದ ದೂರವಿರಿ. ಶುಭಸಂಖ್ಯೆ: 8
ಕನ್ಯಾ: ಖಾಸಗಿ ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗ ಸಿಗಲಿದೆ. ದೈಹಿಕ ಕಸರತ್ತು ಕೇಂದ್ರದವರಿಗೆ ಉತ್ತಮ ಸಮಯ. ಕೂಡಿಟ್ಟ ಹಣ ಉಪಯೋಗಕ್ಕೆ ಬರಲಿದೆ. ಶುಭಸಂಖ್ಯೆ: 7
ತುಲಾ: ಅಡಿಕೆ ಬೆಳೆ ವ್ಯವಹಾರದಲ್ಲಿ ಹಣ. ಮೇಲಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ಸಂಶೋಧನಾ ಕ್ಷೇತ್ರದ ಉದ್ಯೋಗಿಗಳಿಗೆ ವರ್ಗ. ಶುಭಸಂಖ್ಯೆ:9
ವೃಶ್ಚಿಕ: ಸಂಗಾತಿಯಿಂದ ಸಾಲ ತೀರಿಸಲು ಸಹಾಯ.ಕೆಟ್ಟ ಆಲೋಚನೆಗಳನ್ನು ನಿಯಂತ್ರಿಸಿ. ಉದ್ಯೋಗದಲ್ಲಿ ಹೆಚ್ಚಿನ ಗಮನ ಹರಿಸಿ. ಶುಭಸಂಖ್ಯೆ:9
ಧನಸ್ಸು: ಪ್ರಯಾಣದಲ್ಲಿ ಹೊಸ ಪರಿಚಯ ಆಗಲಿದೆ. ತಂದೆಯಿಂದ ಗೃಹ ನಿರ್ವಣಕ್ಕೆ ಸಹಕಾರ, ಜಲೋತ್ಪನ್ನ ಮಾರಾಟದಲ್ಲಿ ಲಾಭ. ಶುಭಸಂಖ್ಯೆ:5
ಮಕರ: ತಾಯಿಯ ಆರೋಗ್ಯದಲ್ಲಿ ಚೇತರಿಕೆ. ಆಸ್ತಿ ವಿಚಾರದಲ್ಲಿ ಅನಿರೀಕ್ಷಿತ ತಿರುವು. ವಿದ್ಯಾರ್ಥಿಗಳಿಗೆ ವಿದೇಶ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 1
ಕುಂಭ: ಸ್ಥಿರಾಸ್ತಿ ಖರೀದಿಗೆ ನಿರ್ಧಾರ ಮಾಡುವಿರಿ. ನವದಂಪತಿಗಳಿಗೆ ಶುಭ ಸುದ್ದಿ, ಜೇನು ಕೃಷಿಕರಿಗೆ ಆರ್ಥಿಕ ಸಹಾಯ ದೊರೆಯಲಿದೆ. ಶುಭಸಂಖ್ಯೆ:3
ಮೀನ: ವ್ಯಾಪಾರದಲ್ಲಿ ಅಭಿವೃದ್ಧಿ. ದಿನಸಿ ಅಂಗಡಿ ಮಾಲೀಕರಿಗೆ ದ್ವಿಗುಣ ಲಾಭ. ಧಾರ್ವಿುಕ ಪ್ರಮುಖರಿಗೆ ಒತ್ತಡ ಕಡಿಮೆಯಾಗಲಿದೆ. ಶುಭಸಂಖ್ಯೆ: 7