ಜ್ಯೋತಿಷ್ಯ

ಇದು ದಾಂಪತ್ಯ ಜೀವನದ ಗುಟ್ಟು! ಇದನ್ನು ಪಾಲಿಸಿದರೆ ಸಂತೋಷ, ಪ್ರೀತಿ ನಿಮ್ಮದೆ... Chanakya Niti

Chanakya Niti : ಆಚಾರ್ಯ ಚಾಣಕ್ಯ ಅವರನ್ನು ಅವರ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದೂ ಕರೆಯಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಅವರು ಅನೇಕ ನೀತಿಗಳನ್ನು ರೂಪಿಸಿದರು. ಇಂದು ಅದನ್ನು ನಾವೆಲ್ಲರೂ ಚಾಣಕ್ಯ ನೀತಿ ಎಂದು ಕರೆಯುತ್ತಿದ್ದೇವೆ. ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಒಬ್ಬ ವ್ಯಕ್ತಿಯು ಈ ಗುಣಗಳನ್ನು ಹೊಂದಿದ್ದರೆ, ಅವರು ಜೀವನದಲ್ಲಿ ಯಶಸ್ವಿಯಾಗುವುದನ್ನು ಮತ್ತು ಕೆಟ್ಟ ಗುಣಗಳಿಂದ ದುರ್ಬಲವಾಗುವುದನ್ನು ವಿವರಿಸಿದ್ದಾರೆ. ಚಾಣಕ್ಯರ   ಅವರು ಹೇಳುವ ಕೆಲವು ಗಣಗಳನ್ನು ನಿಯಂತ್ರಿಸಿಕೊಂಡು ಹೋದರೆ ಗಂಡ- ಹೆಂಡತಿ ಸಂಬಂಧದಲ್ಲಿ ಯಾವುದೇ ಜಗಳ ಬರದೆ ಶಾಶ್ವತವಾಗಿ ಗಟ್ಟಿಯಾಗಿರುತ್ತದೆ ಎಂದು ಹೇಳಿದ್ದಾರೆ. ಈ ಕುರಿತಾಗಿ ನಾವು ಇಂದು ತಿಳಿದುಕೊಳ್ಳೋಣ...

ಯಾವುದೇ ಸಂಬಂಧವನ್ನು ಉಳಿಸಿಕೊಳ್ಳಲು ತ್ಯಾಗ ಮತ್ತು ತಾಳ್ಮೆ ಅಗತ್ಯ ಎಂದು ಆಚಾರ್ಯ ಚಾಣಕ್ಯ ನಂಬಿದ್ದರು. ನಿರಂತರವಾಗಿ ಹಠಮಾರಿಯಾಗಿರುವುದು ಅಥವಾ ನಿಮ್ಮ ಸಂಗಾತಿಯ ನ್ಯೂನತೆಗಳನ್ನು ಎತ್ತಿ ತೋರಿಸುವುದು ಸಂಬಂಧವನ್ನು ನಾಶಪಡಿಸುತ್ತದೆ. ಬದಲಾಗಿ, ನೀವು ನಿಮ್ಮ ಸಂಗಾತಿಯ ಸಾಮರ್ಥ್ಯಗಳಿಗೆ ಆದ್ಯತೆ ನೀಡಬೇಕು.

ಪರಸ್ಪರ ಗೌರವ:

ಗಂಡ ಮತ್ತು ಹೆಂಡತಿ ಪರಸ್ಪರ ಗೌರವಿಸಿದರೆ, ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಸಂಬಂಧದಲ್ಲಿ ಸಣ್ಣಪುಟ್ಟ ಘರ್ಷಣೆಗಳು ಇದ್ದರೂ ಕ್ಷಮಿಸುವ ಮನೋಭಾವ ಇರಬೇಕು. ಪರಸ್ಪರ ಗೌರವ ತೋರಿಸಬೇಕು.

ಸಂವಹ :

ಗಂಡ ಮತ್ತು ಹೆಂಡತಿಯ ನಡುವೆ ಸಂವಹನವಿಲ್ಲದಿದ್ದರೆ, ಸಂಬಂಧವು ದುರ್ಬಲಗೊಳ್ಳುತ್ತದೆ. ಗಂಡ ಮತ್ತು ಹೆಂಡತಿ ಎಲ್ಲವನ್ನೂ ಪರಸ್ಪರ ಚರ್ಚಿಸಬೇಕು, ಅದು ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ. ಗಂಡ ಮತ್ತು ಹೆಂಡತಿಯ ನಡುವೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವುದರಿಂದ ಸಂಬಂಧದಲ್ಲಿ ನಂಬಿಕೆ ಮತ್ತು ಅನ್ಯೋನ್ಯತೆ ಹೆಚ್ಚಾಗುತ್ತದೆ.

ನಂಬಿಕೆ:

ಗಂಡ ಹೆಂಡತಿ ನಡುವಿನ ಸಂಬಂಧಕ್ಕೆ ನಂಬಿಕೆಯೇ ಬಲವಾದ ಆಧಾರಸ್ತಂಭ. ಗಂಡ ಹೆಂಡತಿ ನಡುವೆ ನಂಬಿಕೆಯ ಕೊರತೆಯಿದ್ದರೆ ಸಂಬಂಧ ಉಳಿಯುವುದಿಲ್ಲ ಎಂದು ಚಾಣಕ್ಯ ನೀತಿ ಹೇಳುತ್ತದೆ.

ಮಾತಿನ ಮೇಲೆ ಹಿಡಿತ, ಕೋಪ ನಿಯಂತ್ರಣ:

ಕೋಪವು ಸಂಬಂಧಗಳ ದೊಡ್ಡ ಶತ್ರು. ಗಂಡ ಮತ್ತು ಹೆಂಡತಿ ಜಗಳವಾಡುವುದು ಸಹಜ. ಆದಾಗ್ಯೂ, ಅವರ ಮಾತುಗಳನ್ನು ನಿಯಂತ್ರಿಸುವುದರಿಂದ ಸಂಘರ್ಷ ಉಲ್ಬಣಗೊಳ್ಳುವುದನ್ನು ತಡೆಯಬಹುದು. ಕೋಪದಲ್ಲಿ ಮಾತನಾಡುವ ಕಠಿಣ ಮಾತುಗಳು ಸಂಬಂಧದಲ್ಲಿ ಬಿರುಕು ಉಂಟುಮಾಡಬಹುದು.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.