ಜ್ಯೋತಿಷ್ಯ

Chanakya Niti: ಈ 3 ಜನರಿಗೆ ಮಾತ್ರ ಭೂಮಿಯೂ ಸ್ವರ್ಗದಂತೆ ಆಗುತ್ತದೆ..!

Chanakya Niti: ಆಚಾರ್ಯ ಚಾಣಕ್ಯ ಅವರನ್ನು ಅವರ ಕಾಲದ ಅತ್ಯಂತ ಬುದ್ಧಿವಂತ ವ್ಯಕ್ತಿ ಎಂದೂ ಕರೆಯಲಾಗುತ್ತದೆ. ಅವರು ತಮ್ಮ ಜೀವಿತಾವಧಿಯಲ್ಲಿ ಅವರು ಅನೇಕ ನೀತಿಗಳನ್ನು ರೂಪಿಸಿದರು. ಇಂದು ಅದನ್ನು ನಾವೆಲ್ಲರೂ ಚಾಣಕ್ಯ ನೀತಿ ಎಂದು ಕರೆಯುತ್ತಿದ್ದೇವೆ. ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಒಬ್ಬ ವ್ಯಕ್ತಿಯು ಈ ಗುಣಗಳನ್ನು ಹೊಂದಿದ್ದರೆ, ಅವರು ಜೀವನದಲ್ಲಿ ಯಶಸ್ವಿಯಾಗುವುದನ್ನು ಮತ್ತು ಕೆಟ್ಟ ಗುಣಗಳಿಂದ ದುರ್ಬಲವಾಗುವುದನ್ನು ವಿವರಿಸಿದ್ದಾರೆ.

ಚಾಣಕ್ಯ ನೀತಿಯಲ್ಲಿ ಆಚಾರ್ಯ ಚಾಣಕ್ಯರು ಜೀವನದಲ್ಲಿ ನಿಜವಾದ ಸಂತೋಷವನ್ನು ಪಡೆಯುವುದಕ್ಕೆ ಕೆಲವು ಮುಖ್ಯ ಗುಣಗಳು ಅಥವಾ ಸಂಗತಿಗಳನ್ನು ಉಲ್ಲೇಖಿಸಿದ್ದಾರೆ. ಅವರ ಪ್ರಕಾರ, ಈ ಮೂರು ಸಂಗತಿಗಳು ಇರುವವರಿಗೆ (ಅಂದರೆ, ಈ ಮೂರು ಗುಣಗಳನ್ನು ಹೊಂದಿರುವ ಜನರಿಗೆ) ಭೂಮಿಯೇ ಸ್ವರ್ಗದಂತೆ ತೋರುತ್ತದೆ.

ವಿಧೇಯ ಪುತ್ರ

ನಿಮ್ಮ ಸಂತಾನ ವಿಧೇಯನಾಗಿದ್ದರೆ, ಸಂಸಾರದಲ್ಲಿ ಇದಕ್ಕೂ ದೊಡ್ಡ ಖುಷಿಯ ಸಂಗತಿಯೇ ಇಲ್ಲ. ವಿಧೇಯ ಪುತ್ರ ತಂದೆ-ತಾಯಿಯ ಬಗ್ಗೆ ಸಾಕಷ್ಟು ಕಾಳಜಿ ಹೊಂದಿರುತ್ತಾನೆ. ಅಷ್ಟೆ ಅಲ್ಲದೆ, ಪೋಷಕರ ವೃದ್ದಾಪ್ಯ ಜೀವನದಲ್ಲಿ ಯಾವುದೇ ರೀತಿಯ ಕಷ್ಟ ಬರದಂತೆ ನೋಡಿಕೊಳ್ಳುತ್ತಾನೆ.

ಇಚ್ಛೆಯಂತೆ ನಡೆದುಕೊಳ್ಳುವ ಸದ್ಗುಣದ ಪತ್ನಿ

ವ್ಯಕ್ತಿಯೊಬ್ಬನ ಸುಖ, ಸಂತೋಷ ಮತ್ತು ಖುಷಿಯ ಹಿಂದೆ ಆತನ ಪತ್ನಿಯ ಬಹುದೊಡ್ಡ ಪಾತ್ರವಿರುತ್ತದೆ. ವೈವಾಹಿಕ ಜೀವನದಲ್ಲಿ ಸುಖವಾಗಿರುವ ವ್ಯಕ್ತಿ, ವೃತ್ತಿಪರ ಜೀವನದಲ್ಲಿ ಸಫಲತೆ ಸಾಧಿಸುತ್ತಾನೆ. ಇಚ್ಛೆಯಂತೆ ನಡೆದುಕೊಳ್ಳುವ ಹಾಗೂ ಕೈ ಹಿಡಿದು ನಡೆಸುವ ಸದ್ಗುಣದ ಪತ್ನಿ ಪ್ರಾಪ್ತಿಯಾಗುವವರಿಗೆ ಈ ಭೂಮಿಯೇ ಸ್ವರ್ಗವಾಗಿ ಪರಿಣಮಿಸುತ್ತದೆ.

ಸಂಪಾದಿಸಿದ ಹಣದಲ್ಲಿ ಸಂತೋಷ

ತಾನು ಸಂಪಾದಿಸುವ ಹಣದಲ್ಲೇ ಸಂತುಷ್ಟನಾಗುವ ವ್ಯಕ್ತಿ, ಸದಾ ಸುಖಿಯಾಗಿರುತ್ತಾನೆ. ಸಂತೋಷದಿಂದಲೇ ಸುಖ ಪ್ರಾಪ್ತಿಯಾಗುತ್ತದೆ. ತಾನು ಗಳಿಸಿದ ಆಸ್ತಿ, ಹಣದಲ್ಲೇ ಸುಖ, ಸತೋಷ ಕಾಣುವವರಿಗೆ ಭೂಮಿಯೇ ಸ್ವರ್ಗವಂತೆ.(ಏಜೆನ್ಸೀಸ್​)