ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಸಾಲ ಪಡೆಯಬೇಡಿ! ಇದು ನಿಮ್ಮ ಮನೆಗೆ ಅಶುಭ.. Vastu Tips

ಭಾನುಪ್ರಿಯ ಡಿ.ಕೆ

ಪ್ರಮುಖ ಮುಖ್ಯಾಂಶಗಳು

  • ಪ್ರತಿಯೊಂದು ವಸ್ತುವಿಗೂ ಒಂದು ನಿರ್ದಿಷ್ಟ ಶಕ್ತಿ ಇರುತ್ತದೆ
  • ಕೆಲವು ತಪ್ಪು ನಿರ್ಧಾರಗಳು ನಕರಾತ್ಮಕ ಪರಿಣಾಮವನ್ನು ಬೀರಬಹುದು
  • ಗಡಿಯಾರ ಸಮಯ, ಅದೃಷ್ಟ, ಪ್ರಗತಿ ಮತ್ತು ಜೀವನದ ವೇಗದ ಸಂಕೇತವಾಗಿದೆ
Vastu Tips: ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿಯೊಂದು ವಸ್ತುವಿಗೂ ಒಂದು ನಿರ್ದಿಷ್ಟ ಶಕ್ತಿ ಇರುತ್ತದೆ. ಆದರೆ, ಕೆಲವೊಂದು ಸಂದರ್ಭದಲ್ಲಿ ಕೆಲವು ತಪ್ಪು ನಿರ್ಧಾರಗಳು ನಕರಾತ್ಮಕ ಪರಿಣಾಮವನ್ನು ಬೀರಬಹುದು. ಹಣವನ್ನು ಎರವಲು ಪಡೆಯುವುದು ಮತ್ತು ಸಾಲ ನೀಡುವ ಅಭ್ಯಾಸಗಳನ್ನು ಆದಷ್ಟು ಜನರು ಅನುಸರಿಸುತ್ತಾರೆ. ಇದರಿಂದ ಜೀವನದ ಸ್ಥಿರತೆ, ಸಂಬಂಧಗಳು, ಸಂಪತ್ತು, ಸಮೃದ್ಧಿ ಮತ್ತು ಮನಸ್ಸಿನ ಶಾಂತಿಯ ಮೇಲೆ ಪರಿಣಾಮ ಬೀರುತ್ತದೆ. ವಾಸ್ತು ಪ್ರಕಾರ, ಒಂದು ಮನೆಯಿಂದ ಇನ್ನೊಂದು ಮನೆಗೆ ವರ್ಗಾವಣೆ ಮಾಡುವ ವಸ್ತುಗಳು ಶಕ್ತಿಯನ್ನು ಬದಲಾಯಿಸುತ್ತವೆ. ಇದು ನೇರವಾಗಿ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ.

ಗಡಿಯಾರ

ವಾಸ್ತು ಪ್ರಕಾರ, ಗಡಿಯಾರವನ್ನು ಸಮಯ, ಅದೃಷ್ಟ, ಪ್ರಗತಿ ಮತ್ತು ಜೀವನದ ವೇಗದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ನಿಮ್ಮ ಗಡಿಯಾರವನ್ನು ಬೇರೆಯವರಿಗೆ ನೀಡುವುದು ಅಥವಾ ಬೇರೆಯವರ ಗಡಿಯಾರವನ್ನು ಧರಿಸುವುದು ಅಶುಭ ಎಂದು ತಿಳಿಸಿದ್ದಾರೆ. ನೀವೇನಾದರೂ, ನಿಮ್ಮ ಗಡಿಯಾರವನ್ನು ಅವರಿಗೆ ನೀಡಿದಾಗ ನಿಮ್ಮ ಒಳ್ಳೆಯ ಸಮಯವನ್ನು ನೀಡುತ್ತೀರಿ. ಹಾಗಾಗಿ ಈ ಅಭ್ಯಾಸ ಒಳ್ಳೆಯದಲ್ಲ.

ಟವೆಲ್

ಟವಲ್ ವೈಯಕ್ತಿಕ ಶಕ್ತಿಯನ್ನು ಹೊಂದಿದೆ. ಇದು ವ್ಯಕ್ತಿಯ ವೈಯಕ್ತಿಕ ಭಾವನೆಗಳು ಮತ್ತು ಮನಸ್ಥಿತಿಯ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಹಾಗಾಗಿ ನಿಮ್ಮ ಟವೆಲ್​ನ್ನು ಬೇರೆಯವರಿಗೆ ನೀಡೊಇದಾಗ ಅದು ನಕರಾತ್ಮಕ ಶಕ್ತಿಯನ್ನು ಬೀರುತ್ತದೆ. ಇದರಿಂದ ನಿಮ್ಮಲ್ಲಿ ಘರ್ಷಣೆ, ಜಗಳ, ಕೋಪ ಮಾಡಿಕೊಳ್ಳುವುದು ಪ್ರಾರಂಭವಾಗುತ್ತದೆ.

ಪೊರಕೆ

ಪೊರಕೆ ಕೇವಲ ಶುಚಿಗೊಳಿಸುವ ಸಾಧನವಲ್ಲ. ಇದು ಸಮೃದ್ಧಿ ಮತ್ತು ಲಕ್ಷ್ಮೀ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಹಾಗಾಗಿ ನೀವೇನಾದರೂ, ಮತ್ತೊದು ಮನೆಯ ಪೊರಕೆಯನ್ನು ಬೇರೆ ಮನೆಗೆ ಕಳುಹಿಸಿದರೆ, ಇದು ಮನೆಗೆ ನಕರಾತ್ಮಕ ಶಕ್ತಿಯನ್ನು ಬೀರುತ್ತದೆ. ವಾಸ್ತು ಪ್ರಕಾರ, ಈ ರೀತಿ ಮಾಡುವುದರಿಂದ ಲಕ್ಷ್ಮೀ ದೇವಿಯು ಕೋಪಿಸಿಗೊಳ್ಳುತ್ತಾಳೆ. ಇದು ಉದ್ವಿಗ್ನತೆ ಮತ್ತು ಸಂಕಷ್ಟವನ್ನು ಹೆಚ್ಚಿಸುತ್ತದೆ.

ಬಿಳಿ ವಸ್ತುಗಳನ್ನು ನೀಡಬೇಡಿ

ಸಂಜೆಯ ಸಮಯದಲ್ಲಿ ಶಕ್ತಿಯಲ್ಲಿ ಹಲವಾರು ರೀತಿಯ ಬದಲಾವಣೆಗಳು ಕಾಣುತ್ತೀರಿ. ಹಾಗಾಗಿ ಈ ಸಮಯದಲ್ಲಿ ಹಾಲು, ಮೊಸರು, ಸಕ್ಕರೆ, ಅಕ್ಕಿ ಮತ್ತು ಉಪ್ಪಿನಂತಹ ಬಿಳಿ ವಸ್ತುಗಳನ್ನು ದಾನ ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದರಿಂದ ಇದು ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ. (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.