Astrology: ದೇಶಾದ್ಯಂತ ನಾಳೆ ಮಕರ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ಇದು ಸೂರ್ಯನು ಮಕರ ರಾಶಿಗೆ ಸಂಚಾರ ನಡೆಸುವುದರಿಂದ ಮಕರ ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಅಂದಹಾಗೇ, ಈ ಸಂಕ್ರಾಂತಿಯಂದು ಸುಖ, ಸಮೃದ್ಧಿ ಮತ್ತು ಸಂಪತ್ತನ್ನು ನೀಡುವ ಶುಕ್ರನು ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯದ ಪ್ರಕಾರ, ಈ ಸಂಚಾರವು ಅನೇಕ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಸಂತೋಷ, ಸಂಪತ್ತನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯದಲ್ಲಿ, ಶುಕ್ರನನ್ನು ಆನಂದ, ಪ್ರೀತಿ, ಐಷಾರಾಮಿ ಮತ್ತು ಆರ್ಥಿಕ ಸಮೃದ್ಧಿಯ ಗ್ರಹವೆಂದು ಪರಿಗಣಿಸಲಾಗುತ್ತದೆ. ಶುಕ್ರನ ರಾಶಿ ಬದಲಾದಾಗ, ಅದು ಪ್ರೇಮ ಮಾತ್ರವಲ್ಲದೇ, ವೃತ್ತಿ, ಸಂಪತ್ತು ಮತ್ತು ಕುಟುಂಬದ ಮೇಲೂ ಗಂಭೀರ ಪರಿಣಾಮವನ್ನು ಬೀರುತ್ತದೆ ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ..
ವೃಷಭ ರಾಶಿ
ವೃಷಭ ರಾಶಿಯವರಿಗೆ ಈ ಶುಕ್ರ ಸಂಚಾರವು ತುಂಬಾ ಅನುಕೂಲಕರವಾಗಿದೆ. ಅವರ ದೀರ್ಘಕಾಲದ ಕಠಿಣ ಪರಿಶ್ರಮಕ್ಕೆ ಫಲ ಸಿಗುವ ಸಮಯ ಇದಾಗಿದೆ. ಕೆಲಸ ಮಾಡುವಂತಹ ಸ್ಥಳದಲ್ಲಿ ನೆಮ್ಮದಿ ಇರಲಿದ್ದು, ಬಡ್ತಿ, ಅಥವಾ ಜವಬ್ದಾರಿಗಳನ್ನು ಪಡೆಯಲಿದ್ದಾರೆ. ಕುಟುಂಬದಲ್ಲಿ ವೈವಾಹಿಕ ಜೀವನವು ಸಂತೋಷದಿಂದ ಮುಂದುವರೆಯಲಿದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆರ್ಥಿಕ ಪರಿಸ್ಥಿತಿಗಳು ಹೆಚ್ಚಾಗಲಿವೆ.
ತುಲಾ ರಾಶಿ
ತುಲಾ ರಾಶಿಯವರಿಗೆ, ಈ ಶುಕ್ರ ಸಂಚಾರವು ಈ ಜನರಿಗೆ ಅನೇಕ ಸವಲತ್ತುಗಳನ್ನು ಮಾಡಿಕೊಡಲಿದೆ. ಕುಟುಂಬದೊಂದಿಗೆ ಸಂಬಂಧಗಳು ಸುಧಾರಿಸುತ್ತವೆ. ಪರಸ್ಪರ ತಿಳುವಳಿಕೆ ಬೆಳೆಯುತ್ತದೆ. ಉದ್ಯೋಗಿಗಳು ಕಚೇರಿಗಳಲ್ಲಿ ಉತ್ತಮ ವಾತಾವರಣವನ್ನು ಹೊಂದಲಿದ್ದೀರಿ. ಆರ್ಥಿಕ ಲಾಭಗಳು ಸಂತೋಷವನ್ನು ನೀಡಲಿವೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡುತ್ತವೆ.
ಮೀನ ರಾಶಿ
ಈ ಸಂಚಾರವು ಮೀನ ರಾಶಿಯವರಿಗೆ ಆರ್ಥಿಕ ಬಲವನ್ನು ನೀಡುತ್ತದೆ. ಹಳೆಯ ಹೂಡಿಕೆಗಳು, ಆಸ್ತಿ ಅಥವಾ ಮುಂಬರುವ ಲಾಭಗಳಿಂದ ಲಾಭ ಪಡೆಯುವ ಸಾಧ್ಯತೆಯಿದೆ. ಕೋರ್ಟ್, ಕಛೇರಿಯ ಕೆಲಸಗಳು ಮುಗಿಯವಿವೆ. ವೈವಾಹಿಕ ಸಾಮರಸ್ಯ ಹೆಚ್ಚಾಗಲಿದ್ದು, ಕುಟುಂಬದೊಂದಿಗೆ ಸಂತೋಷದ ವಾತಾವರಣ ಸಿಗಲಿದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.