Astrology (ಸಾಂದರ್ಭಿಕ ಚಿತ್ರ) 
ಜ್ಯೋತಿಷ್ಯ

ಬಾಬಾ ವಂಗಾ ಭವಿಷ್ಯವಾಣಿ: ಮುಂದಿನ 8 ತಿಂಗಳು ಈ ರಾಶಿಗಳ ಪಾಲಿಗೆ ಅಕ್ಷರಶಃ ಸ್ವರ್ಗ! Astrology

Astrology: ಪ್ರಸಿದ್ಧ ಬಲ್ಗೇರಿಯನ್ ಜ್ಯೋತಿಷಿ ಬಾಬಾ ವೆಂಗಾ ಅವರು ತಮ್ಮ ನಿಖರವಾದ ಭವಿಷ್ಯವಾಣಿಗಳಿಗಾಗಿ ಇನ್ನೂ ಸುದ್ದಿಯಲ್ಲಿದ್ದಾರೆ. ಅವರ ಭವಿಷ್ಯವಾಣಿಗಳು ಹೆಚ್ಚಾಗಿ ಅಸ್ಪಷ್ಟವಾಗಿರುತ್ತವೆ. ಆದಾಗ್ಯೂ, ಜಾಗತಿಕ ಆರ್ಥಿಕ ಬಿಕ್ಕಟ್ಟು, ನೈಸರ್ಗಿಕ ವಿಕೋಪಗಳು, ಮೂರನೇ ಮಹಾಯುದ್ಧ, ಅನ್ಯಲೋಕದ ಸಂಪರ್ಕ ಮತ್ತು AI ನ ಪ್ರಾಬಲ್ಯದಂತಹ ವಿಚಾರಗಳಲ್ಲಿ ಬಾಬಾ ವೆಂಗಾ ಅವರ 2026 ರ ಭವಿಷ್ಯವಾಣಿಗಳು ಖಂಡಿತವಾಗಿಯೂ ಚಿಂತಾಜನಕವಾಗಿದೆ.
ಬಾಬಾ ವಂಗಾ ಕೆಲವೊಂದು ಸಕರಾತ್ಮಕ ವಿಷಯಗಳನ್ನು ಸಹ ಹೇಳುತ್ತಾರೆ. ಅವುಗಳಲ್ಲಿ ಕೆಲವು ಮೂಲಗಳು ತಮ್ಮ ವೈರಲ್​ ಭವಿಷ್ಯವಾಣಿಗಳನ್ನು ಸೂಚಿಸಿವೆ. ಆದಾಗ್ಯೂ, ಅವರ ಪ್ರಕಾರ, ಈ ವರ್ಷ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ಅದೃಷ್ಟಶಾಲಿಯಾಗಲಿದೆ ಎಂದು ಹೇಳಿದ್ದಾರೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ...

ವೃಷಭ ರಾಶಿ

ವೃಷಭ ರಾಶಿಯವರಿಗೆ ತಮ್ಮ ಕಠಿಣ ಪರಿಶ್ರಮದಿಂದ ತಕ್ಕ ಪ್ರತಿಫಲ ದೊರೆಯುತ್ತದೆ ಎಂದು ಹೇಳಲಾಗುತ್ತದೆ. ಉದ್ಯೋಗಿಗಳಿಗೆ ಸಂಬಳ ಹೆಚ್ಚಾಗಲಿದೆ. ಹೂಡಿಕೆದಾರರಿಗೆ ಉತ್ತಮ ಲಾಭಗಳು ಸಿಗಲಿವೆ. ಕುಟುಂಬದಲ್ಲಿ ಸಂತೋಷ ಹೆಚ್ಚಾಗಲಿದ್ದು, ತಂದೆ-ತಾಯಿ ಸಲಹೆಗಳಿಂದ ಕೆಲಸವನ್ನು ಮುನ್ನಡೆಸಲಿದ್ದೀರಿ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ಹಸಿರು ಬಣ್ಣವನ್ನು ಅದೃಷ್ಟವೆಂದು ಪರಿಗಣಿಸಲಾಗುತ್ತದೆ.

ಸಿಂಹ ರಾಶಿ

ಸಿಂಹ ರಾಶಿಯಲ್ಲಿ ಜನಿಸಿದ ಜನರಿಗೆ ಈ ವರ್ಷ ಬಹಳ ಪ್ರಯೋಜನ ಎಂದು ಹೇಳಲಾಗುತ್ತದೆ. ಇದು ಆರ್ಥಿಕ ಬೆಳವಣಿಗೆಗೆ ಕಾರಣವಾಗಲಿದೆ. ಸ್ವಂತ ಉದ್ಯೋಗ ಹೊಂದಿದವರಿಗೆ ಕೆಲಸದಲ್ಲಿ ಬಡ್ತಿ ಸಿಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಒಳ್ಳೆಯ ಕೆಲಸಗಳಿಗೆ ತೆರಳಲಿದ್ದೀರಿ. ದುರಂಹಕಾರವನ್ನು ತಪ್ಪಿಸಿ ಇದರಿಂದ ಒಳ್ಳೆಯದಾಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದ್ದು, ಸಂಗಾತಿಯೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಲಿದ್ದೀರಿ.

ಕುಂಭ ರಾಶಿ

2026 ರ ಈ ಸಮಯವು ತಂತ್ರಜ್ಞಾನ ಸಂಬಂಧಿತ ಉದ್ಯಮಗಳಲ್ಲಿ ಯಶಸ್ಸನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತದೆ. ಹಳೆಯ ಆಲೋಚನೆಗಳು ಹೊಸ ರೀತಿಯಲ್ಲಿ ಪ್ರಯತ್ನಿಸುವ ಮೂಲಕ ಹಣ ಗಳಿಸಲು ಸಾಧ್ಯವಾಗುತ್ತದೆ. ಸಾಮಾಜಿಕ ಚಟುವಟಿಕೆಗಳಿಂದ ನೀವು ಊಹಿಸಲಾಗದ ಪ್ರಯೋಜನಗಳನ್ನು ಪಡೆಯಲಿದ್ದೀರಿ. ಉದ್ಯೋಗಿಗಳು ಕಚೇರಿಗಳಲ್ಲಿ ಪ್ರಶಂಸೆಯನ್ನು ಪಡೆಯಲಿದ್ದೀರಿ. ಶನಿವಾರ ಎಣ್ಣೆಯನ್ನು ದಾನ ಮಾಡಿ ಎಲ್ಲವೂ ಶುಭವಾಗಲಿದೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.