Astrology (ಸಾಂದರ್ಭಿಕ ಚಿತ್ರ) 
ಜ್ಯೋತಿಷ್ಯ

30 ವರ್ಷಗಳ ಬಳಿಕ ಶುಕ್ರ-ಶನಿ ಮಹಾಸಂಗಮ: ಈ ರಾಶಿಯವರಿಗೆ ಶುಕ್ರ ದೆಸೆ ಆರಂಭ; ಹಣದ ಹೊಳೆಯೇ ಹರಿಯಲಿದೆ.. Astrology

Astrology: ಜ್ಯೋತಿಷ್ಯದ ಪ್ರಕಾರ, ಎರಡು ಗ್ರಹಗಳು ಒಂದೇ ರಾಶಿಯಲ್ಲಿ ನೆಲೆಗೊಂಡಾಗ ಅದರ ಪರಿಣಾಮ ಎಲ್ಲಾ ರಾಶಿಯಲ್ಲಿಯೂ ಕಂಡುಬರುತ್ತದೆ. ಪ್ರಸ್ತುತ, ಶುಕ್ರ ಮತ್ತು ಶನಿಯು ಮೀನ ರಾಶಿಯಲ್ಲಿದ್ದಾರೆ. ಇದರ ಸಂಯೋಗವು ಮಾರ್ಚ್​ 26 ರವರೆಗೆ ಇರವುದರಿಂದ ಇದು ಅಪರೂಪದ ಸಂಯೋಗ ಎಂದು ಕರೆಯಲಾಗುತ್ತದೆ.
ಜ್ಯೋತಿಷ್ಯ ನಂಬಿಕೆಗಳ ಪ್ರಕಾರ, ಈ ಅವಧಿಯಲ್ಲಿ ಹೆಚ್ಚಿನ ಜನರಿಗೆ ಹಣ,ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ಸಕರಾತ್ಮಕ ಬದಲಾವಣೆಯನ್ನು ಕಾಣಬಹುದು ಎಂದು ಹೇಳಲಾಗುತ್ತದೆ. ಕೆಲವೊಂದು ರಾಶಿಯವರು ಈ ಸಮಯದಲ್ಲಿ ಆರ್ಥಿಕ ಪ್ರಗತಿಯನ್ನು ಪಡೆಯುತ್ತಾರೆ. ಹಾಗಿದ್ದರೆ, ಗ್ರಹಗಳ ಸಂಯೋಗವು ಯಾವ ರಾಶಿಯವರಿಗೆ ಲಾಭ ಎಂದು ನೋಡೋಣ ಬನ್ನಿ...

ವೃಷಭ ರಾಶಿ

ವೃಷಭ ರಾಶಿಯವರಿಗೆ ಈ ಸಮಯವು ಆರ್ಥಿಕವಾಗಿ ಪರಿಹಾರ ತರುವಂತಾದ್ದಾಗಿದೆ. ಈ ಜನರು ಆದಾಯವನ್ನು ಹೆಚ್ಚಿಸಿಕೊಳ್ಳುವ ಹೊಸ ಮಾರ್ಗಗಳನ್ನು ತೆರೆದುಕೊಳ್ಳಲಿದ್ದಾರೆ. ಕೆಲಸ ಮಾಡುತ್ತಿರುವವರಿಗೆ ಬಡ್ತಿ, ಜವಬ್ದಾರಿಗಳು ಸಿಗುವಂತಹ ಸಮಯ ಇದಾಗಿದೆ. ಉದ್ಯಮಿಗಳು ಲಾಭವನ್ನು ನಿರೀಕ್ಷಿಸಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದ್ದು, ವೈವಾಹಿಕ ಜೀವನವು ಸಾಮರಸ್ಯದಿಂದ ಮುಂದುವರೆಯಲಿದೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ಸಮಯದಲ್ಲಿ ವೃತ್ತಿ ಬದಲಾವಣೆಗಳು ಕಂಡುಬರಲಿವೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸಗಳು ಕ್ರಮೇಣ ಪೂರ್ಣಗೊಳ್ಳಲಿವೆ. ಕಚೇರಿಯಲ್ಲಿ ಅಧಿಕಾರಿಗಳಿಂದ ಬೆಂಬಲ ಸಿಗಬಹುದು. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಜೊತೆಗೆ ಅಧಿಕ ಖರ್ಚು ಕಡಿಮೆಯಾಗಲಿದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಬಹುದು. ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗಲಿದ್ದು, ಹಳೆಯ ಸ್ನೇಹಿತರ ಭೇಟಿಯಿಂದಾಗಿ ಸಂತೋಷದಿಂದ ಇರಲಿದ್ದೀರಿ.

ತುಲಾ ರಾಶಿ

ಈ ಸಮಯವು ತುಲಾ ರಾಶಿಯವರಿಗೆ ಅದೃಷ್ಟ ತರುವಂತ ಸಮಯವಾಗಿದೆ. ವ್ಯವಹಾರದಲ್ಲಿರುವವರಿಗೆ ಉತ್ತಮ ಲಾಭಗಳಾಗುವ ನಿರೀಕ್ಷೆ ಇದೆ. ಹಳೆಯ ಹೂಡಿಕೆಗಳು ಲಾಭವನ್ನು ನಿರೀಕ್ಷಿಸಲಿವೆ. ಪಾಲುದಾರಿಕೆಯಲ್ಲಿ ಉತ್ತಮ ಪ್ರಯೋಜನಗಳನ್ನು ಪಡೆಯಲಿದ್ದೀರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ. ಪ್ರೇಮ ಸಂಬಂಧಗಳು ಸ್ಥಿರತೆಯನ್ನು ಕಂಡುಕೊಳ್ಳಬಹುದು. ಕೆಲಸದಲ್ಲಿ ನಿಮಗೆ ಹೊಸ ಜವಾಬ್ದಾರಿಗಳು ಸಿಗಲಿವೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.