Astrology ಸಾಂದರ್ಭಿಕ ಚಿತ್ರ
Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳ ಚಲನೆ ಮತ್ತು ರಾಶಿ ಪರಿವರ್ತನೆಗೆ ಅತ್ಯಂತ ಮಹತ್ವದ ಸ್ಥಾನವಿದೆ. ಗ್ರಹಗಳು ಕಾಲಕಾಲಕ್ಕೆ ತಮ್ಮ ಸ್ಥಾನವನ್ನು ಬದಲಾಯಿಸುವ ಮೂಲಕ ಶುಭ ಮತ್ತು ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ. ಪ್ರಸ್ತುತ 2026 ರ ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಕೆಲವು ಪ್ರಮುಖ ಗ್ರಹಗಳ ಅತ್ಯಂತ ಅಪರೂಪದ ಹಾಗೂ ಶುಭ ಸಂಯೋಜನೆಯಿಂದಾಗಿ ಅತ್ಯಂತ ಶಕ್ತಿಶಾಲಿ ಮತ್ತು ಸಕಾರಾತ್ಮಕ ಯೋಗಗಳಲ್ಲಿ ಒಂದಾದ ‘ಗಜಲಕ್ಷ್ಮಿ ರಾಜಯೋಗ’ ಸೃಷ್ಟಿಯಾಗುತ್ತಿದೆ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಗಜಲಕ್ಷ್ಮಿ ರಾಜಯೋಗವನ್ನು ಅತ್ಯಂತ ಮಂಗಳಕರ ಮತ್ತು ಸಂಪತ್ತು, ಐಶ್ವರ್ಯ, ಸಮೃದ್ಧಿಯನ್ನು ತರುವ ಯೋಗ ಎಂದು ಪರಿಗಣಿಸಲಾಗಿದೆ. ಜ್ಯೋತಿಷಿಗಳ ಪ್ರಕಾರ, ಈ ರಾಜಯೋಗದ ಪ್ರಭಾವದಡಿಯಲ್ಲಿ ಮುಂದಿನ ಕೆಲವು ವಾರಗಳಲ್ಲಿ ಪ್ರಮುಖವಾಗಿ 3 ರಾಶಿಚಕ್ರದ ಚಿಹ್ನೆಗಳ ಜೀವನದಲ್ಲಿ ದೊಡ್ಡ ಮಟ್ಟದ ಸಕಾರಾತ್ಮಕ ಬದಲಾವಣೆಗಳು ಕಂಡುಬರಲಿವೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ....
ವೃಷಭ ರಾಶಿ
ಗಜಲಕ್ಷ್ಮಿ ರಾಜಯೋಗದ ಪ್ರಭಾವದಿಂದ, ವೃಶ್ಚಿಕ ರಾಶಿಯವರ ಆರ್ಥಿಕ ಸ್ಥಿತಿ ಹೆಚ್ಚಾಗಲಿದೆ. ಬಹಳ ದಿನಗಳಿಂದ ಸಿಲುಕಿಕೊಂಡಿದ್ದ ಹಣವನ್ನು ಮರಳಿ ಪಡೆಯುವ ಸಾಧ್ಯತೆಯಿದೆ. ವ್ಯವಹಾರದಲ್ಲಿ ಹೊಸ ಹೂಡಿಕೆಗಳು ಅಧಿಕ ಲಾಭವನ್ನು ನೀಡಲಿದೆ. ಉದ್ಯೋಗಿಗಳಿಗೆ ಬಡ್ತಿ, ಸಂಬಳ ಹೆಚ್ಚಾಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಸಿಗಲಿದೆ.
ಸಿಂಹ ರಾಶಿ
ಈ ಸಮಯದಲ್ಲಿ ಸಿಂಹ ರಾಶಿಯವರಿಗೆ ಅದೃಷ್ಟದ ಚಕ್ರ ತಿರುಗುವ ಸಾಧ್ಯತೆಯಿದೆ. ಉದ್ಯೋಗಿಗಳಿಗೆ ಕೆಲಸದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ ಪಡೆಯುವ ಸಾಧ್ಯತೆ ಇದೆ. ಹೊಸ ಉದ್ಯೋಗವಕಾಶಗಳು ಹುಡುಕಿಕೊಂಡು ನಿಮ್ಮ ಬಳಿ ಬರಲಿವೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಬಹುದು. ದೀರ್ಘಕಾಲದ ಆಸೆ ಈಡೇರುವ ಸಾಧ್ಯತೆಯೂ ಇದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ಸಂಗಾತಿಯೊಂದಿಗೆ ದೂರ ಪ್ರಯಾಣ ನಡೆಸಲಿದ್ದೀರಿ.
ತುಲಾ ರಾಶಿ
ಗಜಲಕ್ಷ್ಮಿ ರಾಜಯೋಗವು ತುಲಾ ರಾಶಿಯವರಿಗೆ ಆರ್ಥಿಕ ಸಮೃದ್ಧಿ ಮತ್ತು ಯಶಸ್ಸನ್ನು ತರಲಿದೆ. ಈ ಜನರು ವ್ಯವಹಾರದಲ್ಲಿ ದೊಡ್ಡ ಒಪ್ಪಂದಗಳನ್ನು ಮಾಡಿಕೊಳ್ಳಲಿದ್ದೀರಿ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿದೆ. ವಿದ್ಯಾರ್ಥಿಗಳಿಗೆ ಈ ಸಮಯವು ಉತ್ತಮವಾಗಲಿದ್ದು, ವಿದ್ಯಾಭ್ಯಾಸದಲ್ಲಿ ಉನ್ನತಿ ಪಡೆಯಲಿದ್ದೀರಿ. ಉದ್ಯೋಗ ಹುಡುಕುತ್ತಿರುವವರಿಗೆ ಈ ಸಮಯವು ಉತ್ತಮವಾಗಲಿದೆ. ಕುಟುಂಬ ಸಂಬಂಧಗಳು ಬಲಗೊಳ್ಳಲಿದ್ದು, ದಾಂಪತ್ಯ ಜೀವನದಲ್ಲಿ ಸಂತೋಷ ಕಾಣಲಿದ್ದೀರಿ.
ಜ್ಯೋತಿಷಿಗಳ ಪ್ರಕಾರ, ಗಜಲಕ್ಷ್ಮಿ ರಾಜಯೋಗದ ಶುಭ ಪ್ರಭಾವವು ಈ ಮೂರು ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ಹಣ, ಗೌರವ ಮತ್ತು ಯಶಸ್ಸಿನ ಹೊಸ ಬಾಗಿಲುಗಳನ್ನು ತೆರೆಯುತ್ತದೆ. ಆದಾಗ್ಯೂ, ವ್ಯಕ್ತಿಯ ಜನ್ಮ ಕುಂಡಲಿಯನ್ನು ಅವಲಂಬಿಸಿ ಫಲಿತಾಂಶಗಳು ಬದಲಾಗಬಹುದು ಎಂದು ತಜ್ಞರು ನಂಬುತ್ತಾರೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.