Astrology: ಇನ್ನೇನು ಕೆಲವೇ ದಿನಗಳಲ್ಲಿ 2026 ಹೊಸ ವರ್ಷ ಆರಂಭವಾಗಲಿದೆ. ಹಲವಾರು ಜನರು ಈ ವರ್ಷವನ್ನು ಬರಮಾಡಿಕೊಳ್ಳಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಆದಾಗ್ಯೂ, ಜ್ಯೋತಿಷ್ಯದ ಪ್ರಕಾರ, ಕೆಲವೊಂದು ರಾಶಿಗಳ ಮೇಲೆ ಶನಿಯ ಸಾಡೇ ಸತಿ ಮತ್ತು ಧೈರ್ಯ ಪ್ರಭಾವ ಬೀರುತ್ತದೆಯಂತೆ.
ಜ್ಯೋತಿಷ್ಯದ ಪ್ರಕಾರ, ಹೊಸ ವರ್ಷದಲ್ಲಿ ಶನಿಯು ವರ್ಷವಿಡೀ ಮೀನ ರಾಶಿಗೆ ಚಲಿಸುತ್ತಾನೆ. ಶನಿಯ ಸಂಚಾರದಿಂದಾಗಿ ಮೀನ ರಾಶಿಯ ಜೊತೆಗೆ, ಕುಂಭ ಮತ್ತು ಮೇಷ ರಾಶಿಯ ಮೇಲೂ ಸಾಡೇ ಸಾತಿಯ ಪರಿಣಾಮ ಹೆಚ್ಚಾಗುತ್ತದೆ. ಈ ವರ್ಷ ಶನಿಯ ಧೈರ್ಯ ಪ್ರಭಾವವು ಮತ್ತು ಧನು ರಾಶಿಯ ಮೇಲೂ ಇರುತ್ತದೆ. ಈ ಸಮಯದಲ್ಲಿ ರಾಹು ಕುಂಭಕ್ಕೆ ಮತ್ತು ಕೇತು ಸಿಂಹ ರಾಶಿಗೆ ಸ್ಥಳಾಂತರಗೊಂಡಾಗ ಶನಿಯ ಪ್ರಭಾವವು ಹೆಚ್ಚಾಗುತ್ತದೆ.
ಈ ಶನಿಯ ಸಂಚಾರದಿಂದಾಗಿ ಕೆಲವೊಂದು ರಾಶಿಯವರು ಅನೇಕ ಕ್ಷೇತ್ರಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಈ ರೀತಿಯ ಪರಿಹಾರಗಳನ್ನು ತೆಗೆದುಕೊಂಡಾಗ ಸಾಡೇ ಸತಿನಿಂದ ಆಗುವಂತಹ ಕೆಲವೊಂದು ಸಮಸ್ಯೆಗಳಿಂದ ದೂರಾಗಬಹುದು. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ...
ಮೀನ ರಾಶಿ
2026 ರಲ್ಲಿ ಮೀನ ರಾಶಿಯವರು ಶನಿಯ ಸಾಡೇ ಸತಿಯ ಮೊದಲ ಹಂತವನ್ನು ಅನುಭವಿಸುತ್ತಾರೆ. ಇದರರ್ಥ ಸಾಡೇ ಸತಿ ನಿಮ್ಮ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ನೀವು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಸಮಯವು ಸಾಕಷ್ಟು ಸವಾಲಿನದ್ದಾಗಿರುತ್ತದೆ. ಈ ಸಮಯದಲ್ಲಿ ಆರ್ಥಿಕ ಲಾಭಕ್ಕಾಗಿ ಉತ್ತಮ ಅವಕಾಶಗಳನ್ನು ಪಡೆಯಲಿದ್ದೀರಿ. ಈ ಸಮಯದಲ್ಲಿ ನೀವು ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವೆಚ್ಚಗಳು ಇದ್ದಕ್ಕಿಂದಂತೆ ಹೆಚ್ಚಾಗಬಹುದು.
ಪರಿಹಾರ: ಪ್ರತಿದಿನ ಪಕ್ಷಿಗಳಿಗೆ ಆಹಾರವನ್ನು ನೀಡಿ ಮತ್ತು ನಿಯಮಿತವಾಗಿ ಸೂರ್ಯನಿಗೆ ನೀರನ್ನು ಅರ್ಪಿಸಿ.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಜನಿಸಿದ ಜನರು ಶನಿಯ ಧೈಯದಿಂದ ಹೆಚ್ಚು ಪ್ರಭಾವಿತರಾಗುತ್ತಾರೆ. ನಿಮ್ಮ ಆದಾಯದ ಮೂಲವು ಸೀಮಿತವಾಗಿರುತ್ತದೆ. ಹೊಸ ವರ್ಷದಲ್ಲಿ ನೀವು ಗೊಂದಲಕ್ಕೆ ಒಳಗಾಗಲಿದ್ದೀರಿ. ನೀವು ಈ ಸಮಯದಲ್ಲಿ ಚಿಕ್ಕ ಪುಟ್ಟ ತೊಂದರೆಗಳಿಗೂ ಭಯಪಡುತ್ತಿರಿ. ಇದರಿಂದ ನಿಮ್ಮ ಕುಟುಂಬದಲ್ಲಿ ಜಗಳಗಳಾಗಬಹುದು. ಈ ಜನರಿಗೆ 2027 ರಲ್ಲಿ ಸಾಡೇ ಸತಿಯಿಂದ ಮುಕ್ತಿ ದೊರೆಯಲಿದೆ.
ಪರಿಹಾರ: ಮಂಗಳವಾರ ಮತ್ತು ಶನಿವಾರ ಹನುಮಂತನಿಗೆ ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಿರಿ.
ಧನು ರಾಶಿ
ನಿಮ್ಮ ರಾಶಿಚಕ್ರದ ನಾಲ್ಕನೇ ಮನೆಯಲ್ಲಿ ಶನಿಯ ಉಪಸ್ಥಿತಿಯು ನಿಮಗೆ ಆರ್ಥಿಕ ಸಮಸ್ಯೆಗಳನ್ನು ಉಂಟುಮಾಡಬಹುದು. ಇದರಿಂದ ಹಲವಾರು ಕೌಟುಂಬಿಕ ಸಮಸ್ಯೆಗಳನ್ನು ಅನುಭವಿಸಬಹುದು. ಸಂಬಂಧಿಗಳಿಂದ ನಿಕಟವಾಗಿ ತೊಂದರೆಯನ್ನು ಅನುಭವಿಸಬಹುದು. ನಿಮ್ಮ ಮೇಲಿನ ಶನಿಯ ಧೈಯದ ಪರಿಣಾಮ 2027ರಲ್ಲಿ ಕೊನೆಗೊಳ್ಳಲಿದೆ.
ಪರಿಹಾರ: ನಿಯಮಿತವಾಗಿ ಶನಿ ಚಾಲೀಸವನ್ನು ಪಠಿಸಿ ಮತ್ತು ಶನಿವಾರದಂದು ಶನಿ ದೇವರ ದೇವಸ್ಥಾನದಲ್ಲಿ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.