Astrology ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಚಂದ್ರ-ಗುರು ಸಂಯೋಗ: ಈ ರಾಶಿಯವರ ಜೇಬು ತುಂಬುವುದು ಗ್ಯಾರಂಟಿ! Astrology

Astrology: ಜ್ಯೋತಿಷ್ಯದ ಪ್ರಕಾರ, ಜನವರಿ 28 ರಿಂದ ಚಂದ್ರನು ಕೆಲವೊಂದು ರಾಶಿಗಳಲ್ಲಿ ಚಲನೆ ನಡೆಸುವುದರಿಂದ ಕೆಲವೊಂದು ಜನರಿಗೆ ಆರ್ಥಿಕ ಮತ್ತು ವೃತ್ತಿಜೀವನದಲ್ಲಿ ಬಹಳ ಶುಭ ಎಂದು ಪರಿಗಣಿಸಲಾಗುತ್ತದೆ. ಚಂದ್ರ ಮತ್ತು ಗುರುವಿನ ಸಂಚಾರದಿಂದ ಧನ ಯೋಗವು ಸೃಷ್ಟಿಯಾಗುತ್ತದೆ. ಈ ಎರಡೂ ಶುಭ ಯೋಗಗಳ ಸಂಯೋಜಿತ ಪರಿಣಾಮವು ಯಶಸ್ಸು, ಆರ್ಥಿಕ ಲಾಭ, ಮಕ್ಕಳಲ್ಲಿ ಸಂತೋಷ ಮತ್ತು ವೃತ್ತಿಜೀವನದಲ್ಲಿ ಪ್ರಗತಿಯನ್ನು ಸೂಚಿಸುತ್ತದೆ. ಹಾಗಿದ್ದರೆ, ಈ ಯಾವ ರಾಶಿಯವರು ಪ್ರಯೋಜನವನ್ನು ಪಡೆಯುತ್ತಾರೆ ಎಂದು ನೋಡೋಣ ಬನ್ನಿ..

ಮೇಷ ರಾಶಿ

ಈ ದಿನದಂದು, ಮೇಷ ರಾಶಿಯವರಿಗೆ ಕೆಲಸದಲ್ಲಿ ಸುಧಾರಣೆಯ ಸ್ಪಷ್ಟ ಸೂಚನೆಗಳು ಸಿಗುತ್ತವೆ. ಈ ಜನರಿಗೆ ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. ಸ್ನೇಹಿತರಿಂದ ಆರ್ಥಿಕವಾಗಿ ಸಹಾಯ ಸಿಗುತ್ತದೆ. ವೈವಾಹಿಕ ಜೀವನದಲ್ಲಿ ಸಂತೋಷ ಸಿಗಲಿದ್ದು, ನೆಮ್ಮದಿಯಿಂದ ಇರಲಿದ್ದೀರಿ. ಹಳೆಯ ಹೂಡಿಕೆಗಳು ಸ್ವಲ್ಪ ಲಾಭವನ್ನು ನೀಡಲಿವೆ. ಕುಟುಂಬದಲ್ಲಿ ನೆಮ್ಮದಿ ನೆಲಸಲಿದೆ.

ವೃಷಭ ರಾಶಿ

ವೃಷಭ ರಾಶಿಯವರ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯಲಿದ್ದಾರೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವಾಗ ಸ್ವಲ್ಪ ಯೋಚಿಸುವುದು ಉತ್ತಮ. ವ್ಯವಹಾರದಲ್ಲಿ ಲಾಭವನ್ನು ಪಡೆಯಲಿದ್ದೀರಿ. ಕುಟುಂಬದಲ್ಲಿ ನಮ್ಮದಿಯ ವಾತಾವರಣ ಇರಲಿದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಆರೋಗ್ಯವು ಉತ್ತಮವಾಗಿರುತ್ತದೆ.

ಕನ್ಯಾ ರಾಶಿ

ಗಜಕೇಸರಿ ಯೋಗದ ಶುಭ ಪ್ರಭಾವದಿಂದಾಗಿ, ಕನ್ಯಾ ರಾಶಿಯವರಿಗೆ ಆರ್ಥಿಕ ಲಾಭಗಳು ತುಂಬಿರುತ್ತವೆ. ನಿಮ್ಮ ಹೊಸ ಆಲೋಚನೆಗಳು ಹೊಸ ಕಾರ್ಯವನ್ನು ಮಾಡಲು ಸಹಾಯ ಮಾಡುತ್ತದೆ. ಅರ್ಧದಲ್ಲೇ ನಿಂತು ಹೋಗಿದ್ದ ಕೆಲಸಗಳು ಮುಂದೆ ಸಾಗಲಿದೆ. ಆರೋಗ್ಯದಲ್ಲಿ ಚೇತರಿಕೆ, ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.