- ಜ್ಯೋತಿಷ್ಯದಲ್ಲಿ, ಬುಧನನ್ನು ಬುದ್ಧಿವಂತಿಕೆ, ವ್ಯವಹಾರ ಮತ್ತು ಸಂವಹನದ ಸಂಕೇತ ಎಂದು ಕರೆಯಲಾಗುತ್ತದೆ
- ಬುಧನು ತನ್ನ ಸ್ಥಾನವನ್ನು ಬದಲಾಯಿಸಿದಾಗಲೆಲ್ಲಾ, ಕೆಲವೊಂದು ಜನರ ಜೀವನದ ಮೇಲೆ ಪ್ರಯೋಜನ ನೀಡುತ್ತಾನೆ
- ಈ ಬಾರಿ ಬುಧನು ಫೆಬ್ರವರಿ 28 ರಂದು ರಾತ್ರಿ 10:09 ಕ್ಕೆ ಕುಂಭ ರಾಶಿಯಲ್ಲಿ ಸ್ಥಾನ ಪಡೆಯುತ್ತಾನೆ
Astrology: ಜ್ಯೋತಿಷ್ಯದಲ್ಲಿ, ಬುಧನನ್ನು ಬುದ್ಧಿವಂತಿಕೆ, ವ್ಯವಹಾರ ಮತ್ತು ಸಂವಹನದ ಸಂಕೇತ ಎಂದು ಕರೆಯಲಾಗುತ್ತದೆ. ಆದಾಗ್ಯೂ, ಬುಧನು ತನ್ನ ಸ್ಥಾನವನ್ನು ಬದಲಾಯಿಸಿದಾಗಲೆಲ್ಲಾ, ಕೆಲವೊಂದು ಜನರ ಜೀವನದ ಮೇಲೆ ತುಂಬಾ ಪ್ರಯೋಜನ ಎಂದು ಹೇಳಲಾಗುತ್ತದೆ. ಈ ಬಾರಿ ಬುಧನು ಫೆಬ್ರವರಿ 28 ರಂದು ರಾತ್ರಿ 10:09 ಕ್ಕೆ ಕುಂಭ ರಾಶಿಯಲ್ಲಿ ಸ್ಥಾನ ಪಡೆಯುತ್ತಾನೆ.
ಸಾಮಾನ್ಯವಾಗಿ, ಗ್ರಹಗಳ ಸ್ಥಾನವು ದುರ್ಬಲ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಗ್ರಹಗಳ ಸಂಯೋಗವು ಈ ನಿರ್ದಿಷ್ಟ ರಾಶಿ ಚಕ್ರದವರಿಗೆ ವರದಾನವಾಗಲಿದೆ. ಹಾಗಿದ್ದರೆ, ಆ ರಾಶಿಯವರು ಪ್ರಯೋಜನ ಪಡೆಯುತ್ತಾರೆ ಎಂದು ನೋಡೋಣ ಬನ್ನಿ...
ಮಿಥುನ ರಾಶಿ
ಮಿಥುನ ರಾಶಿಯಲ್ಲಿ ಬುಧ ಆಳುವುದರಿಂದ ಈ ಜನರಿಗೆ ಅದೃಷ್ಟ ಎಂದು ಹೇಳಲಾಗುತ್ತದೆ. ಉದ್ಯೋಗದಲ್ಲಿ ಪ್ರಗತಿಯನ್ನು ಹೊಂದಲಿದ್ದೀರಿ. ಅರ್ಧದಲ್ಲೇ ಸಿಲುಕಿದ್ದ ಹಣ ಮರಳಿ ಪಡೆಯಲಿದ್ದೀರಿ. ಉದ್ಯಮಿಗಳು ಉತ್ತಮ ಲಾಭಗಳನ್ನು ಕಾಣಲಿದ್ದೀರಿ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಮುಂದುವರೆಯಲು ಆಸಕ್ತಿ ಹೆಚ್ಚಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವವರಿಗೆ ಪ್ರಯೋಜನಗಳು ಸಿಗಲಿವೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಬುಧನ ಸ್ಥಾನವು ಒಂದು ಸುವರ್ಣಾವಕಾಶವನ್ನು ತರುತ್ತದೆ. ಕೆಲಸದಲ್ಲಿ ನಿಮ್ಮ ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವ ಸಮಯ ಇದಾಗಿದೆ. ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಲಾಭದಾಯಕ ಸಮಯ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಆರ್ಥಿಕ ಸಮಸ್ಯೆಗಳು ಕಡಿಮೆಯಾಗಲಿದ್ದು, ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿವೆ.
ವೃಷಭ ರಾಶಿ
ಈ ರಾಶಿಚಕ್ರ ಚಿಹ್ನೆಯ ಜನರಿಗೆ ಹಠಾತ್ ಆರ್ಥಿಕ ಲಾಭವನ್ನು ನಿರೀಕ್ಷಿಸಬಹುದು. ಪೂರ್ವಾಜರ ಆಸ್ತಿಯಿಂದ ಲಾಭವನ್ನು ಪಡೆಯಲಿದ್ದೀರಿ. ಹಳೆಯ ಹೂಡಿಕೆಗಳು ಹೆಚ್ಚಿನ ಲಾಭವನ್ನು ನೀಡಲಿವೆ. ನೀವು ಪಾಲುದಾರಿಕೆಯನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ, ಬುಧನ ಈ ಸಂಚಾರವು ನಿಮಗೆ ಗಮನಾರ್ಹ ಪ್ರಗತಿಯನ್ನು ನೀಡುತ್ತದೆ. ಆರೋಗ್ಯದಲ್ಲಿ ಸುಧಾರಿಕೆ ಕಾಣಲಿದ್ದೀರಿ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.