Astrology (ಸಾಂದರ್ಭಿಕ ಚಿತ್ರ) 
ಜ್ಯೋತಿಷ್ಯ

ಬುಧ-ರಾಹು ಸಮಾಗಮ: ಈ ರಾಶಿಯವರ ಬದುಕಿನಲ್ಲಿ ಹಣದ ಮಳೆ, ಅದೃಷ್ಟದ ಅಲೆ! Astrology

Astrology: ಜ್ಯೋತಿಷ್ಯದಲ್ಲಿ, ಬುಧ ಗ್ರಹವು ಬುದ್ಧಿವಂತಿಕೆ, ಸಂವಹನ, ತರ್ಕ ಮತ್ತು ವ್ಯವಹಾರದೊಂದಿಗೆ ಸಂಬಂಧ ಹೊಂದಿದೆ ಎಂದು ಹೇಳಲಾಗುತ್ತದೆ. ಬುಧನು ಒಂದು ರಾಶಿ ಅಥವಾ ನಕ್ಷತ್ರಪುಂಜದಲ್ಲಿ ತನ್ನ ಸ್ಥಾನವನ್ನು ಬದಲಾಯಿಸಿದಾಗ ಅದು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.
ಆದಾಗ್ಯೂ, ಬುಧನು ಇಂದು ರಾಹುವಿನ ನಕ್ಷತ್ರಪುಂಜವಾದ ಶತಭಿಷವನ್ನು ಪ್ರವೇಶಿಸುತ್ತಾನೆ. ಜ್ಯೋತಿಷ್ಯದ ಪ್ರಕಾರ, ಇದನ್ನು ಬಹಳ ಮಹತ್ವದ್ದಾಗಿದೆ ಎಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಕೆಲವು ರಾಶಿ ಚಕ್ರಗಳಿಗೆ ಹೊಸ ಅವಕಾಶಗಳು ಸಿಗಬಹುದು. ಹಾಗಿದ್ದರೆ, ಬುಧನ ಚಲನೆಯು ಯಾವ ರಾಶಿಯವರಿಗೆ ಉತ್ತಮ ಪ್ರಯೋಜನ ನೀಡಲಿವೆ ಎಂದು ನೋಡೋಣ ಬನ್ನಿ...

ಮೇಷ ರಾಶಿ

ಬುಧನ ಸಂಚಾರವು ಮೇಷ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ತರುತ್ತದೆ. ಈ ಸಮಯದಲ್ಲಿ, ಉದ್ಯಮಿಗಳಿಗೆ ಉತ್ತಮ ಲಾಭ ಮತ್ತು ತಮ್ಮ ವ್ಯವಹಾರವನ್ನು ಮುಂದುವರೆಸಲು ಅವಕಾಶಗಳನ್ನು ಪಡೆದುಕೊಳ್ಳಲಿದ್ದಾರೆ. ಕಠಿಣ ಪರಿಶ್ರಮದಿಂದ ಕೆಲಸದಲ್ಲಿ ಖ್ಯಾತಿಯನ್ನು ಪಡೆಯಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಪಡೆಯಲಿದ್ದೀರಿ. ಕುಟುಂಬದವರ ಬೆಂಬಲದಿಂದಾಗಿ ಮುನ್ನಣೆ ಸಾಧಿಸಲಿದ್ದೀರಿ.

ಮಿಥುನ ರಾಶಿ

ಈ ಬುಧ ಸಂಚಾರವು ಮಿಥುನ ರಾಶಿಯವರಿಗೆ ಅನೇಕ ಶುಭ ಸಮಯಗಳನ್ನು ತರುವಂತ ಸಮಯ ಇದಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗೆ ಉತ್ತಮ ಸಮಯ ಇದಾಗಿದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಬೇಕೆಂದು ನಿರ್ಧರಿಸುವವರಿಗೆ ಗಮನಾರ್ಹ ಪ್ರಯೋಜನಗಳು ಸಿಗಲಿವೆ. ವೃತ್ತಿಗೆ ಸಂಬಂಧಿಸಿದಂತೆ ಕಚೇರಿಗಳಲ್ಲಿ ಪ್ರಶಂಸೆ ದೊರಯಲಿದೆ. ಜೊತೆಗೆ ಬಡ್ತಿ ಮತ್ತು ಸಂಬಳ ಹೆಚ್ಚಾಗಲಿದೆ.

ಮಕರ ರಾಶಿ

ಬುಧ ಸಂಚಾರವು ಮಕರ ರಾಶಿಯವರಿಗೆ ಆರ್ಥಿಕ ವಿಷಯಗಳಲ್ಲಿ ಪ್ರಯೋಜನವನ್ನು ನೀಡಲಿದೆ. ಅರ್ಧಕ್ಕೆ ನಿಂತಿದ್ದ ಹಣ ಮತ್ತೆ ಮರಳಿ ಬರಲಿದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಹೊಸದಾಗಿ ವ್ಯವಹಾರ ಪ್ರಾರಂಭಿಸುವವರಿಗೆ ಈ ದಿನಗಳು ಶುಭವಾಗಲಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಾಯವಾಗಲಿದೆ. ಕುಟುಂಬದ ಬೆಂಬಲದಿಂದ ಅನೇಕ ಪ್ರಯೋಜನಗಳನ್ನು ಪಡೆಯಲಿದ್ದೀರಿ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.