Astrology (ಸಾಂದರ್ಭಿಕ ಚಿತ್ರ) 
ಜ್ಯೋತಿಷ್ಯ

ಅಂಗಾರಕನ ಅಬ್ಬರ: ಮೇಷ ರಾಶಿಗೆ ಮಂಗಳನ ಎಂಟ್ರಿ; ಈ ರಾಶಿಯವರಿಗೆ ರಾಜಯೋಗದ ಆರಂಭ! Astrology

Astrology: ಜ್ಯೋತಿಷ್ಯದಲ್ಲಿ ಗ್ರಹಗಳ ಅಧಿಪತಿ ಎಂದು ಮಂಗಳ ಗ್ರಹವನ್ನು ಕರೆಯಲಾಗುತ್ತದೆ. ಆದಾಗ್ಯೂ, ಈ ಗ್ರಹವು ಶೀಘ್ರದಲ್ಲೇ ತನ್ನ ಪಥವನ್ನು ಬದಲಾಯಿಸಿ ಬೇರೆ ಗ್ರಹದ ಜೊತೆ ಸಂಯೋಜನೆ ಹೊಂದಲಿದೆ. ಆದಾಗ್ಯೂ, ಈ ಸಂಚಾರವು ಕೆಲವೊಂದು ರಾಶಿಯವರಿಗೆ ರಾಜಯೋಗವನ್ನು ತರಲಿದೆ ಎಂದು ಹೇಳಲಾಗುತ್ತದೆ. ಮಂಗಳನ ಸಂಚಾರದಿಂದ ಯಾವ ರಾಶಿಯವರು ಮೇ ತಿಂಗಳಲ್ಲಿ ಶುಭವನ್ನು ಪಡೆಯಲಿದ್ದಾರೆ ಎಂದು ನೋಡೋಣ ಬನ್ನಿ...

ಮೇಷ ರಾಶಿ

ಈ ಮಂಗಳ ಸಂಚಾರವು ಮೇಷ ರಾಶಿಯವರಿಗೆ ಶುಭವೆಂದು ಹೇಳಲಾಗುತ್ತದೆ. ಇದು ಆತ್ಮವಿಶ್ವಾಸ ಜೊತೆಗೆ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ. ಹೊಸ ಉದ್ಯೋಗ ಹುಡುಕುತ್ತಿರುವವರಿಗೆ ಉತ್ತಮ ಕೆಲಸ ಸಿಗಲಿದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದೆ.

ಸಿಂಹ ರಾಶಿ

ಆರ್ಥಿಕ ಬಲ ಮತ್ತು ಹೊಸ ವ್ಯವಹಾರ ಅವಕಾಶಗಳು ಒಲಿದು ಬರಲಿವೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳಲಿದ್ದು, ಅಂದುಕೊಂಡ ಕೆಲಸಗಳನ್ನು ಮಾಡಿ ಮುಗಿಸಲಿದ್ದೀರಿ. ಸಮಾಜದಲ್ಲಿ ಸ್ಥಾನಮಾನ ಹೆಚ್ಚಾಗಲಿದೆ. ಪೂರ್ವಜರ ಆಸ್ತಿ ಅಧಿಕ ಲಾಭವನ್ನು ನೀಡಬಹುದು. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದೆ.

ವೃಶ್ಚಿಕ ರಾಶಿ

ಈ ಸಂಚಾರವು ನಿಮಗೆ ಹಳೆಯ ಸಮಸ್ಯೆಗಳಿಂದ ಪರಿಹಾರವನ್ನು ನೀಡಲಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ. ಹಳೆಯ ಹೂಡಿಕೆಗಳು ಲಾಭವನ್ನು ತರಲಿವೆ. ನಿಮ್ಮ ಮನಸ್ಸಿಗೆ ಶಾಂತಿ ಮತ್ತು ನೆಮ್ಮದಿ ಸಿಗಲಿದ್ದು, ಇಷ್ಟು ದಿನ ಇದ್ದ ಕಷ್ಟಗಳು ಕೊನೆಗೊಳ್ಳಲಿವೆ. ಈ ಸಮಯದಲ್ಲಿ ನೀವು ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸಲಿದ್ದೀರಿ (ಏಜೆನ್ಸೀಸ್​).