Astrology (ಸಾಂದರ್ಭಿಕ ಚಿತ್ರ)
Astrology: ಜ್ಯೋತಿಷ್ಯದಲ್ಲಿ ಗುರುವನ್ನು ಬಹಳ ಶಕ್ತಿಶಾಲಿ ಎಂದು ಕರೆಯಲಾಗುತ್ತದೆ. ಇಂದಿನಿಂದ ಗುರು ಮಿಥುನ ರಾಶಿಯಲ್ಲಿ ಸಂಚಾರ ನಡೆಸುತ್ತಾನೆ. ಈ ಚಲನೆಯನ್ನು ಬಹಳ ಶುಭವೆಂದು ಕರೆಯಲಾಗುತ್ತದೆ. ಆದಾಗ್ಯೂ, ಈ ಸಂಚಾರವು ಜ್ಞಾನ, ಸಂಪತ್ತು, ಸಂತೋಷ ಮತ್ತು ಸಮೃದ್ಧಿಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯದ ಪ್ರಕಾರ, ಗುರು ಜೂನ್ 2, 2026 ರವರೆಗೆ ಮಿಥುನ ರಾಶಿಯಲ್ಲಿ ಸಾಗುತ್ತಾನೆ. ಅದರ ನಂತರ, ಅದು ಕರ್ಕಾಟಕ ರಾಶಿಯನ್ನು ಪ್ರವೇಶಿಸುತ್ತದೆ. ಹಾಗಾಗಿ ಈ ಸಂಚಾರವು ಯಾವ ರಾಶಿಯವರಿಗೆ ಉತ್ತಮ ಎಂದು ನೋಡೋಣ ಬನ್ನಿ...
ಮೇಷ ರಾಶಿ
ಗುರುವಿನ ಸಂಚಾರವು ಮೇಷ ರಾಶಿಯ ಜನರಿಗೆ ಉತ್ತಮ ಫಲವನ್ನು ಕಲ್ಪಿಸಲಾಗುತ್ತದೆ. ಈ ಜನರು ಅಂದುಕೊಂಡ ಕೆಲಸಗಳನ್ನು ಮಾಡಿ ಮುಗಿಸಲಿದ್ದಾರೆ. ಕೆಲಸದಲ್ಲಿ ಪ್ರಗತಿಗೆ ಅವಕಾಶಗಳು ಹೆಚ್ಚಾಗುತ್ತವೆ. ಆರ್ಥಿಕವಾಗಿ ಸಂಪನ್ನರಾಗುತ್ತಾರೆ. ಉದ್ಯೋಗಿಗಳು ಕಚೇರಿಯಲ್ಲಿ ಉನ್ನತ ಸ್ಥಾನವನ್ನು ಪಡೆಯಲಿದ್ದಾರೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ.
ವೃಷಭ ರಾಶಿ
ವೃಷಭ ರಾಶಿಯಿಂದ ಎರಡನೇ ಮನೆಯಲ್ಲಿ ಗುರು ನೇರವಾಗಿ ನೆಲೆಸುತ್ತಾನೆ. ಇದು ನಿಮ್ಮ ಪ್ರತಿಷ್ಟೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆರ್ಥಿಕ ಸ್ಥಿತಿಯನ್ನು ಸುಧಾರಿಸಿ, ಆಸ್ತಿಯನ್ನು ಖರೀದಿಸಲು ಸಹಾಯ ಮಾಡುತ್ತದೆ. ಪಿತ್ರಾರ್ಜಿತ ಆಸ್ತಿಗಳು ಲಾಭವನ್ನು ನೀಡಲಿವೆ. ಕಚೇರಿಯಲ್ಲಿ ಉದ್ಯೋಗಿಗಳು ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆಯಲಿದ್ದಾರೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ಸಮಯವು ತುಂಬಾ ಶುಭವಾಗಲಿದೆ. ವೃತ್ತಿ ಮತ್ತು ವ್ಯವಹಾರಗಳಲ್ಲಿ ಸುಧಾರಣೆ ಕಾಣಲಿದ್ದೀರಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ವಾಹನ ತೆಗೆದುಕೊಳ್ಳುವವರಿಗೆ ಇದು ಉತ್ತಮ ಸಮಯವಾಗಲಿದೆ. ದೀರ್ಘಕಾಲದಿಂದ ಬಗೆಹರಿಯದ ಸಮಸ್ಯೆಗಳು ಕೊನೆಗೊಳ್ಳಲಿವೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದ್ದು, ವಿವಾಹವಾಗಲಿರುವವರಿಗೆ ಮದುವೆ ಪ್ರಸ್ತಾಪಗಳು ಬರಲಿವೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.