Astrology: ದುಷ್ಟ ಗ್ರಹಗಳಾದ ರಾಹು ಮತ್ತು ಕೇತು ಮತ್ತು ನ್ಯಾಯದೇವತೆ ಶನಿಯ ನಡುವಿನ ಸಂಯೋಗವು ಬಹಳ ವಿಭಿನ್ನವಾಗಿರುತ್ತದೆ. ಪ್ರಸ್ತುತ, ರಾಹು ತನ್ನದೇ ಆದ ನಕ್ಷತ್ರವಾದ ಶತಭಿಷದಲ್ಲಿದ್ದಾನೆ. ಈ ವೇಳೆ ಶನಿಯು ಉತ್ತರಭಾದಪ್ರದಲ್ಲಿ ಸೆಲೆಸಿರುತ್ತಾನೆ. ಮಾರ್ಚ್ 23 ರಂದು, ಕೇತು ತನ್ನದೇ ಆದ ನಕ್ಷತ್ರ ಚಿಹ್ನೆಯಲ್ಲಿ ಚಲಿಸುವುದರಿಂದ ಕೆಲವೊಂದು ರಾಶಿಗಳಿಗೆ ಉತ್ತಮ ಎಂದು ಹೇಳಲಾಗುತ್ತದೆ. ಶನಿ ಮತ್ತು ರಾಹು-ಕೇತುಗಳು ಸಂಗಮದಿಂದ ಯಾವ ರಾಶಿಯವರಿಗೆ ಶುಭವೆಂದು ನೋಡೋಣ ಬನ್ನಿ...
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರು ಈ ಸಮಯದಲ್ಲಿ ಆರ್ಥಿಕ ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ಲಾಭವನ್ನು ನಿರೀಕ್ಷಿಸಬಹುದು. ಉದ್ಯೋಗಿಗಳು ಕಚೇರಿಗಳಲ್ಲಿ ಉತ್ತಮ ಸಂಬಂಧವನ್ನು ಹೊಂದಲಿದ್ದೀರಿ. ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಆದಾಗ್ಯೂ, ಕುಟುಂಬದಲ್ಲಿ ನೆಮ್ಮದಿ ಇಂದ ಇರಲಿದ್ದೀರಿ. ಆಸ್ತಿ ಮಾರಾಟ ಮಾಡುವವರಿಗೆ ಒಳ್ಳೆಯ ಲಾಭವನ್ನು ಪಡೆಯಲಿದ್ದೀರಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದೆ.
ಸಿಂಹ ರಾಶಿ
ಈ ರಾಶಿಯವರಿಗೆ ಮಾರ್ಚ್ ತಿಂಗಳು ಬಹಳ ಪ್ರಯೋಜನ ನೀಡಲಿವೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಕೆಲಸದಲ್ಲಿ ಬಡ್ತಿ ಅಥವಾ ವೇತನ ಹೆಚ್ಚಳದ ಸಾಧ್ಯತೆ ಇದ್ದು, ಉದ್ಯೋಗಿಗಳು ಶುಭ ಸುದ್ದಿಯನ್ನು ಕೇಳಲಿದ್ದೀರಿ. ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತಿರುವವರಿಗೆ ಇದು ಒಳ್ಳೆಯ ಸಮಯವಾಗಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ಸಂಗಾತಿಯೊಂದಿಗೆ ಸಂತೋಷದಿಂದ ಇರುತ್ತೀರಿ.
ಧನು ರಾಶಿ
ಧನು ರಾಶಿಯವರಿಗೆ ಈ ಸಮಯವು ತುಂಬಾ ಪ್ರಯೋಜನವನ್ನು ನೀಡಲಿದೆ. ಅನಿರೀಕ್ಷಿತ ಆರ್ಥಿಕ ಲಾಭವನ್ನು ಪಡೆಯಲಿದ್ದೀರಿ. ಕೆಲಸದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ. ಈ ಸಮಯದಲ್ಲಿ ವಾಹನಗಳ ಖರೀದಿ ಮಾಡಲಿದ್ದೀರಿ. ಆಸಕ್ತಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳ ಕಡೆಗೆ ಬದಲಾಗಬಹುದು. ಪ್ರೀತಿ ಸಂಬಂಧಗಳು ಸಿಹಿಯಾಗಿರುತ್ತವೆ (ಏಜೆನ್ಸೀಸ್).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.