ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಬಡತನಕ್ಕೆ ಇನ್ನು ಗುಡ್‌ಬೈ! 3 ದಶಕಗಳ ನಂತರ ಈ ರಾಶಿಯವರ ಜಾತಕದಲ್ಲಿ ಮಹಾಲಕ್ಷ್ಮಿ ಯೋಗ.. Astrology

ಪ್ರಮುಖ ಮುಖ್ಯಾಂಶಗಳು

  • ಜ್ಯೋತಿಷ್ಯದ ಪ್ರಕಾರ, ಏಪ್ರಿಲ್​ 2026 ರಲ್ಲಿ ಬಲವಾದ ತ್ರಿಗ್ರಹಿ ಯೋಗವು ರೂಪುಗೊಳ್ಳಲಿದೆ
  • ಈ ವೇಳೆ ಮೂರು ಗ್ರಹಗಳು ಒಂದೇ ರಾಶಿಯಲ್ಲಿ ಸೇರಿದಾಗ ಈ ಸಂಯೋಗ ಸಂಭವಿಸುತ್ತದೆ
  • ಮಂಗಳವು ಏಪ್ರಿಲ್ 2 ರಂದು ಮೀನ ರಾಶಿಗೆ ಮತ್ತು ಏಪ್ರಿಲ್​ 10 ರಂದು ಬುಧ ರಾಶಿಗೆ ಸಂಚಾರಗೊಳ್ಳುತ್ತಾನೆ
Astrology: ಜ್ಯೋತಿಷ್ಯದ ಪ್ರಕಾರ, ಏಪ್ರಿಲ್​ 2026 ರಲ್ಲಿ ಬಲವಾದ ತ್ರಿಗ್ರಹಿ ಯೋಗವು ರೂಪುಗೊಳ್ಳಲಿದೆ. ಈ ವೇಳೆ ಮೂರು ಗ್ರಹಗಳು ಒಂದೇ ರಾಶಿಯಲ್ಲಿ ಸೇರಿದಾಗ ಈ ಸಂಯೋಗ ಸಂಭವಿಸುತ್ತದೆ. ಈ ಬಾರಿ ಈ ಸಂಯೋಗವು ಮೀನ ರಾಶಿಯಲ್ಲಿ ಸಂಭವಿಸುತ್ತದೆ. ಈಗಾಗಲೇ ಈ ರಾಶಿಯಲ್ಲಿ ಶನಿ ಇರುತ್ತಾನೆ.
ಮಂಗಳವು ಏಪ್ರಿಲ್ 2 ರಂದು ಮೀನ ರಾಶಿಗೆ ಮತ್ತು ಏಪ್ರಿಲ್​ 10 ರಂದು ಬುಧ ರಾಶಿಗೆ ಸಂಚಾರಗೊಳ್ಳುತ್ತಾನೆ. ಇದು ಅಪರೂಪದ ಸಂಯೋಗವನ್ನು ಸೃಷ್ಟಿಸುತ್ತದೆ. ಸುಮಾರು 30 ವರ್ಷಗಳ ಬಳಿಕ ಈ ಅಪರೂಪ ಸಂಭವಿಸುತ್ತಿರುವುದರಿಂದ ಈ ರಾಶಿಯವರಿಗೆ ಶುಭ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ರಾಶಿಯವರು ಯಾರು ಎಂದು ನೋಡೋಣ ಬನ್ನಿ...

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಏಪ್ರಿಲ್​ ತಿಂಗಳು ಬಹಳ ಶುಭವೆಂದು ಹೇಳಲಾಗುತ್ತದೆ. ಈ ಜನರಿಗೆ ಹಠಾತ್​ ಲಾಭವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ವೃತ್ತಿಜೀವನದಲ್ಲಿ ಹೊಸ ಭರವಸೆಗಳು, ಹೊಸ ಜವಬ್ದಾರಿಗಳು ಸಿಗಲಿವೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದೆ.

ಕನ್ಯಾ ರಾಶಿ

ಈ ರಾಶಿಯವರಿಗೆ ಗ್ರಹಗಳ ಚಲನೆಯು ತುಂಬಾ ಶುಭವನ್ನು ನೀಡಲಿವೆ. ಹೂಡಿಕೆಗಳಲ್ಲಿ ಏರಿಳಿತಗಳನ್ನು ಕಾಣಲಿದ್ದೀರಿ. ವ್ಯವಹಾರದಲ್ಲಿ ಲಾಭ, ಉದ್ಯೋಗದಲ್ಲಿ ಮುನ್ನಣೆ ಸಿಗಲಿದೆ. ಆದಾಗ್ಯೂ, ವಿದ್ಯಾರ್ಥಿಗಳಿಗೆ ಉತ್ತಮ ಸಮಯ ಇದಾಗಿದೆ. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದೀರಿ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಪಡೆಯಲಿದ್ದೀರಿ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದೆ.

ಕುಂಭ ರಾಶಿ

ಈ ರಾಶಿಯವರಿಗೆ ಏಪ್ರಿಲ್​ ತಿಂಗಳಲ್ಲಿ ಆದಾಯದ ಮೂಲಗಳು ತೆರೆದುಕೊಳ್ಳಲಿದೆ. ಅರ್ಧದಲ್ಲೇ ನಿಂತಿದ್ದ ಹಣ ಮತ್ತೆ ಸಿಗಲಿದೆ. ಹಳೆಯ ಹೂಡಿಕೆಗಳು ಲಾಭವನ್ನು ನೀಡಲಿವೆ. ಹೊಸ ಕೆಲಸವನ್ನು ಹುಡುಕುತ್ತಿರುವವರಿಗೆ ಉದ್ಯೋಗಗಳು ಸಿಗುವಂತಹ ಸಮಯ ಇದಾಗಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ಸಂಗಾತಿಯೊಂದಿಗೆ ಉತ್ತಮ ಜೀವನವನ್ನು ನಡೆಸಲಿದ್ದೀರಿ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.