ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ದೀಪಾವಳಿಯಂದೇ ಎರಡು ಅಪರೂಪದ ರಾಜಯೋಗ: ಈ 4 ರಾಶಿಯವರ ಬಾಳಲ್ಲಿ ಹಣ, ಯಶಸ್ಸಿನ ಮಳೆ! ನಿಮ್ದೂ ಇದೇ ರಾಶಿನಾ? Astrology

ನೂರಾರು ವರ್ಷಗಳ ಬಳಿಕ ದೀಪಾವಳಿಯ ಶುಭ ದಿನದಂದೇ ಈ ಎರಡು ಪ್ರಭಾವಶಾಲಿ ರಾಜಯೋಗಗಳು ಒಟ್ಟಿಗೆ ರೂಪುಗೊಳ್ಳುತ್ತಿರುವುದು ಅತ್ಯಂತ ಮಂಗಳಕರ ಬೆಳವಣಿಗೆಯಾಗಿದೆ.

Astrology : ದೀಪಾವಳಿ ಹಬ್ಬದ ಈ ಸುಸಂದರ್ಭದಲ್ಲಿ ಖಗೋಳ ಮತ್ತು ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಅತ್ಯಂತ ಅಪರೂಪದ ಹಾಗೂ ಪವಿತ್ರವಾದ ಯೋಗವೊಂದು ರೂಪುಗೊಂಡಿದೆ. ಸೂರ್ಯ, ಶುಕ್ರ ಮತ್ತು ಬುಧ ಗ್ರಹಗಳ ಅಪರೂಪದ ಮಿಲನದಿಂದ ಈ ಬಾರಿಯ ದೀಪಾವಳಿಯು ಅತ್ಯಂತ ವಿಶೇಷವೆನಿಸಿದ್ದು, ಕೆಲವು ರಾಶಿಗಳ ಬಾಳಿನಲ್ಲಿ ಸುಖ-ಸಮೃದ್ಧಿಯ ಜ್ಯೋತಿಯನ್ನು ಬೆಳಗಲಿದೆ.

ಪ್ರಸಕ್ತ ವರ್ಷದ ದೀಪಾವಳಿ ಹಬ್ಬವು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅತ್ಯಂತ ವಿಶೇಷ ಹಾಗೂ ಅಪರೂಪದ ಯೋಗಗಳ ಸಂಗಮಕ್ಕೆ ಸಾಕ್ಷಿಯಾಗುತ್ತಿದೆ. ಈ ಪವಿತ್ರ ದಿನದಂದು ತುಲಾ ರಾಶಿಯಲ್ಲಿ ಗ್ರಹಗಳ ರಾಜನಾದ ಸೂರ್ಯ ಮತ್ತು ಸೌಂದರ್ಯ-ಸಂಪತ್ತಿನ ದೇವನಾದ ಶುಕ್ರ ಒಂದೇ ರಾಶಿಯಲ್ಲಿ ಸಮ್ಮಿಲನಗೊಳ್ಳುವುದರಿಂದ‘ಶುಕ್ರಾಧಿತ್ಯ ರಾಜಯೋಗ’ ಸೃಷ್ಟಿಯಾಗಲಿದೆ. ಇದರ ಜತೆಗೆ, ಬುದ್ಧಿಮತ್ತೆ ಮತ್ತು ಜ್ಞಾನದ ಕಾರಕನಾದ ಬುಧನೊಂದಿಗೆ ಸೂರ್ಯ ಸೇರುವುದರಿಂದ ‘ಬುಧಾದಿತ್ಯ ರಾಜಯೋಗ’ ಕೂಡ ನಿರ್ಮಾಣವಾಗಲಿದೆ. ನೂರಾರು ವರ್ಷಗಳ ಬಳಿಕ ದೀಪಾವಳಿಯ ಶುಭ ದಿನದಂದೇ ಈ ಎರಡು ಪ್ರಭಾವಶಾಲಿ ರಾಜಯೋಗಗಳು ಒಟ್ಟಿಗೆ ರೂಪುಗೊಳ್ಳುತ್ತಿರುವುದು ಅತ್ಯಂತ ಮಂಗಳಕರ ಬೆಳವಣಿಗೆಯಾಗಿದೆ.

ಹನ್ನೆರಡು ರಾಶಿಗಳ ಮೇಲೆ ಗ್ರಹಗಳ ಪ್ರಭಾವ

ದೀಪಾವಳಿಯ ದಿನದಂದು ಉಂಟಾಗುವ ಈ ಪ್ರಬಲ ರಾಜಯೋಗಗಳ ಪ್ರಭಾವವು ಎಲ್ಲ 12 ರಾಶಿಚಕ್ರಗಳ ಮೇಲೂ ಬೀರಲಿದೆ. ಆದರೆ, ಜ್ಯೋತಿಷ್ಯ ಗಣನೆಗಳ ಪ್ರಕಾರ, ಈ ಅಪರೂಪದ ಗ್ರಹಗಳ ಜೋಡಣೆಯು ಮುಖ್ಯವಾಗಿ ನಾಲ್ಕು ರಾಶಿಗಳಿಗೆ ಅತ್ಯಂತ ಹೆಚ್ಚಿನ ಅದೃಷ್ಟ, ಸುಖ, ಶಾಂತಿ ಮತ್ತು ಧನಲಾಭವನ್ನು ಕರುಣಿಸಲಿದೆ. ಈ ರಾಶಿಯವರು ತಮ್ಮ ಉದ್ಯೋಗ, ವ್ಯಾಪಾರ, ಶಿಕ್ಷಣ ಹಾಗೂ ವೈಯಕ್ತಿಕ ಜೀವನದಲ್ಲಿ ದೀರ್ಘಕಾಲದಿಂದ ಎದುರಿಸುತ್ತಿದ್ದ ಸವಾಲುಗಳಿಂದ ಮುಕ್ತಿ ಪಡೆಯಲಿದ್ದು, ಹೊಸ ಆಶಾವಾದ ಮತ್ತು ಯಶಸ್ಸಿನ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದ್ದಾರೆ. ಹಾಗಾದರೆ, ಆ 4 ಅದೃಷ್ಟದ ರಾಶಿಗಳು ಯಾವುವು ಅನ್ನೋದನ್ನು ನಾವೀಗ ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯ ಜಾತಕದವರಿಗೆ ಈ ಬಾರಿಯ ದೀಪಾವಳಿಯು ಅತ್ಯಂತ ಶುಭದಾಯಕವಾಗಿರಲಿದೆ. ಇವರ ಪ್ರತಿಯೊಂದು ಕೆಲಸ-ಕಾರ್ಯಗಳಲ್ಲೂ ಸಫಲತೆ ಸಿಗಲಿದ್ದು, ಕೈಗೊಂಡ ಪ್ರಯತ್ನಗಳಿಗೆ ಸೂಕ್ತ ಫಲ ದೊರೆಯಲಿದೆ. ವೃತ್ತಿಜೀವನದಲ್ಲಿ ಅತ್ಯುತ್ತಮ ಪ್ರಗತಿಯನ್ನು ಕಾಣುವಿರಿ ಹಾಗೂ ಆಸ್ತಿ ಸಂಬಂಧಿತ ದೀರ್ಘಕಾಲದ ವಿವಾದಗಳು ಸುಲಭವಾಗಿ ಬಗೆಹರಿಯಲಿವೆ. ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸೂಕ್ತ ಸಮಯವಾಗಿದ್ದು, ಪ್ರೇಮಿಗಳಿಗೆ ವಿವಾಹ ಯೋಗ ಕೂಡಿಬರಲಿದೆ. ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ ಸಿಗಲಿದ್ದು, ಆದಾಯ ಗಳಿಕೆಗೆ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ.

ತುಲಾ ರಾಶಿ

ತುಲಾ ರಾಶಿಯಲ್ಲಿಯೇ ಈ ರಾಜಯೋಗಗಳು ಸೃಷ್ಟಿಯಾಗುತ್ತಿರುವುದರಿಂದ ಈ ರಾಶಿಯ ಜನರಿಗೆ ಅದೃಷ್ಟದ ಬಾಗಿಲು ಸಂಪೂರ್ಣವಾಗಿ ತೆರೆಯಲಿದೆ. ಬಾಕಿ ಉಳಿದಿದ್ದ ಅನೇಕ ಪ್ರಮುಖ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ. ಕುಟುಂಬದಲ್ಲಿ ಸಂತೋಷದ ವಾತಾವರಣ ನೆಲೆಸಲಿದ್ದು, ನಿಮಗಿದ್ದ ದೊಡ್ಡ ಕನಸೊಂದು ನನಸಾಗುವ ಕಾಲ ಹತ್ತಿರವಾಗಿದೆ. ಹೆತ್ತವರ ಬೆಂಬಲ ಹಾಗೂ ಪ್ರೋತ್ಸಾಹ ನಿಮಗಿರಲಿದ್ದು, ನಿರೂಪಿಸಿದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ಪೂರೈಸುವಿರಿ. ಜಂಟಿ ಉದ್ಯೋಗ ಮತ್ತು ಉನ್ನತ ಶಿಕ್ಷಣಕ್ಕೆ ತೆರಳಲು ಬಯಸುವವರಿಗೆ ಅತ್ಯುತ್ತಮ ಅವಕಾಶಗಳು ಒದಗಿಬರಲಿವೆ.

ಧನುಸ್ಸು ರಾಶಿ

ಧನುಸ್ಸು ರಾಶಿಯ ವ್ಯಕ್ತಿಗಳಿಗೆ ಈ ರಾಜಯೋಗದ ಪ್ರಭಾವದಿಂದ ಸಮಾಜದಲ್ಲಿ ಸನ್ಮಾನ, ಗೌರವ ಹಾಗೂ ಅದ್ಭುತ ಯಶಸ್ಸು ದೊರೆಯಲಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕಠಿಣ ಶ್ರಮ ಮತ್ತು ಪ್ರತಿಭೆಗೆ ತಕ್ಕ ಮೆಚ್ಚುಗೆ ಹಾಗೂ ಮನ್ನಣೆ ಸಿಗಲಿದೆ. ವ್ಯಾಪಾರ-ವಹಿವಾಟು ನಡೆಸುವವರಿಗೆ ಈ ಸಮಯವು ಅತ್ಯಂತ ಲಾಭದಾಯಕವಾಗಿದ್ದು, ಭವಿಷ್ಯದಲ್ಲಿ ದೊಡ್ಡ ಲಾಭ ತರಬಲ್ಲ ಹೊಸ ಒಪ್ಪಂದಗಳು ಕೈಗೂಡಲಿವೆ. ಸ್ವಂತ ಮನೆ ಅಥವಾ ಹೊಸ ಆಸ್ತಿಯನ್ನು ಖರೀದಿಸುವ ನಿಮ್ಮ ಬಹುದಿನದ ಕನಸು ಈ ಅವಧಿಯಲ್ಲಿ ಈಡೇರುವ ಸಾಧ್ಯತೆಗಳಿದ್ದು, ಜೀವನದಲ್ಲಿ ಒಟ್ಟಾರೆಯಾಗಿ ಸಕಾರಾತ್ಮಕ ಬದಲಾವಣೆಗಳು ಬರಲಿವೆ.

ಮೀನ ರಾಶಿ

ಮೀನ ರಾಶಿಯವರಿಗೆ ದೀಪಾವಳಿಯ ಹಬ್ಬವು ಅಪಾರ ಸಂತೋಷವನ್ನು ತರಲಿದೆ. ಕುಟುಂಬದಲ್ಲಿ ನೆಮ್ಮದಿ ಮೂಡಲಿದ್ದು, ವೈವಾಹಿಕ ಜೀವನದಲ್ಲಿ ಪರಸ್ಪರ ಪ್ರೀತಿ, ನಂಬಿಕೆ ಮತ್ತು ಸಾಮರಸ್ಯ ಹೆಚ್ಚಾಗಲಿದೆ. ನಿಮ್ಮ ಸುದೀರ್ಘ ಗುರಿಗಳನ್ನು ತಲುಪಲು ಹೊಸ ಯೋಜನೆಯೊಂದಿಗೆ ಕಾರ್ಯಪ್ರವೃತ್ತರಾಗುವಿರಿ. ನಿಕಟ ಸಂಬಂಧಿಕರು ಮತ್ತು ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಅವಕಾಶ ಸಿಗಲಿದೆ. ಪ್ರಮುಖವಾಗಿ ನಿಮ್ಮ ಆದಾಯದ ಹರಿವು ಹೆಚ್ಚಾಗಿ ಆರ್ಥಿಕ ಸ್ಥಿತಿಯು ಗಟ್ಟಿಯಾಗಲಿದೆ ಹಾಗೂ ಹೊಸ ಆಸ್ತಿ-ಪಾಸ್ತಿಗಳನ್ನು ಖರೀದಿಸುವ ಅಪರೂಪದ ಯೋಗ ಒದಗಿಬರಲಿದೆ.

ಒಟ್ಟಾರೆಯಾಗಿ, ದೀಪಾವಳಿಯ ಈ ಪವಿತ್ರ ಸಂದರ್ಭದಲ್ಲಿ ನಿರ್ಮಾಣವಾಗುತ್ತಿರುವ ಶುಕ್ರಾದಿತ್ಯ ಮತ್ತು ಬುಧಾದಿತ್ಯ ರಾಜಯೋಗಗಳು ಈ ನಾಲ್ಕು ರಾಶಿಗಳ ಬಾಳಿನಲ್ಲಿ ಧನಾತ್ಮಕ ಶಕ್ತಿಯನ್ನು ತುಂಬಲಿವೆ. ಗ್ರಹಗಳ ಈ ಶುಭ ಪ್ರಭಾವವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ದೀಪಾವಳಿಯ ದಿನದಂದು ಲಕ್ಷ್ಮಿ ದೇವಿಯ ಹಾಗೂ ಮಹಾವಿಷ್ಣುವಿನ ಪೂಜೆಯನ್ನು ಭಕ್ತಿಯಿಂದ ಮಾಡುವುದು ಶ್ರೇಯಸ್ಕರ. ಜ್ಯೋತಿಷ್ಯದ ಈ ಶುಭ ಯೋಗಗಳು ನಿಮ್ಮೆಲ್ಲರ ಬಾಳಿನಲ್ಲಿ ಹೊಸ ಬೆಳಕು, ಸಮೃದ್ಧಿ ಮತ್ತು ಯಶಸ್ಸನ್ನು ಕರುಣಿಸಲಿ ಎಂದು ಹಾರೈಸೋಣ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.