- ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ
- ಜೀವನದ ಆಗು-ಹೋಗುಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಜ್ಯೋತಿಷ್ಯ ಶಾಸ್ತ್ರ ಬಹಳ ಮುಖ್ಯ
- ಒಬ್ಬ ವ್ಯಕ್ತಿಯ ರಾಶಿಚಕ್ರ ಆತನ ಭವಿಷ್ಯದ ಜೀವನವನ್ನು ನಿರ್ಧರಿಸುತ್ತದೆ
- ವ್ಯಕ್ತಿಯ ಸಕಾರಾತ್ಮಕ ಮತ್ತು ನಕಾರಾತ್ಮಕ ಗುಣಗಳ ಮೇಲೆಯೂ ಜ್ಯೋತಿಷ್ಯ ಪ್ರಭಾವ ಬೀರುತ್ತದೆ
Zodiac Signs : ಸಾಮಾನ್ಯವಾಗಿ ಯಾವುದೇ ಪುರುಷರು, ಮಹಿಳೆಯರನ್ನು ತನ್ನತ್ತ ಆಕರ್ಷಿಸಲು ತಮ್ಮ ದೇಹದ ಆಕಾರ, ಬಟ್ಟೆ ಮತ್ತು ಕೇಶವಿನ್ಯಾಸ ಸೇರಿದಂತೆ ಹಲವು ವಿಷಯಗಳಿಗೆ ಹೆಚ್ಚಿನ ಗಮನವನ್ನು ನೀಡುತ್ತಾರೆ. ಆದರೆ, ಜ್ಯೋತಿಷ್ಯ ಶಾಸ್ತ್ರ ಹೇಳುವ ಪ್ರಕಾರ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಪುರುಷರು, ಸಹಜವಾಗಿಯೇ ಮಹಿಳೆಯರನ್ನು ಆಕರ್ಷಿಸುವ ಆಕರ್ಷಕ ನೋಟದೊಂದಿಗೆ ಜನಿಸುತ್ತಾರಂತೆ.
ಅಂದಹಾಗೆ, ಜ್ಯೋತಿಷ್ಯದ ಪ್ರಕಾರ ವ್ಯಕ್ತಿಯ ಜನ್ಮ ರಾಶಿ ಮತ್ತು ನಕ್ಷತ್ರ ಚಿಹ್ನೆಯು ಆತನ ಭವಿಷ್ಯದ ಜೀವನದ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ. ವ್ಯಕ್ತಿಯ ಆರ್ಥಿಕ ಪರಿಸ್ಥಿತಿ, ಪ್ರೇಮ ಜೀವನ, ಮದುವೆ, ದಾಂಪತ್ಯ ಜೀವನ, ಉದ್ಯೋಗ ಹಾಗೂ ವಿಶೇಷ ವ್ಯಕ್ತಿತ್ವಗಳು ಮತ್ತು ಅವರ ಗುಣಗಳ ಮೇಲೆ ಜ್ಯೋತಿಷ್ಯದ ಪ್ರಭಾವ ತುಂಬಾ ಇದೆ ಎಂದು ನಂಬಲಾಗಿದೆ. ಈ ಕಾರಣಕ್ಕೆ ಅನೇಕ ಮಂದಿ ಯಾವುದೇ ಕೆಲಸ ಆರಂಭಿಸುವ ಮುನ್ನ ಒಮ್ಮೆ ಜ್ಯೋತಿಷ್ಯದ ಮೊರೆ ಹೋಗುತ್ತಾರೆ. ಅಷ್ಟರ ಮಟ್ಟಿಗೆ ಜ್ಯೋತಿಷ್ಯ ಮನುಷ್ಯನ ಜೀವನವನ್ನು ಆವರಿಸಿಕೊಂಡಿದೆ.
ಹಾಗಾದರೆ, ಮೇಲೆ ಹೇಳಿದಂತೆ ಯಾವ ಪುರುಷ ರಾಶಿಚಕ್ರ ಚಿಹ್ನೆಗಳು ಮೊದಲ ನೋಟದಲ್ಲೇ ಮಹಿಳೆಯರನ್ನು ಆಕರ್ಷಿಸುವ ಆಕರ್ಷಕ ನೋವನ್ನು ಹೊಂದಿರುತ್ತಾರೆ ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.
ವೃಷಭ ರಾಶಿ
ಸೌಂದರ್ಯ ಮತ್ತು ಪ್ರೀತಿಯ ಗ್ರಹವಾದ ಶುಕ್ರನ ಆಳ್ವಿಕೆಯಲ್ಲಿ ಜನಿಸಿದ ವೃಷಭ ರಾಶಿಯವರು ಸ್ವಾಭಾವಿಕವಾಗಿಯೇ ಸುಂದರವಾಗಿರುತ್ತಾರೆ. ಇವರು ತಮ್ಮ ಅಭಿರುಚಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ತಮ್ಮ ನೋಟವನ್ನು ಕಾಪಾಡಿಕೊಳ್ಳುವಲ್ಲಿ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಈ ರಾಶಿಯವರು ಅನೇಕ ಜನರನ್ನು, ವಿಶೇಷವಾಗಿ ಮಹಿಳೆಯರನ್ನು ಆಕರ್ಷಿಸುವ ನೈಸರ್ಗಿಕ ಮೋಡಿಯೊಂದಿಗೆ ಜನಿಸುತ್ತಾರೆ. ಈ ರಾಶಿಚಕ್ರ ಚಿಹ್ನೆಗಳು ಎಲ್ಲಿದ್ದರೂ, ಎಲ್ಲರ ಕಣ್ಣುಗಳು ಅವರ ಮೇಲೆ ಇರುತ್ತವೆ.
ಸಿಂಹ ರಾಶಿ
ಸಿಂಹ ರಾಶಿಯಲ್ಲಿ ಜನಿಸಿದ ಪುರುಷರು ಸ್ವಾಭಾವಿಕವಾಗಿಯೇ ಆಕರ್ಷಕವಾಗಿರುತ್ತಾರೆ. ಏಕೆಂದರೆ, ಅವರನ್ನು ಎಲ್ಲಾ ಗ್ರಹಗಳ ಅಧಿಪತಿಯಾದ ಸೂರ್ಯನು ಆಳುತ್ತಾನೆ. ಅವರ ಪ್ರಕಾಶಮಾನವಾದ ಮೋಡಿ ಮತ್ತು ಇತರರನ್ನು ನಿಯಂತ್ರಿಸುವ ಮತ್ತು ಆಳುವ ಸಾಮರ್ಥ್ಯವು ಮಹಿಳೆಯರತ್ತ ಆಕರ್ಷಿತರಾಗಲು ಮುಖ್ಯ ಕಾರಣಗಳಾಗಿವೆ. ಸಿಂಹ ರಾಶಿಯ ಪುರುಷರು ಕಾಂತೀಯ ನೋಟ ಮತ್ತು ಮಹಿಳೆಯರನ್ನು ಕ್ಷಣಮಾತ್ರದಲ್ಲಿ ಆಕರ್ಷಿಸುವ ಉತ್ಸಾಹದಿಂದ ಜನಿಸುತ್ತಾರೆ. ಈ ರಾಶಿಚಕ್ರ ಚಿಹ್ನೆಯ ಪುರುಷರನ್ನು ಮಹಿಳೆಯರು ಇಷ್ಟಪಡದಿರುವುದು ಬಹಳ ಅಪರೂಪ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಪುರುಷರು ತಮ್ಮ ತೀವ್ರ ಮತ್ತು ರಹಸ್ಯ ಸ್ವಭಾವಕ್ಕೆ ಮಾತ್ರವಲ್ಲದೆ ಆಕರ್ಷಕ ವ್ಯಕ್ತಿತ್ವಕ್ಕೂ ಹೆಸರುವಾಸಿಯಾಗಿದ್ದಾರೆ. ಈ ರಾಶಿಚಕ್ರ ಚಿಹ್ನೆಯ ಪುರುಷರು ಇತರರು ನಿರ್ಲಕ್ಷಿಸಲಾಗದ ನೈಸರ್ಗಿಕ ಮೋಡಿಯನ್ನು ಹೊಂದಿರುತ್ತಾರೆ. ಹೀಗಾಗಿ, ಮೊದಲ ನೋಟದಲ್ಲೇ ಎಲ್ಲರ ಮನಸ್ಸನ್ನು ಸುಲಭವಾಗಿ ತಮ್ಮತ್ತ ಸೆಳೆಯುತ್ತಾರೆ. ಈ ರಾಶಿಯವರ ಆಕರ್ಷಕ ಕಣ್ಣುಗಳು ಮಹಿಳೆಯರನ್ನು ಬಹುಬೇಗನೆ ತಮ್ಮ ಸೆಳೆಯುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.