ಸಾಂದರ್ಭಿಕ ಚಿತ್ರ 
ಜ್ಯೋತಿಷ್ಯ

ಮಕರ ಸಂಕ್ರಾಂತಿ ಸಂಭ್ರಮ: ಸೂರ್ಯನ ಕೃಪೆಯಿಂದ ಈ ರಾಶಿಗಳ ಬಾಳಲ್ಲಿ ಹೊಸ ಬೆಳಕು! Astrology

Astrology: ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯನ್ನು ಜನವರಿ 14 ರಂದು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಸೂರ್ಯನು ಉತ್ತರಾಯಣದ ಕಡೆಗೆ ಚಲಿಸುತ್ತಾನೆ. ಈ ದಿನದಂದು ದಾನ ಮಾಡುವುದು ಮುಖ್ಯವೆಂದು ಪರಿಗಣಿಸಲಾಗುತ್ತದೆ. ಸಂಕ್ರಾಂತಿಯಂದು ಮೂರು ಶುಭಯೋಗಗಳು ಕೂಡಿರುತ್ತವೆ. ಈ ಬಾರಿಯು ಹಬ್ಬವು ಏಕಾದಶಿಯೊಂದಿಗೆ ಸೇರಿಕೊಳ್ಳುವುದರಿಂದ ಕೆಲವೊಂದು ರಾಶಿಯವರಿಗೆ ಶುಭವಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಆ ರಾಶಿಗಳು ಯಾವುದು ಎಂದು ನೊಡೋಣ ಬನ್ನಿ...

ಮೇಷ ರಾಶಿ

ಮಕರ ಸಂಕ್ರಾಂತಿ ನಂತರ ಈ ರಾಶಿಯವರಿಗೆ ಶುಭವಾಗಲಿದ್ದು, ವೃತ್ತಿ ಜೀವನದಲ್ಲಿ ಪ್ರಗತಿ ಸಾಧಿಸಲು ಸಹಾಯವಾಗುತ್ತದೆ. ದೀರ್ಘಕಾಲದಿಂದ ಬಾಕಿ ಇರುವ ಕೆಲಸಗಳು ವೇಗವನ್ನು ಪಡೆದುಕೊಳ್ಳುತ್ತವೆ. ಹೊಸ ಆದಾಯದ ಅವಕಾಶಗಳು ಆರ್ಥಿಕತೆಯನ್ನು ಹೆಚ್ಚಿಸುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದ್ದು, ಈ ಸಮಯದಲ್ಲಿ ಹೊಸ ವಾಹನಗಳನ್ನು ತೆಗೆದುಕೊಳ್ಳಬಹುದು.

ಸಿಂಹ ರಾಶಿ

ಸಿಂಹ ರಾಶಿಯಲ್ಲಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವುದರಿಂದ, ಈ ರಾಶಿಯಲ್ಲಿ ಜನಿಸಿದವರು ಅನೇಕ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಉದ್ಯೋಗದಲ್ಲಿರುವ ವ್ಯಕ್ತಿಗಳು ಬಡ್ತಿ ಮತ್ತು ವೇತನವನ್ನು ಹೆಚ್ಚಳವನ್ನು ಪಡೆಯಬಹುದು. ವ್ಯವಹಾರಗಳಲ್ಲಿ ಲಾಭ ನಿರೀಕ್ಷೆ ಮಾಡಬಹುದು. ಬಾಕಿ ಉಳಿದಿದ್ದ ಕೆಲಸಗಳು ವೇಗವಾಗಿ ಸಾಗುತ್ತವೆ. ಕುಟುಂಬದಲ್ಲಿ ಸಂತೊಷದ ಕ್ಷಣಗಳನ್ನು ಕಳೆಯಲಿದ್ದೀರಿ.

ತುಲಾ ರಾಶಿ

ಗ್ರಹಗಳ ಸಂಯೋಗವು ತುಲಾ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಉದ್ಯೋಗ ಹುಡುಕುತ್ತಿರುವವರಿಗೆ ಈ ವರ್ಷ ಒಳ್ಳೆಯ ಕೆಲಸ ಸಿಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಸ್ನೇಹಿತರೊಂದಿಗೆ ಒಳ್ಳೆಯ ಭಾಂದವ್ಯವನ್ನು ಬೆಳಸಲಿದ್ದೀರಿ. ಸ್ಪರ್ಧಾತ್ಮಕ ತಯಾರಿ ನಡೆಸುತ್ತಿರುವವರಿಗೆ ಉತ್ತಮವಾಗಲಿದ್ದು, ದೀರ್ಘಕಾಲದ ಕಾಯಿಲೆಯಿಂದ ಮುಕ್ತಿ ಪಡೆಯಲಿದ್ದೀರಿ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.