ಅಂಕಣ

ಸ್ವಾವಲಂಬಿ ಬದುಕಿಗೆ ಬ್ಯಾಗ್ ಉದ್ಯಮ

ಕೇವಲ 1 ಗಂಟೆಯಲ್ಲಿ 1 ಬ್ಯಾಗ್ ತಯಾರಿಸುವ ಮೂಲಕ ನೀವು 500 ರೂ. ಖರ್ಚು ಮಾಡಿ 1000 ರೂ. ಆದಾಯ ಗಳಿಸಬಹುದು. ಹೀಗೆ ದಿನಕ್ಕೆ ನೀವು ಮನೆಯಲ್ಲಿಯೇ ಕೇವಲ 5 ಗಂಟೆ ಕೆಲಸ ಮಾಡಿ 5 ಬ್ಯಾಗ್ ತಯಾರಿಸಿದರೆ 5000 ರೂ. ಗಳಿಸಬಹುದು. ಅದರಲ್ಲಿ 2500 ರೂ. ಖರ್ಚು ತೆಗೆದರೂ ನಿಮಗೆ 2500 ರೂ. ಲಾಭ ಸಿಗಲಿದೆ. ಇದೇ ರೀತಿ ತಿಂಗಳಿಗೆ 60-75 ಸಾವಿರ ರೂ. ಆದಾಯ ಗಳಿಸಬಹುದು. ಇದು ಡಿಸೈನರ್ ಹ್ಯಾಂಡ್ ಬ್ಯಾಗ್ ಬಿಸಿನೆಸ್ ಸಾಮರ್ಥ್ಯ.

ಹೌದು, ಬಹಳಷ್ಟು ಜನರು ಅನ್ಯರ ಕೈ ಕೆಳಗೆ ಕೆಲಸ ಮಾಡುವ ಬದಲಿಗೆ ತಮ್ಮದೇ ಬಿಸಿನೆಸ್ ಆರಂಭಿಸಬೇಕು ಎಂಬ ಆಸೆ ಹೊಂದಿರುತ್ತಾರೆ. ಆದರೆ, ಅವರಿಗೆ ಸೂಕ್ತ ಅವಕಾಶ ಸಿಕ್ಕಿರುವುದಿಲ್ಲ. ಅದರಲ್ಲಿಯೂ ಗೃಹಿಣಿಯರಿಗಂತೂ ಮನೆಯನ್ನು ನಿಭಾಯಿಸುವುದರ ಜತೆಗೆ ಬೇರೆ ಏನಾದರೂ ಬಿಸಿನೆಸ್ ಮಾಡಬೇಕು ಎಂಬ ಆಲೋಚನೆ ಹೊಂದಿರುತ್ತಾರೆ. ಇಂಥವರಿಗಾಗಿಯೇ ffreedom app ಕಡಿಮೆ ಬಂಡವಾಳದಲ್ಲಿ ಮನೆಯಲ್ಲಿಯೇ ಅತೀ ಹೆಚ್ಚು ಆದಾಯ ಗಳಿಸಬಹುದಾದ ಡಿಸೈನರ್ ಹ್ಯಾಂಡ್ ಬ್ಯಾಗ್ ಮೇಕಿಂಗ್ ಕೋರ್ಸ್ ಅನಾವರಣ ಮಾಡಿದೆ.

ಬ್ಯಾಗ್ ಮಾರುಕಟ್ಟೆ ಮೌಲ್ಯ: ನೋಡಲು ಚಿಕ್ಕದಾಗಿದ್ದರೂ ಬ್ಯಾಗ್ ಉದ್ಯಮ ಸಾಮನ್ಯವಾದುದ್ದಲ್ಲ. ಬ್ಯಾಗ್​ನ ಜಾಗತಿಕ ಮಾರುಕಟ್ಟೆ ಮೌಲ್ಯ ನೋಡುವುದಾದರೆ 2021ರಲ್ಲಿ 49.12ಯುಎಸ್ ಬಿಲಿಯನ್ ಡಾಲರ್ ಅಂದ್ರೆ 3 ಲಕ್ಷ 68 ಸಾವಿರದ 400ಕೋಟಿ ರೂ. ಇತ್ತು. ಅದೇ 2030 ಆಗೋವಾಗ 81.79 ಯುಎಸ್ ಬಿಲಿಯನ್ ಡಾಲರ್ ಅಂದ್ರೆ 6 ಲಕ್ಷ ಕೋಟಿ ರೂ. ತಲುಪುವ ನಿರೀಕ್ಷೆ. ಅದೇ ರೀತಿ ಭಾರತದಲ್ಲಿನ ಬ್ಯಾಗ್ ಮಾರುಕಟ್ಟೆ ಮೌಲ್ಯ 2021ರಲ್ಲಿ ಅಂದರೆ ಕಳೆದ ವರ್ಷ 2.7 ಯುಎಸ್ ಮಿಲಿಯನ್ ಡಾಲರ್ ಅಂದ್ರೆ ಸುಮಾರು 16 ಸಾವಿರ ಕೋಟಿ ರೂ. ಇತ್ತು. ಅದೇ 2026ಕ್ಕೆ ಅಂದರೆ ಇನ್ನು ವರ್ಷದಲ್ಲಿ ಶೇ.4.9 ಇಅಎ ನಿರೀಕ್ಷೆ ಇದೆ. ಇಷ್ಟು ದೊಡ್ಡ ಮಾರುಕಟ್ಟೆ ಹೊಂದಿರುವ ಬ್ಯಾಗ್ ಬಿಸಿನೆಸ್ ಮಾಡಿದ್ರೆ ನೀವು ಹೆಚ್ಚು ಲಾಭ ಪಡೆಯುವುದಂತೂ ಗ್ಯಾರಂಟಿ.

ಏನಿದು ಡಿಸೈನರ್ ಹ್ಯಾಂಡ್ ಬ್ಯಾಗ್?: ಸಾಮಾನ್ಯವಾಗಿ ಮಹಿಳೆಯರು ಮನೆಯಿಂದ ಹೊರಗೆ ಕಾಲಿಡುತ್ತಿದ್ದಾರೆ ಅಂದರೆ ಅವರು ಒಂದು ಹ್ಯಾಂಡ್ ಬ್ಯಾಗ್ ಕೈಯಲ್ಲಿ ಹಿಡಿದಿರುತ್ತಾರೆ. ಪ್ರತಿಯೊಬ್ಬರು ತಮಗೆ ಅಗತ್ಯ ವಸ್ತು ಇಟ್ಟುಕೊಳ್ಳಲು ಹ್ಯಾಂಡ್ ಬ್ಯಾಗ್ ಉಪಯೋಗಿಸುವುದು ಸಾಮಾನ್ಯವಾಗಿದೆ. ಯಾಕಂದ್ರೆ ಕೆಲವೊಂದಷ್ಟು ವಸ್ತುಗಳನ್ನು ಇಟ್ಟುಕೊಂಡು ದೊಡ್ಡ ಬ್ಯಾಗ್ ಗಳನ್ನು ಬೇಕಾದ ಕಡೆ ತೆಗೆದುಕೊಂಡು ಹೋಗುವುದಕ್ಕೆ ಸಾಧ್ಯ ಇಲ್ಲ. ಹಾಗಾಗಿ ಹ್ಯಾಂಡ್ ಬ್ಯಾಗ್​ಗಳನ್ನು ಇಷ್ಟ ಪಡುವವರ ಸಂಖ್ಯೆ ಹೆಚ್ಚು. ಕೇವಲ ವಸ್ತು ತೆಗೆದುಕೊಂಡು ಹೋಗುವುದಕ್ಕೆ ಮಾತ್ರ ಸೀಮಿತವಾಗದೆ ಅದರ ಡಿಸೈನ್ ಕೂಡ ಅಕರ್ಷಣೀಯ ಬಿಂದುವಾಗಿದೆ. ಬ್ಯಾಗ್ ವಿಧಗಳು ಕೂಡ ಪ್ರಮುಖ ಪಾತ್ರ ವಹಿಸುತ್ತೆ. ಹೀಗಾಗಿಯೇ ಇಂದು ಮಾರುಕಟ್ಟೆಯಲ್ಲಿ ಲೆದರ್ ಬ್ಯಾಗ್, ಆರ್ಟಿಫಿಶಿಯಲ್ ಬ್ಯಾಗ್, ಟೆಕ್ಸ್​ಟೈಲ್ ಬ್ಯಾಗ್ ಮತ್ತು ಪೇಪರ್ ಬ್ಯಾಗ್​ನಂತಹ ಆಕರ್ಷಣೆಯ ಬ್ಯಾಗ್​ಗಳನ್ನು ನಾವು ನೋಡಬಹುದು. ಹೀಗೆ ಮಾರ್ಕೆಟ್​ನಲ್ಲಿ ವಿಧವಾದ ಮತ್ತು ಡಿಸೈನಿಂಗ್ ಬ್ಯಾಗ್​ಗಳಿವೆ. ಆದರೆ ಇವುಗಳಲ್ಲಿ ಹೆಚ್ಚು ಬೇಡಿಕೆ ಮತ್ತು ಪ್ರಸಿದ್ದಿ ಹೊಂದಿರುವ ಬ್ಯಾಗ್ ಅಂದರೆ ಅದು ಟೆಕ್ಸ್​ಟೈಲ್ ಬ್ಯಾಗ್​ಗಳು. ಈ ಬ್ಯಾಗ್​ಗಳನ್ನು ಮನೆಯಿಂದಲೂ ಮಾಡಬಹುದು.

ನೀವು ಕೂಡ ಬ್ಯಾಗ್ ತಯಾರಿಸಿ: ಬೇಡಿಕೆಯ ಮಾರುಕಟ್ಟೆ ಹೊಂದಿರುವ ಈ ಬಿಸಿನೆಸ್​ನನ್ನು ಗೃಹಿಣಿಯರು, ವಿದ್ಯಾರ್ಥಿಗಳು, ನಿರುದ್ಯೋಗಿಗಳು, ನಿವೃತ್ತರು, ಅವಿದ್ಯಾವಂತರು ಸುಲಭವಾಗಿ ಮಾಡಬಹುದು. ಇದಕ್ಕೆ ಬೇಕಾಗಿರುವುದು ಟೈಲರಿಂಗ್ ಮಷಿನ್, ಕೆಲವೊಂದಿಷ್ಟು ಕಚ್ಚಾವಸ್ತು ಅಷ್ಟೇ. ಅದರಿಂದಲೇ ಈ ಬಿಸಿನೆಸ್ ಶುರು ಮಾಡಬಹುದು. ಇದನ್ನೇ ಒಂದು ವೃತ್ತಿಯಾಗಿ ಸ್ವೀಕರಿಸಿ ಅಂಗಡಿ ಮಾಡಿ ಮಾರಿದರೂ ದುಡಿಮೆ ಸಾಧ್ಯ.

ಕಡಿಮೆ ಬಂಡವಾಳ-ದುಪ್ಪಟ್ಟು ಆದಾಯ: ಬಿಸಿನೆಸ್ ಆರಂಭಿಸುವ ಮುನ್ನ ಪ್ರತಿಯೊಬ್ಬರು ಲೆಕ್ಕ ಹಾಕುವುದು ಎಷ್ಟು ಬಂಡವಾಳ ಬೇಕು? ಅಂತಾ. ಬಿಸಿನೆಸ್ ಅನ್ನು ಶೂನ್ಯ ಬಂಡವಾಳದಲ್ಲಿ ಆರಂಭಿಸಲು ಸಾಧ್ಯವಿಲ್ಲ. ಆದರೆ ಅಲ್ಪ ಬಂಡವಾಳದಲ್ಲಿ ಆರಂಭಿಸಬಹುದು. ಹೀಗೆ ಆರಂಭಿಸಬಹುದಾದ ಬಿಸಿನೆಸ್​ನಲ್ಲಿ ಬ್ಯಾಗ್ ಬಿಸಿನೆಸ್ ಕೂಡ ಒಂದು. ಇದು ಸಹ ಹೋಮ್ ಬೇಸ್ಡ್ ಬಿಸಿನೆಸ್ ಸಾಲಿಗೆ ಸೇರುತ್ತೆ. ಬಿಸಿನೆಸ್​ನಲ್ಲಿ ನೀವು ಖರ್ಚು ಮಾಡಿದ ಬಂಡವಾಳಕ್ಕಿಂತ ದುಪ್ಪಟ್ಟು ಆದಾಯ ಪಡೆಯುವುದಕ್ಕೆ ಸಾಧ್ಯವಿದೆ. ಕ್ರಿಯೇಟಿವಿಟಿ, ಡಿಸೈನ್ ಮತ್ತು ಗುಣಮಟ್ಟ ಈ ಬಿಸಿನೆಸ್ ಸೀಕ್ರೇಟ್ ಅಂದರೆ ತಪ್ಪಾಗಲಾರದು. ನೀವು ಟೈಲರಿಂಗ್ ಮಾಡುತ್ತಿದ್ದರೆ ಈ ಬಿಸಿನೆಸ್ ಆರಂಭಿಸಬಹುದು. ನಿಮ್ಮ ಬಳಿ ಹಳೇ ರೇಷ್ಮೇ ಸೀರೆ, ಜೀನ್ಸ್​ಬಟ್ಟೆ ಇದ್ರೆ ಸಾಕು ಅವುಗಳಿಂದಲೂ ಬ್ಯಾಗ್, ಪರ್ಸ್ ಮಾಡಿಕೊಳ್ಳಬಹುದು. ಇದರಲ್ಲಿ ನಿಮಗೆ ಸಮಯ ಕೂಡ ಹೆಚ್ಚು ಬೇಕಾಗಿಲ್ಲ.

ffreedom appನಲ್ಲಿ ಬ್ಯಾಗ್ ಮೇಕಿಂಗ್ ಕೋರ್ಸ್: ಪ್ರತಿಯೊಬ್ಬರು ಆರ್ಥಿಕ ಪ್ರಗತಿ ಕಂಡುಕೊಳ್ಳಬೇಕು ಎಂಬ ಉದ್ದೇಶ ಹೊಂದಿರುವ ffreedom app ಈ ಕೋರ್ಸ್ ಅನ್ನು ಅನಾವರಣ ಮಾಡಿದೆ. ಇದರಲ್ಲಿ ಈಗಾಗಲೆ ಬ್ಯಾಗ್ ಮೇಕಿಂಗ್ ಉದ್ಯಮದಲ್ಲಿ ಯಶಸ್ವಿಯಾದ ಮತ್ತು 1000ಕ್ಕೂ ಹೆಚ್ಚು ಜನರಿಗೆ ಬ್ಯಾಗ್ ಮೇಕಿಂಗ್ ಬಗ್ಗೆ ತರಬೇತಿ ನೀಡಿದ ಮೈಸೂರಿನ ಮಹಿಳಾ ಉದ್ಯಮಿ ಯೋಗೇಶ್ವರಿ ಅವರೇ ಹ್ಯಾಂಡ್ ಬ್ಯಾಗ್ ತಯಾರಿಕೆ ಬಗ್ಗೆ ಸಂಪೂರ್ಣ ಮಾರ್ಗದರ್ಶನ ನೀಡುತ್ತಾರೆ. ಈ ಕೋರ್ಸ್ ಜತೆಗೆ ನೀವು ffreedom appನಲ್ಲಿ ಕೃಷಿ, ಬಿಸಿನೆಸ್ ಮತ್ತು ಹಣಕಾಸಿಗೆ ಸಂಬಂಧಿಸಿದಂತೆ 820ಕ್ಕೂ ಹೆಚ್ಚು ಕೋರ್ಸ್​ಗಳನ್ನು ನೋಡಬಹುದು ಮತ್ತು ಪ್ರತಿಯೊಬ್ಬ ಯಶಸ್ವಿ ಮಾರ್ಗದರ್ಶಕರಿಂದ ನೀವು ಕೂಡ ಕಲಿತು ಅದನ್ನು ಅಳವಡಿಸಿಕೊಂಡು ಉತ್ತಮ ಜೀವನ ಸಾಗಿಸಬಹುದು.

ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯಸುವವರಿಗೆ ffreedom appನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ ಕಾಲ್ ಮಾಡಿ - 02262116777.

ಕೋರ್ಸ್​ನಲ್ಲಿ ಏನಿದೆ?

  • ಕೋರ್ಸ್ ಪರಿಚಯ
  • ಮಾರ್ಗದರ್ಶಕರ ಪರಿಚಯ
  • ಏನಿದು ಡಿಸೈನರ್ ಹ್ಯಾಂಡ್ ಬ್ಯಾಗ್ ಮೇಕಿಂಗ್?
  • ಬಂಡವಾಳ, ಸಾಲ, ಸರ್ಕಾರದ ಸೌಲಭ್ಯ ಮತ್ತು ವಿಮೆ
  • ಸ್ಥಳ ಆಯ್ಕೆ, ನೋಂದಣಿ, ಅನುಮತಿ, ಪರವಾನಗಿ ಮತ್ತು ಮಾಲೀಕತ್ವ
  • ಉತ್ಪನ್ನ, ಮೂಲ ಸೌಕರ್ಯ, ಸಂಗ್ರಹಣೆ, ಸಿಬ್ಬಂದಿ ಮತ್ತು ಪ್ಯಾಕಿಂಗ್
  • ಬೆಲೆ, ಆದಾಯ, ಖರ್ಚು ಮತ್ತು ಲಾಭ
  • ಮಾರ್ಕೆಟಿಂಗ್ ಮತ್ತು ಬ್ರ್ಯಾಂಡಿಂಗ್
  • ಡಿಸೈನರ್ ಹ್ಯಾಂಡ್ ಬ್ಯಾಗ್ ತಯಾರಿಕೆ (ಪ್ರಾಕ್ಟಿಕಲ್)
  • ಸವಾಲುಗಳು ಮತ್ತು ಮಾರ್ಗದರ್ಶಕರ ಕಿವಿಮಾತು