ಲಾಕ್ಡೌನ್ನಲ್ಲಿ ಸಿನಿಮಾ ತಾರೆಯರು ಸಿನಿಮಾ ನೋಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ಪೈಕಿ ಪ್ರಣೀತಾ ಸುಭಾಷ್ ಯಾವ ಸಿನಿಮಾ ನೋಡಿದ್ದಾರೆ, ಆ ಚಿತ್ರ ಅವರಿಗೆ ಯಾಕೆ ಹಿಡಿಸಿತು ಎಂದು ಅವರೇ ಹೇಳುತ್ತಾರೆ ಕೇಳಿ. ಓವರ್ ಟು ಪ್ರಣೀತಾ ...
ನಾನು ಹೆಚ್ಚಾಗಿ ನೋಡುವುದು ಕಮರ್ಷಿಯಲ್ ಸಿನಿಮಾಗಳನ್ನು. ರೊಮ್ಯಾಂಟಿಕ್ ಸಿನಿಮಾಗಳೆಂದರೆ ಇಷ್ಟ. ಲಾಕ್ಡೌನ್ನಲ್ಲಿ ಬೇರೆ ಬೇರೆ ಶೈಲಿಯ ಸಿನಿಮಾಗಳನ್ನು ನೋಡಿದ್ದೇನೆ. ಈಗ ಅದನ್ನು ಹೊರತುಪಡಿಸಿ ಇತ್ತೀಚೆಗೆ ಕನ್ನಡದ ‘ಗಂಟುಮೂಟೆ’ ಸಿನಿಮಾ ಇಷ್ಟವಾಯ್ತು. ಹರೆಯದ ಅಮಲಿನಲ್ಲಿ ಉಂಟಾಗುವ ತವಕ-ತಲ್ಲಣಗಳನ್ನು ನಿರ್ದೇಶಕಿ ರೂಪಾ ರಾವ್ ಮನಮುಟ್ಟುವಂತೆ ತೆರೆಮೇಲೆ ತಂದಿದ್ದಾರೆ. 90ರ ಕಾಲಘಟ್ಟದಲ್ಲಿ ಕಥೆ ತೆರೆದುಕೊಳ್ಳುವುದರಿಂದ ಅದನ್ನೇ ನೋಡಿದಂತೆ ಭಾಸವಾಗುತ್ತದೆ. ಹರೆಯದ ಅಮಲಿನಲ್ಲಿ ಉಂಟಾಗುವ ತವಕ ತಲ್ಲಣಗಳು
ಹೇಗಿರುತ್ತವೆ ಎಂಬುದನ್ನು ಈ ಸಿನಿಮಾ ಮೂಲಕ ನೋಡಬಹುದು. ಈ ಸಿನಿಮಾದ ಜತೆಗೆ ಹಿಂದಿಯ ‘ಪತಿ ಪತ್ನಿ ಔರ್ ವೋ’ ಕನ್ನಡದ ‘ದಿಯಾ’, ಕೊರಿಯಾದ ‘ಪ್ಯಾರಸೈಟ್’ನೋಡಿದೆ. ಎಲ್ಲವೂ ಇಷ್ಟವಾದವು.