ಅಂಕಣ

ಪ್ರೋತ್ಸಾಹದ ಮಾತೇ ಸಾಧಕನಿಗೆ ಸೇತುವೆ!

ಮನಿ ಮಾತು ಬರೆಯುತ್ತಾ ಸುಮಾರು 4 ವರ್ಷ ಆಯ್ತು. ಈ 4 ವರ್ಷದಿಂದ ಹಣಕಾಸು, ಕೃಷಿ ಮತ್ತು ಬಿಸಿನೆಸ್ ಬಗ್ಗೆ ಬಹಳಷ್ಟು ವಿಚಾರವನ್ನು ನಿಮ್ಮ ಜತೆ ಹಂಚಿಕೊಂಡಿದ್ದೇನೆ. ಆದರೆ ನಾನಿವತ್ತು ನಿಮ್ಮ ಮುಂದೆ ಬೇಡಿಕೆಯೊಂದನ್ನು ಇಡುತ್ತಿದ್ದೇನೆ. ನಾವು ಇಂದು ಗ್ಲಾಮರಸ್ ಲೋಕದಲ್ಲಿದ್ದೇವೆ. ಯಾರದೋ ಮಗುವಿನ ನಾಮಕರಣ, ಉಪನಯನ, ಮದುವೆ, ಮುಂಜಿ, ಮದುವೆ ವಾರ್ಷಿಕೋತ್ಸವಕ್ಕಾಗಿ ಗಿಫ್ಟ್ ಏನು? ಪಾರ್ಟಿ ಏನು? ಎಲ್ಲವನ್ನು ಮಾಡುತ್ತೇವೆ. ಆದರೆ ಯಾರೋ ಒಬ್ಬ ಯುವಕ ಒಂದು ಬಿಸಿನೆಸ್ ಶುರು ಮಾಡುತ್ತಾನೆ ಅಂದರೆ ಅವರಿಗೆ ಗಿಫ್ಟ್ ಕೊಡೋಣ, ಬಿಸಿನೆಸ್ ಕಟ್ಟಲು ಅಗತ್ಯ ಉಪಕರಣಗಳನ್ನು ಕೊಡೋಣ ಅನ್ನೋ ಮನಸ್ಥಿತಿ ಇಲ್ಲವೇ ಇಲ್ಲ. ಬದಲಿಗೆ ಬೇಡದ ವಿಚಾರಕ್ಕೆ ಗಿಫ್ಟ್ ಕೊಡೋ ಬದಲು ಈ ತರ ಬಿಸಿನೆಸ್ ಶುರು ಮಾಡೋರನ್ನ, ತನ್ನದೇ ವ್ಯಾಪಾರ ಮಾಡೋರಿಗೆ ಉತ್ತೇಜನ ಕೊಟ್ಟಾಗ ಎಲ್ಲರೂ ಉತ್ತಮ ಬದುಕು ಕಟ್ಟಿಕೊಳ್ಳಲ್ವಾ?

ಜ್ಞಾನ, ಅವಕಾಶ ಹಂಚಲು ಫ್ರೀಡಂ ಆ್ಯಪ್​ ಪ್ರಯತ್ನ: ಪ್ರತಿಯೊಬ್ಬರಿಗೂ ಸಮಾಜದಲ್ಲಿ ಗೌರವ ಇರಬೇಕು, ಊಟ, ಬಟ್ಟೆ, ಮನೆ, ಕಾರು, ಬೈಕು ಇರಬೇಕು ಅಂದಾಗ ಮಾತ್ರ ಸಮಾಜ ಚೆನ್ನಾಗಿರೋಕೆ ಸಾಧ್ಯ. ಯಾವಾಗ ಬೇರೆಯವರ ಹತ್ತಿರ ಇರೋದು ತನ್ನ ಹತ್ತಿರ ಇಲ್ಲ ಅಂದುಕೊಳ್ಳುತ್ತಾರೋ ಆಗ ಅದನ್ನು ಪಡೆಯಲು ಅಡ್ಡದಾರಿ ಹಿಡಿಯವ ಸಾಧ್ಯತೆ ಇರುತ್ತೆ. ಆಗಲೆ ಸಮಾಜ ಕೆಟ್ಟುಹೋಗುತ್ತೆ. ಹಾಗಾಗಿಯೇ ನಮ್ಮ ಫ್ರೀಡಂ ಆಪ್ ಜನರಿಗೆ ಜ್ಞಾನ ಮತ್ತು ಅವಕಾಶವನ್ನು ಹಂಚಬೇಕು ಜತೆಗೆ ಅವಕಾಶ ಹುಡುಕಿ ಹೊಸ ಜ್ಞಾನವನ್ನು ನಂಬಿ ಏನೋ ಮಾಡಬೇಕು ಅಂತ ಹೋಗುವವರಿಗೆ ಬೆನ್ನುತಟ್ಟೋ ಪ್ರಯತ್ನ ಮಾಡಲು ನಿಂತಿದೆ.

ಅಕ್ಕಪಕ್ಕದಲ್ಲಿರುವ ಉತ್ಸುಕರಿಗೆ ನೀವೇ ಸೇತುವೆಯಾಗಿ: ನಿಮ್ಮ ಊರಲ್ಲಿ ಯಾರೋ ಓದಿರುವ ಹುಡುಗ ಗ್ರಾ್ಯಜುಯೇಷನ್ ಮಾಡಿರುತ್ತಾನೆ, ಇನ್ನೇನೋ ಓದಿರುತ್ತಾನೆ. ಅವನು ಟೀ ಮಾರುವುದಕ್ಕೆ ಶುರು ಮಾಡಿರುತ್ತಾನೆ, ತರಕಾರಿ ಅಂಗಡಿ ಇಟ್ಟಿರುತ್ತಾನೆ ಅಥವಾ ಬೀದಿ ಬದಿಯಲ್ಲಿ ಒಂದು ಅಂಗಡಿ ಹಾಕಿರುತ್ತಾನೆ. ಹೆಮ್ಮೆ ಪಡ್ರಿ, ಅವನು ಕಳ್ಳತನ ಮಾಡ್ತಾ ಇಲ್ಲ, ಮೋಸ ಮಾಡ್ತಾ ಇಲ್ಲ, ಸುಳ್ಳು ಹೇಳ್ತಾ ಇಲ್ಲ, ತನ್ನ ಸ್ವಂತ ಪರಿಶ್ರಮದಿಂದ ದುಡಿಮೆ ಮಾಡುತ್ತಿದ್ದಾನೆ. ಈ ತರದವರಿಗೆ ನೀವು ಪೋ›ತ್ಸಾಹ ಮಾಡಿ, ಅವರ ಬಗ್ಗೆ ನೀವು ನಾಲ್ಕೂ ಹೆಮ್ಮೆಯ ಮಾತುಗಳನ್ನಾಡಿದ್ರೆ, ಅವರು ಮನೆಯಲ್ಲಿ ಅಪ್ಪ, ಅಮ್ಮರಿಗೆ ಬರ್ಡನ್ ಆಗುವುದನ್ನು ನಿಲ್ಲಿಸುತ್ತಾರೆ. ಇಲ್ಲ ಅಂದರೆ ಒಳ್ಳೆಯ ಕೆಲಸ ಸಿಕ್ಕಿಲ್ಲ ಅಂಥ ಅಂದುಕೊಂಡು ಅಪ್ಪ, ಅಮ್ಮನ ದುಡಿಮೆ ನಂಬಿಕೊಂಡು ಅವರಿಗೆ ಭಾರವಾಗಿ ಬದುಕುತ್ತಾರೆ. ಅಂಥವರು ಬೇಕಾ?

ಸಣ್ಣ ಆರಂಭ, ದೊಡ್ಡ ಉದ್ಯಮಿಯನ್ನಾಗಿಸಲ್ವಾ?: ನಾನು ಹೇಳುವುದಿಷ್ಟೇ, ಡಿಗ್ನಿಟಿ ಆಫ್ ಲೇಬರ್​ಅಂತಾರೆ. ಅಂದ್ರೆ, ಯಾವ ಕೆಲಸವೂ ಕಡಿಮೆ ಅಲ್ಲ. ಸಾಫ್ಟ್​ವೇರ್ ಇಂಜಿನಿಯರ್ ಅಂದ್ರೆ ದೊಡ್ಡವರು ಅಂಥ ಅಲ್ಲ, ಕಲೆಕ್ಟರ್ ಆದ್ರು ಅಂದ ತಕ್ಷಣ ಅದು ದೊಡ್ಡ ಕೆಲಸವಲ್ಲ. ಎಲ್ಲ ಕೆಲಸವನ್ನು ಶ್ರದ್ಧೆಯಿಂದ, ಮನಸ್ಪೂರ್ತಿಯಾಗಿ ಮಾಡಿದ್ರೆ ಎಲ್ಲ ಕೆಲಸದಲ್ಲಿಯೂ ಸಕ್ಸಸ್ ಇದೆ. ಎಲ್ಲ ಕೆಲಸದಲ್ಲಿಯೂ ಬೆಳೆಯುವುದಕ್ಕೆ ಅವಕಾಶ ಇದೆ. ಎಷ್ಟೋ ಜನ ರಸ್ತೆ ಬದಿಯಲ್ಲಿ ಪಾನಿಪೂರಿ, ಟೀ ಮಾರುವುದಕ್ಕೆ ಶುರು ಮಾಡಿದವರು ಬಜ್ಜಿ, ಬೋಂಡ ಮಾರುವುದಕ್ಕೆ ಶುರು ಮಾಡಿದವರು ಇಂದು ದೊಡ್ಡ ದೊಡ್ಡ ಬಿಸಿನೆಸ್ ಕಟ್ಟಿದ್ದಾರೆ, ರೆಸ್ಟೋರೆಂಟ್​ಗಳನ್ನು ಕಟ್ಟಿದ್ದಾರೆ, ಆ ಮೂಲಕ ಬಡತನ ಹತ್ತಿಕ್ಕಿ ಬಹಳ ಶ್ರೀಮಂತರಾಗಿದ್ದಾರೆ.

ರಾಜರ ಕಾಲದಲ್ಲೇ ಭಾರತ ಉದ್ಯಮವನ್ನು ಪೋಷಿಸಿತ್ತು: 1700ನೇ ಇಸವಿಯಲ್ಲಿ ಬ್ರಿಟೀಷರು ಭಾರತಕ್ಕೆ ಬಂದಿದ್ದಾಗ ಯಾವ ಕಂಪೆನಿಗಳಿದ್ದವು? ಅವರು ಬರುವ ಪೂರ್ವದಲ್ಲೂ ಯಾವ ಕಂಪನಿ ಇತ್ತು. ಆದರು ದೇಶ ಶ್ರೀಮಂತವಾಗಿತ್ತು. ಆ ಸಮಯದಲ್ಲಿ ಪ್ರಪಂಚದ ಶೇ.32 ಜಿಡಿಪಿ ನಮ್ಮ ಭಾರತದ್ದಾಗಿತ್ತು. ಯಾಕಂದ್ರೆ ಆಗಿನ ಕಾಲದಲ್ಲಿ ನಮ್ಮ ದೇಶದ ರಾಜರುಗಳು ನಮ್ಮ ದೇಶದಲ್ಲಿ ವ್ಯಾಪಾರವನ್ನು ಪೋ›ತ್ಸಾಹ ಮಾಡ್ತಾ ಇದ್ರು. ನಮ್ಮ ದೇಶದ ಟ್ರೇಡರ್ಸ್​ಗಳು ಬೇರೆ ಬೇರೆ ದೇಶಕ್ಕೆ ಹೋಗಿ ವ್ಯಾಪಾರ ಮಾಡಿಕೊಂಡು ಬರ್ತಾಯಿದ್ರು. ಇಂದು ಇಷ್ಟೆಲ್ಲ ದೊಡ್ಡ ಕಂಪನಿಗಳಿದ್ದಾವಲ್ವಾ? ಆದರೂ ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಏಕೆ ಘೊರವಾಗಿದೆ? ಹೀಗಾಗಿ ರಾಜ-ಮಹಾರಾಜರಂತೆ ನಾವು ಕೂಡ ಉದ್ಯಮಿ ಆಕಾಂಕ್ಷಿಗಳನ್ನು ಬೆನ್ನುತಟ್ಟಿದರೆ ದೇಶದಲ್ಲಿ ಎಲ್ಲರೂ ನೆಮ್ಮದಿ ಜೀವನ ಕಾಣಲಾರರೇ?

ಪುರಾಣಗಳಲ್ಲೂ ವ್ಯಾಪಾರಿಗಳ ಉಲ್ಲೇಖ: ನನಗಿನ್ನೂ ನೆನಪಿದೆ, ನಮ್ಮ ಮನೆಗಳಲ್ಲಿ ಸತ್ಯನಾರಾಯಣ ಪೂಜೆ ಸಮಯದಲ್ಲಿ ಕಥೆ ಹೇಳುವಾಗ ಆ ಕಥೆಯಲ್ಲಿ ವ್ಯಾಪಾರಿಯೊಬ್ಬ ತನ್ನ ಅಳಿಯನೊಂದಿಗೆ ಎಲ್ಲೋ ಹೋಗಿದ್ದ ಅಂತಿದೆ. ಅಂದ್ರೆ, ಯಾವುದೋ ಕಾಲದಲ್ಲಿ ಬರೆದ ಸತ್ಯನಾರಾಯಣ ಕಥೆಯಲ್ಲಿಯೂ ವ್ಯಾಪಾರಿ ಇದ್ರು ಅಂತ ಆಯ್ತು. ಹೌದು, ಯಾವುದು ಹೊಸದಲ್ಲ, ಆದರೆ ನಾವು ಅದನ್ನ ಮರೆಯುತ್ತಿದ್ದೇವೆ ಅಷ್ಟೇ. ಇದಕ್ಕೆಲ್ಲ ಕಾರಣ ಏನು ಗೊತ್ತಾ? ನಮ್ಮ ಶಿಕ್ಷಣ ವ್ಯವಸ್ಥೆ.

ಇವನಿಗೆ ಎಂಬಿಎ ಆಗಿದೆ, ಗ್ರಾ್ಯಜುಯೇಷನ್ ಆಗಿದೆ, ಇಂಜಿನಿಯರಿಂಗ್ ಆಗಿದೆ, ಅದೇ ಫಿಲ್ಡ್ನಲ್ಲಿ ಕೆಲಸ ಮಾಡ್ತಾನೆ ಮತ್ತೆಲ್ಲೋ ಕೆಲಸ ಮಾಡ್ತಾನೆ ಅನ್ನೋ ಹಾಗೆ ಮಾಡಬೇಡಿ. ನಾನು ಹೇಳ್ತಾ ಇದ್ದೀನಿ, ಮದ್ದೂರಲ್ಲಿ ಬೆಳೆಯುವ ಎಳನೀರನ್ನ ಅಲ್ಲಿಯ ರೈತರ ಮಕ್ಕಳೇ ಪ್ರಾಡಕ್ಟ್​ಗಳನ್ನ ಮಾಡಿ, ಪ್ಯಾಕೇಜ್​ಗಳನ್ನ ಮಾಡಿ ಮಾರುವಷ್ಟು ದೊಡ್ಡ ಉದ್ಯಮಿಯಾಗಬೇಕು. ಬ್ಯಾಡಗಿ ಮೆಣಸನ್ನ ಬೆಳೆಯೋ ರೈತರು ಇನ್ನೂ ಕಷ್ಟದಲ್ಲಿದ್ದಾರೆ. ಅವರ ಮಕ್ಕಳು ಹೋಟೆಲೋ ಇನ್ನೆಲ್ಲೋ ಕೆಲಸ ಮಾಡ್ತಿದ್ದಾರೆ. ಆದರೆ ಈ ಮೆಣಸನ್ನ ಪ್ರಪಂಚಕ್ಕೆ ರಫ್ತು ಮಾಡ್ತಿರೋ ಮಧ್ಯವರ್ತಿಗಳು ಕೋಟ್ಯಧಿಪತಿಗಳಾಗಿದ್ದಾರೆ. ಹಾಗಾಗಲೇ ಬಾರದು, ಅದೇ ರೈತರ ಮಕ್ಕಳೇ ರಫ್ತು ಮಾಡುವ ಮೂಲಕ ಶ್ರೀಮಂತರಾಗಬೇಕು. ನಮ್ಮ ಮಲೆನಾಡಿನ ಅಡಕೆಯನ್ನ ಇನ್ಯಾರೋ ದಲ್ಲಾಳಿ ಗುಜರಾತ್​ನಲ್ಲಿ ಕುಳಿತು ವ್ಯಾಪಾರ ಮಾಡಿ ಮಾರಾಟ ಮಾಡಿ ದುಡ್ಡು ಮಾಡ್ತಾ ಇದ್ದಾನೆ. ನನಗೆ ನಾಚಿಕೆ ಅಗುತ್ತೆ, ರೈತನ ಮಗನಾಗಿ ಅಡಕೆ ಬೆಳೆಯುವರ ಮಗನಾಗಿ ನಾವು ಮಾಡ್ತಾ ಇಲ್ಲ ಅಂತ. ಆ ಕೆಲಸ ನಾವು ಮಾಡಬೇಕು, ಈ ಕೆಲಸ ಮಾಡಿದಾಗ ಮಾತ್ರ ಒಂದು ಉತ್ತಮ ಸಮಾಜವಾಗುತ್ತೆ. ಬಿಸಿನೆಸ್ ಶುರು ಮಾಡಿದವರಿಗೆ ಸಪೋರ್ಟ್ ಮಾಡಿ ಅವರ ಪ್ರಾಡಕ್ಟ್ ಗಳನ್ನ ಕೊಂಡುಕೊಳ್ಳಿ. ಅಮೇಜಾನ್, ಫ್ಲಿಪ್​ಕಾರ್ಟ್​ನಿಂದ ಕೊಂಡುಕೊಳ್ಳುವುದಕ್ಕೆ ಹಲವಾರು ಜನರಿದ್ದಾರೆ. ನಿಮ್ಮ ಅಕ್ಕಪಕ್ಕದಲ್ಲಿ ಕೊಂಡುಕೊಳ್ಳಿ, ಆಗ ಅವರಿಗೆ ಸಹಾಯ ಮಾಡಿದ ಹಾಗೆ ಆಗುತ್ತೆ, ಅವರೂ ಗೆಲ್ಲುತ್ತಾರೆ. ನಿಮ್ಮವರಿಗೂ ಮುಂದೊಂದು ದಿನ ಕೆಲಸ ಕೊಡು ತ್ತಾರೆ. ಒಂದು ಉತ್ತಮ ಸಮಾಜ ಕಟ್ಟೋಕ್ಕೆ ಅವರು ಭದ್ರಬುನಾದಿ ಹಾಕುತ್ತಾರೆ. ಎಲ್ಲರಿಗೂ ಒಳ್ಳೆಯದಾಗ್ಲಿ.

ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯಸುವವರಿಗೆ ಫ್ರೀಡಂ ಆಪ್​ನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್​ಕಾಲ್ ಮಾಡಿ- 02262116777