ಅಂಕಣ

ನಿರ್ಭಯಾಗೆ ಸಿಕ್ಕ ನ್ಯಾಯದ ಪರಾಮರ್ಶೆ

ಸಿನಿಮಾ, ಸೀರಿಯಲ್​ಗಳಲ್ಲಿ ಗೋಡೆಗಂಟಿದ ಚಿತ್ರಗಳಲ್ಲಿ ಅಶ್ಲೀಲ ಚಿತ್ರಗಳೇಕಯ್ಯ? ಚಿತ್ರೀಕರಣದಲ್ಲಿ ಅತ್ಯಾಚಾರದ ದೃಶ್ಯಗಳೇಕೆ? ಹೊಡೆದಾಟ, ಹಿಂಸೆ, ರಕ್ತಪಾತ ಪ್ರದರ್ಶನಗಳು ಏಕೆ? ಕೆರಳಿಸುವುದಿಲ್ಲವೆ? ಭರತನ ನಾಟ್ಯಶಾಸ್ತ್ರದಲ್ಲಿ ರಂಗಭೂಮಿಯಲ್ಲಿ ಏನೇನು ಪ್ರದರ್ಶನೀಯವಲ್ಲ ಎಂಬ ನಿಯಮಗಳಿವೆ-ಅಯ್ಯಪ್ಪ! ಇದು ಭಾರತೀಯ ಸಂಸ್ಕೃತಿ-ನೀವು ಗೌರವಿಸುವುದಿಲ್ಲ.

‘ನ್ಯಾಯ, ಧರ್ಮ, ಸತ್ಯ’ಗಳ ಮಾತನ್ನು ಎಲ್ಲರೂ ಆಡುವವರೇ! ನೆಹ್ರೂ, ಇಂದಿರಾ, ರಾಜೀವ, ಸೋನಿಯಾದಿಗಳ ಬಾಯಲ್ಲಿ ನಾನಂತೂ ಈ ಬಗೆಯ ಭಾರತೀಯ ಸಂಸ್ಕೃತಿಗ್ರಹಿಕೆಯ ಮಾತುಗಳನ್ನು ಕೇಳಲಿಲ್ಲ! ‘ರಾಜಾ ಕಾಲಸ್ಯ ಕಾರಣಂ’ ಎಂಬುದು ಭಾರತೀಯ ಪರಿಕಲ್ಪನೆ. ‘ಸ್ತ್ರೀಲೋಲರ’ ಎಂಬ ವರ್ಗದ ‘ಸೆ ್ತ್ರ ೖಣರ’ ಒಂದು ಪರಂಪರೆಯೇ ಸಮೀಪ ಕಾಲದಲ್ಲಿ ಈ ದೇಶವನ್ನು ಆಳಿತು. ಜಾನ್ ಮಥಾಯ್ ಬರೆದ ಪುಸ್ತಕಗಳಿವೆ. ಕವಿ ರವೀಂದ್ರರು, ಶಾಂತಿನಿಕೇತನದಿಂದ ‘ವಿದ್ಯಾರ್ಥಿನಿ’ ಇಂದಿರಾರನ್ನು ಹೊರಗಟ್ಟಿದ ಚರಿತ್ರೆ, ಈ ಮಾರಾಯ್ತಿಯ ಚರಿತ್ರೆಯಲ್ಲಿ, ಅವರ ಅಭಿಮಾನಿಗಳೇ ಬರೆದುದರಲ್ಲಿ ಇದೆ. ಧೀರೇಂದ್ರ ಬ್ರಹ್ಮಚಾರಿ, ಸಂನ್ಯಾಸಿನಿ ಶಾರದಾ ಮಾತಾ, ಮಥಾಯ್ ಇನ್ನಿತರರ ಸಾಕ್ಷಿಗಳಿವೆ.

‘ಒಬ್ಬ ಹುಡುಗಿಯ ಮಾನಭಂಗ, ಕೊಲೆ ಇಂಥವು ಇಂದು ನೆನ್ನೆಯದಲ್ಲ’ ಎಂದು ಕೊಡವಿಕೊಂಡರೆ ನೀವು ಮಹಾಭಾರತದ ವಿರಾಟದೊರೆಯ, ಭೀಷ್ಮದ್ರೋಣರ ತಟಸ್ಥ ಸಾಕ್ಷ್ಯದ, ಪರೋಕ್ಷ ಬೆಂಬಲದ ಭೂತರಾಗುತ್ತೀರಿ, ಬೇತಾಳರಾಗುತ್ತೀರಿ ಅಪ್ಪಗಳಿರಾ, ನೀವು ಈವರೆಗೆ ಕಡೆಗಣಿಸಿದ ರಾಮಾಯಣ, ಮಹಾಭಾರತಗಳ ಕೇಂದ್ರಬಿಂದು, ಯುದ್ಧಮೂಲ, ಕುಲನಾಶಗಳ ಚರಿತ್ರೆ ಹೇಳಿಬಿಡುತ್ತೇನೆ. ದ್ರೌಪದಿಯ ಮಾನಕ್ಕೆ ಕೈ ಹಾಕಿದವರು ಯಾರೂ ಉಳಿಯಲಿಲ್ಲ! ಆಗ 13, 14 ವರ್ಷಗಳ ಕಾಲ ದ್ರೌಪದಿಗೆ ನ್ಯಾಯ ಸಿಗಲಿಲ್ಲ. ನಿರ್ಭಯಾಗೆ ಏಳೆಂಟು ವರ್ಷಕ್ಕೆ ಸಿಕ್ಕಿತು! ಸೀತೆಯ, ಅಂಥ ಅನೇಕ ಸ್ತ್ರೀಯರ ಮಾನಕ್ಕೆ ಕೈಹಾಕಿದ ರಾವಣನಿಗೆ, ಅವನ ಇಡೀ ಕುಲನಾಶಕ್ಕೆ ಬರೀ ಹತ್ತು ತಿಂಗಳು ಸಾಕಾಯಿತು. ಅಂದು ಶ್ರೀಕೃಷ್ಣ ಇಲ್ಲದಿದ್ದರೆ? ಅಂದು ಶ್ರೀರಾಮ ಇಲ್ಲದಿದ್ದರೆ? ಜನರಿಗೆ ಕೋರ್ಟುಗಳಲ್ಲಿ ನ್ಯಾಯದಾನ ಪದ್ಧತಿಯಲ್ಲಿ ವಿಶ್ವಾಸ ಕಳೆದರೆ, ಯುಗಕ್ಷಯವಾಗುತ್ತದೆ. ಬರೀ ಒಬ್ಬಳ ಮಾನದ ಪ್ರಶ್ನೆಯಲ್ಲ. ಒಂದು ಮೌಲ್ಯದ ಆಧಾರನಾಶ, ಕುಸಿತ, ಏನೆಲ್ಲ ಅನರ್ಥ ಮಾಡಬಹುದು? ಪಶ್ಚಿಮದವರ ರೋಲ್ ಮಾಡೆಲ್​ಗೆ ಹೋಮರನ ಈಲಿಯೆಡ್ ಕಾವ್ಯ ಮಾನದಂಡವಾಗುವುದಾದರೆ, ಕಾಣುವುದೇ ಬೇರೆ. ಅಲ್ಲಿ ಒಬ್ಬಳು ಓಡಿ ಹೋದ, ಪರಪುರುಷನ ನಂಟಿನ ಕಥೆ, ಓಡಿಹೋದವಳ ಗಂಡನ, ಪೌರುಷ ಸ್ಥಾಪನೆಯ ಕಥೆ-ಚ್ಝಠಛಿ ಜಛ್ಟಿಟಜಿಠಞ- ಅದು ತತ್ತ್ವ. ನಮ್ಮದು ಅದಲ್ಲ. ಸೀತಾ, ದ್ರೌಪದಿಯರ ಮಾನವಂತಿಕೆಯೇ ಬೇರೆ. ತದ್ವಿರುದ್ಧ. ವಿವಾಹಿತರಾಗದ ಕನ್ಯೆಯರಿಗೆ ಎಚ್ಚರಿಕೆ ಕೊಡಲು ಹಿರಿಯರು ಮಾಡಿಟ್ಟ ಶ್ಲೋಕ.

ಅಹಲ್ಯಾ, ದ್ರೌಪದಿ, ತಾರಾ, ಸೀತಾ, ಮಂಡೋದರೀ ತಥಾ |

ಪಂಚ ಕನ್ಯಾಃ ಸ್ಮರೇನ್ನಿತ್ಯಂ ಮಹಾ ಪಾತಕ ನಾಶನಂ || ಎಂಬುದು ಆ ಶ್ಲೋಕ.

‘ಹುಡುಗಿಯರೇ, ಮಾನ ಉಳಿಸಿಕೊಳ್ಳುವ ಪ್ರಸಂಗದಲ್ಲಿ ಕಷ್ಟ, ಹಾನಿ, ಅಪಖ್ಯಾತಿಗೊಳಗಾದ ಈ ಐವರು ಮಹಾಮಹಿಳೆಯರನ್ನು ಸದಾ ನೆನೆಯಿರಿ, ಜಗತ್ತು ಹಾಗಿದೆ. ಆಪತ್ತು ಸಂನ್ನಿಹಿತ’ ಎಂದು ಭಾವ.

‘ಪಂಚಕನ್ಯಾ’ ಎಂದು ಮೂಢರು, ಬಿಡಿಸದೆ ಕೂಡಿಸಿದಾಗ ಈ ‘ಐವರೂ ಕನ್ಯೆಯ’ರಲ್ಲ ಎಂಬುದು ದಡ್ಡರಿಗೆ ಮರೆಯುತ್ತದೆ. ‘ಕನ್ಯೆಯರು ಈ ಪಂಚಕವನ್ನು ನೆನೆಯಬೇಕು. ಬರಲಿರುವ ಸಂಭವನೀಯ ಆಪತ್ತುಗಳು ತೊಲಗುತ್ತವೆ’ ಎಂದು ಹರಕೆ. ಯಾರು ಆ ಮಹಿಳೆಯರು? ಅಹಲ್ಯೆ, ತನ್ನ ತಪ್ಪಿಲ್ಲದೆಯೂ, ಗಂಡ, ಗೌತಮರ ಮೇಲೆ ಆವಾಹನೆಯಾದ ಇಂದ್ರಿ್ರಾಧಿಪತಿ, ಇಂದ್ರನ ಮೋಸಕ್ಕೆ ಒಳಗಾದವಳು. ವಿವರಗಳು ರಾಮಾಯಣದಲ್ಲಿ, ಕ್ಷೇಮೇಂದ್ರನ ‘ರಾಮಾಯಣ ಮಂಜರಿ’ಯಲ್ಲಿ.

ವಸ್ತುತಃ ನಡೆದುದೇನು? ಅಹಲ್ಯೆ ವ್ಯಭಿಚಾರಿಣಿಯೇ? ದೇವತೆಗಳಿಗೆ ಶರೀರವೇ ಇಲ್ಲ ಎಂದು ವೇದಪುರಾಣಗಳು ಹೇಳುತ್ತವಲ್ಲ? ನಡೆದುದು ಹೀಗೆ. ಒಂದು ಪ್ರಾತಃಕಾಲ, ಉಷಃಪೂರ್ವದಲ್ಲಿ ಗೌತಮರು ಸ್ನಾನಕ್ಕೆ ಹೊರಟರು. ದುರ್ವಿಧಿ, ಇಂದ್ರ ಅವರ ಮೇಲೆ ಆವಾಹನೆಯಾದ, ಮುನಿಗೆ ಪತ್ನೀಸಂಗಮ ಬಯಕೆ ಆಯ್ತು. ವಾಪಸ್ಸು ಬಂದರು. ಆಡಬಾರದ ಮಾತು ಬಾಯಲ್ಲಿ ಬಂತು.

ಋತುಕಾಲಂ ಪ್ರತೀಕ್ಷಂತೇ ನಾರ್ಧಿನಃ ಸುಸಮಾಹಿತೇ ||

‘ಕಾಮಾರ್ಥಿಯಾದವನಿಗೆ, ಋತುಮತಿಯಾಗಿ ಶುದ್ಧಳಾದ ಸ್ತ್ರೀಯೊಡನೆಯೇ ಮಾತ್ರ ಸಂಗಮ ಎಂಬ ನಿಯಮವಿಲ್ಲ’ ಎಂಬ, ಋಷಿಸಂಮ್ಮತವಲ್ಲದ ಭಾವ, ಮಾತು, ಮೂಡಿ ಬಂತು. ಇವಳಿಗೆ ‘ಮುನಿವೇಷಧರಂ ಜ್ಞಾತ್ವಾ, ದೇವರಾಜ ಕುತೂಹಲಾತ್’-’ಈಗ ಗಂಡನ ಮೇಲೆ ಇಂದ್ರಿಯಾವಾಹನೆ ಆಗಿದೆ ಎಂದು ತಿಳಿದರೂ ಅಕಾಲದಲ್ಲಿ, ಅಕಾರ್ಯಕ್ಕೆ ತಡೆಯೊಡ್ಡದೆ ಸಂಮ್ಮತಿಸಿದ್ದು ತಪ್ಪಾಯ್ತು’. ನನ್ನ ‘ಶ್ರೀರಾಮಾಯಣ ಪಾತ್ರ ಪ್ರಪಂಚ’ದಲ್ಲಿ ವಿವರಗಳನ್ನು ನೋಡಿ. ಪತ್ನಿಯಾದರೂ ಪತಿಯನ್ನು ಅಕಾರ್ಯದಲ್ಲಿ ತಡೆಯಬೇಕೆಂದು ಶಾಸ್ತ್ರ. ಪತಿಗೂ ನಿಯಮಗಳುಂಟು. ವ್ಯಾಸಸ್ಮೃತಿಯ ಸೂಕ್ತಿಗಳನ್ನು ನೋಡಿ-

ನಾನಿಷ್ಟಾಂ ನಪ್ರಕುಪಿತಾಂ ನಾಪ್ರಶಸ್ತಾಂ, ನ ರೋಹಿಣಿಂ,

ನಾದಕ್ಷಿಣಾಂ ನಾನ್ಯಕಾಮಾಂ ನಾನ್ಯಯೋಷಿತಂ||

ಎಂಬಂತೆ, ‘ಪತ್ನಿಗೆ ಇಷ್ಟವಿಲ್ಲದಾಗ ಅವಳು ಸಿಟ್ಟಿನಲ್ಲಿದ್ದಾಗ, ರೋಗಪೀಡಿತೆಯಾಗಿ ದ್ದಾಗ, ಅವಳ ಸ್ವಭಾವ, ನಡತೆ, ನೇರವಾಗಿಲ್ಲದಾಗ, ಬೇರೊಬ್ಬನನ್ನು ಅವಳು ಬಯಸಿ, ದಾರಿ ಬಿಟ್ಟಾಗ ಅಥವಾ ಬೇರೊಬ್ಬನ ಹೆಂಡತಿಯನ್ನು, ಒಬ್ಬ ಪುರುಷ ಬಲಾತ್ಕರಿಸಬಾರದು’ ಎಂಬ ನಿಯಮವನ್ನು ಮೀರಿದವರು ಗೌತಮರು! ಶಿಕ್ಷೆ ಅಹಲ್ಯೆಗೆ! ‘ನಾನು ಬಯಸಿರಬಹುದು, ನೀನೇಕೆ ತಡೆಯಲಿಲ್ಲ?’ ಎಂಬುದು u್ಟಚಠಟ್ಞಚಚ್ಝಿಛಿ ಆಕ್ಷೇಪ. ಎಂಥ ಶಿಕ್ಷೆ? ಅನೇಕ ವರ್ಷ ಶಿಲೆಯಾದಳು, ಕರ್ಮಯೋಗ, ಜ್ಞಾನಯೋಗ, ಭಕ್ತಿ, ಶರಣಾಗತಿ, ಯಾವ ಪ್ರಾಯಶ್ಚಿತ್ತಕ್ಕೂ ಅರ್ಹವಲ್ಲದ ಜನ್ಮ! ಕಲ್ಲಾದುದು ಗೌತಮರ ಹೃದಯ. ನೀವು ಯಾಕೆ ತಿಳಿಯುವುದಿಲ್ಲ? ಅಹಲ್ಯೆಯದು ಅಲ್ಪತಪು್ಪ, ಗೌತಮರದು ಬಹು! ಅವರು ಪ್ರಾಯಶ್ಚಿತ್ತಕ್ಕೆ ತಪಸ್ಸಿಗೆ ಹೋದುದು ಹಿರಿಮೆ. ಅಹಲ್ಯೆಗೆ ಶ್ರೀವೇದಾಂತದೇಶಿಕರಂತೆ ಮರುಗಿದ ಇನ್ನೊಬ್ಬರನ್ನು ಕಾಣಲಾರೆವು. ಅವರ ‘ಪಾದುಕಾಸಹಸ್ರ’ದ ಅನೇಕ ಶ್ಲೋಕಗಳ ಹರವೂ ಆಳಗಳಲ್ಲಿ ಕಾಣಿರಿ. ದ್ರೌಪದಿಗೆ ಬಂದ ಆಪತ್ತು, ಕರ್ಣನ ಮೂಲದ್ದು. ದುಶ್ಶಾಸನನ ‘ಕಾರ್ಯಾಚರಣೆ’, ಭೀಷ್ಮದ್ರೋಣರ ಮೌನ ಪ್ರಾತ್ಯಕ್ಷಿತೆಯಲ್ಲಿ, ಆ ಕುಲವನ್ನೇ ನಾಶ ಮಾಡಿತ್ತು. ‘ನೆನೆವೊಡೆ ದ್ರೌಪದಿಯಂ ನೆನೆಯ’ ಎಂದು ಕನ್ನಡಕವಿ ಬರೆಯಲಿಲ್ಲ. ‘ಕರ್ಣನಂ ನೆನೆಯ’ ಎಂದದ್ದು ‘ರಾಂಗ್ ರೋಲ್ ಮಾಡೆಲ್’ ಆಯ್ತು. ತಾರೆ, ರಾಮಾಯಣದ ಸುಗ್ರೀವನಿಗೆ, ವಾಲಿಯ ಮರಣಾನಂತರ ಭೋಗವಸ್ತುವಾದಳು! ಜ್ಞಾನೀ, ರಾಮಭಕ್ತಿ, ರಾಜಕೀಯ ಬಲ್ಲವಳ ದುಸ್ಥಿತಿ-ಆಳುಗನ ್ಚn್ಠಜ್ಞಿಛಿ ಆದಳು. ತಪ್ಪೆಂದು ಅಲ್ಲಿ ಯಾರೂ ಹೇಳುವಂತಿರಲಿಲ್ಲ! ಸೀತೆಯ ವಿಷಯಕ್ಕೆ ಬರೆದರೆ ಮತ್ತೆ ರಾಮಾಯಣವೇ ಆಗುತ್ತದೆ. ಇನ್ನೂ ಬರಹಗಾರರು ಬೈಯ್ಯುತ್ತಲೇ ಇದ್ದಾರೆ, ರಾಮನನ್ನೂ, ಸೀತೆಯನ್ನೂ. ಅಯೋಧ್ಯೆ ಬಲಿಯಾಯ್ತು. ಮಂಡೋದರೀ ಮಯನ ಮಗಳು, ಮೈಸೂರಿನವಳು (ಮಯನ ಗುಹೆಗಳನ್ನು ನೆನೆಯಿರಿ)-ರಾವಣನ ಹೆಂಡತಿಯಾಗಿ ಪಟ್ಟ ಸುಖವೇನು? ರಾವಣನಿಗೆ ಬೇರೆ ಸ್ತ್ರೀಯರಲ್ಲಿ ಭೋಗ, ಅಲ್ಲದೆ ವಾಲಿಯೊಡನೆ ಅಶ್ಲೀಲ ಒಡಂಬಡಿಕೆಯಿತ್ತು. ನೀವು ನಂಬದಿದ್ದರೆ ವಾಲ್ಮೀಕಿ ಸಾಕ್ಷಿ ನೋಡಿ

ದಾರಾಃ ಪುತ್ರಾಃ ಪುರಂ ರಾಷ್ಟ್ರಂ ಭೋಗ ಆಚ್ಛಾದನ ಭೋಜನಂ

ಸರ್ವಮೇವ ಅವಿಭಕ್ತಂ ಸೌ ಭವಿಷ್ಯತಿ ಹರೀಶ್ವರ || (ಉತ್ತರಕಾಂಡ 24-41)

‘ಅಯ್ಯಾ ವಾಲಿ, ಇನ್ನು ಮೇಲೆ ನನ್ನ ಹೆಂಡತಿಯೇ ನಿನ್ನವಳು, ನನ್ನವಳೇ ನಿನ್ನ ಭೋಗವಸ್ತು. ನಿನ್ನವಳೇ ನನ್ನವಳು. ಮಕ್ಕಳು, ಊರು, ಎಲ್ಲ ರಾಜಭೋಗ, ವೈಭವ, ಹಾಸಿಗೆ, ಹೊದ್ದಿಕೆ, ಆಹಾರ-ಎಲ್ಲವೂ ಪರಸ್ಪರ ಸಮಾನ’ ಎಂದು ಆಗ ‘ಅಗ್ನಿಸಾಕ್ಷಿಕ’ ಒಡಂಬಡಿಕೆ! ಖಛಿಠಠಿಚಞಛ್ಞಿಠಿ, ಠಚ್ಞ್ಚಜ್ಛಿಜಿಛಿಛ, uಚ್ಟಿಛಿಚkಚಚ್ಝಿಛಿ. ಈಗ ಇದರಂತೆ ವಾಲಿ, ಮಂಡೋದರಿಯನ್ನೂ, ರಾವಣ ತಾರೆಯನ್ನೂ ಅನುಭವಿಸದೆ ಬಿಟ್ಟಿರಲು ಸಾಧ್ಯವೇ? ಸಮಾನ ದುಃಶೀಲ, ಚಾಪಲ್ಯ, ದೌರ್ಬಲ್ಯದ ರಾಜಕಾರಣಿಗಳ ಇಂದಿನ ರೀತಿಯಲ್ಲವೇನಿರಯ್ಯ? ಇಷ್ಟಾಗಿಯೂ ಮಂಡೋದರಿ, ರಾವಣ ಸತ್ತಾಗ ಅಳುತ್ತ ಅವನನ್ನು ನಿಂದಿಸುವ ಮಾತುಗಳನ್ನು ನೋಡಿ. ಖಜಛಿಢ ಗಛ್ಟಿಛಿ ಜಛ್ಝಿಟ್ಝಛಿಠಠ ಗಟಞಛ್ಞಿ! ಈ ಎಲ್ಲರದೂ ನಿಃಸಹಾಯಕ ಸ್ಥಿತಿ. ಆಗಿನ ಸರ್ಕಾರಗಳು ಈ ಯಾರನ್ನೂ ರಕ್ಷಿಸಲಿಲ್ಲ? ಏಕೆ? ಆಳುಗರೇ ದುರುಳರಾಗಿದ್ದರು. ಮೋದಿಯವರ ಹಿಂದಿನ ಅನೇಕರ ಚರಿತ್ರೆಗಳು ಈಗ ಬಯಲಾಗಿವೆ. ಕೀಚಕನ ಹಿಂಸೆಯನ್ನು ಕಣ್ಣಿಂದ ಕಂಡೂ, ದ್ರೌಪದಿಯನ್ನು ಪೃಷ್ಠದ ಮೇಲೆ ಅವನು ಒದ್ದು ಅವಳು ರಕ್ತ ಕಾರಿಬಿದ್ದು, ‘ರಕ್ಷಿಸು’ ಎಂದು ಕೇಳಿದಾಗಲೂ ವಿರಾಟದೊರೆ-‘ನಿಮ್ಮ ನಿಮ್ಮಲ್ಲಿ ಏನು ನಡೆದಿದೆಯೋ ನಾನರಿಯೆ! ನಿನ್ನದೇ ತಪ್ಪೋ? ಅವನದೋ ಗೊತ್ತಿಲ್ಲ’ ಎಂದನಲ್ಲ? ಅದು ಈ ಏಳು ವರ್ಷ ನಿರ್ಭಯಾ ಹಂತಕರನ್ನು ರಕ್ಷಿಸಿದ ನ್ಯಾಯವಾದಿಗಳ ರೀತಿ! ಎಷ್ಟು ಸಲ ಯತ್ನಿಸಿದರು? ಭಾರತದಲ್ಲಿ ಈ ಹಂತಕರ ನೇಣಿಗೆ, ನ್ಯಾಯಾಲಯ ತೀರ್ಪಿತ್ತ ಮೇಲೂ, ಅವರನ್ನು ಬದುಕಿಸಲು ಕೊಸರಾಟ ಮಾಡಿದವರಿಗೆ ಧಿಕ್ಕಾರ!

ಈಗ ವಸ್ತ್ರಸಂಹಿತೆಗೆ ಬರೋಣ. ಮೈಗೆ ಅಂಟಿಕೊಂಡ ಬಟ್ಟೆಯುಟ್ಟು, ಬೆನ್ನು ಅರೆತೆರೆದು, ಎದೆ ಅರ್ಧ ಬಿಚ್ಚಿ ಸ್ಕೂಲು, ಕಾಲೇಜು ಹುಡುಗಿಯರು ಆಪತ್ತು ತಂದುಕೊಳ್ಳುವುದೇಕೆ? ಅವರ ಮಾತಾಪಿತೃಗಳಿಗೆ ವಿವೇಕ ಬೇಡವೇ? ಬಟ್ಟೆ ಇರುವುದು ಮೈ, ಮಾನ ಮುಚ್ಚಲೋ? ಅಥವಾ ತೆರೆದು ಆಪತ್ತು ಆಹ್ವಾನಿಸಲೋ? ಒಲಿವರ್ ಗೋಲ್ಡ್್ಮ್ನ ಇಜಿಠಿಜ್ಢಿಛ್ಞಿ ಟ್ಛ ಠಿಜಛಿ ಗಟ್ಟ್ಝ ಪ್ರಬಂಧ ಸಂಕಲನದಲ್ಲಿ ಇಂಗ್ಲೆಂಡು ಸ್ತ್ರೀ-ಪುರುಷರ ವಿಡಂಬನೆ ಹೀಗೆ ಬರುತ್ತದೆ-‘ಅವಶ್ಯಕ್ಕಿಂತ ಹೆಚ್ಚು ಮೈ ಮುಚ್ಚಿ, ಟೈ ಕಟ್ಟಿಕೊಂಡ, ಗಂಡು ವಸ್ತ್ರಪ್ರಿಯರು ಹಾಗೂ ಅವಶ್ಯಕತೆಗಿಂತ ಕಡಿಮೆ ಉಡುಪು ಧರಿಸಿದ ಸ್ತ್ರೀಯರು.’ ಅದು ಬ್ರಿಟಿಷರ ರೀತಿ, ಕ್ಲಬ್ಬು, ಪಬ್ಬು, ಮಬ್ಬು ರೀತಿ-ಅದು ಇಲ್ಲಿ ಬೇಡ ಎಂದವರು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್! ಅವರದೇನು ತಪು್ಪ?

ಅರುಂಧತೀ ರಾಯ್, ಮೇಧಾ ಪಾಟ್ಕರ್, ಬರ್ಖಾ ದತ್ತ, ಸ್ತ್ರೀಹಕ್ಕುವಾದಿಗಳು-ಯಾರು ನಿರ್ಭಯಾಳನ್ನು ರಕ್ಷಿಸಿದರು? ಯಾರು ದುರುಳರಿಗೆ ಬುದ್ಧಿ ಹೇಳಿದರು? ಹೇಳಬೇಕಾದ್ದು, ಹೇಳಬೇಕಾದಾಗ ಹೇಳದೆ, ಈಗ ಅಪರಾಧಿಗಳು ಸತ್ತ ಮೇಲೆ ತಮಟೆ ಹೊಡೆಯುವುದೇಕೆ? ಕ್ರೆಡಿಟ್​ಗಾಗಿ ಸ್ಪರ್ಧೆ ಏಕೆ? ಇನ್ನೂ ಒಂದು ಮಾತು. ಸಿನಿಮಾ, ಸೀರಿಯಲ್​ಗಳಲ್ಲಿ ಗೋಡೆಗಂಟಿದ ಚಿತ್ರಗಳಲ್ಲಿ ಅಶ್ಲೀಲ ಚಿತ್ರಗಳೇಕಯ್ಯ? ಚಿತ್ರೀಕರಣದಲ್ಲಿ ಅತ್ಯಾಚಾರದ ದೃಶ್ಯಗಳೇಕೆ? ಹೊಡೆದಾಟ, ಹಿಂಸೆ, ರಕ್ತಪಾತ ಪ್ರದರ್ಶನಗಳು ಏಕೆ? ಕೆರಳಿಸುವುದಿಲ್ಲವೆ? ಭರತನ ನಾಟ್ಯಶಾಸ್ತ್ರದಲ್ಲಿ ರಂಗಭೂಮಿಯಲ್ಲಿ ಏನೇನು ಪ್ರದರ್ಶನೀಯವಲ್ಲ ಎಂಬ ನಿಯಮಗಳಿವೆ-ಅಯ್ಯಪ್ಪ! ಇದು ಭಾರತೀಯ ಸಂಸ್ಕೃತಿ-ನೀವು ಗೌರವಿಸುವುದಿಲ್ಲ. ಕರ್ಣನಿಗಾಗಿ ಮರುಗಿ ಸಾಯಿರಿ! ದ್ರೌಪದಿಗಾಗಿ ಅಲ್ಲ! ರಾವಣನ ವೈಭವೀಕರಣದಲ್ಲಿ ಸಾಯಿರಿ! ಸೀತೆಗಾಗಿ ಮರುಗದೆ, ಸಾಹಿತ್ಯವೇ ಸತ್ತರೆ ಅಳುತ್ತೀರಾ?