ಅಂಕಣ

ಎವನ್​ಪ್ಲಾಸ್ಟ್ ಪೈಪ್​ಗಳಿಗೆ ಡಿಮಾಂಡ್: 56 ವರ್ಷದಿಂದ ಗ್ರಾಹಕರ ನಂಬಿಕೆ ಗಳಿಸಿದ ಕಂಪನಿ

ಬೆಂಗಳೂರು: ದೇಶದ ಅತ್ಯಂತ ವಿಶ್ವಾಸಾರ್ಹ ಬ್ರಾ್ಯಂಡ್​ಗಳಲ್ಲಿ ಒಂದಾಗಿರುವ ‘ಎವನ್​ಪ್ಲಾಸ್ಟಿಕ್ ಇಂಡಸ್ಟ್ರೀಸ್ ಪ್ರೖೆ.ಲಿ. ಕಂಪನಿಯು ಸುಮಾರು 56 ವರ್ಷಗಳಿಂದ ಗುಣಮಟ್ಟದ ಪಿವಿಸಿ ಪೈಪ್​ಗಳು ಮತ್ತು ಫಿಟ್ಟಿಂಗ್ಸ್ ಗಳ ಉತ್ಪಾದಿಸಿ ಗ್ರಾಹಕರ ನಂಬಿಕೆ ಗಳಿಸಿದೆ. ಕರ್ನಾಟಕದ ಹಳೆಯ ಪೈಪ್ ಉತ್ಪಾದನಾ ಸಂಸ್ಥೆಯಾಗಿದ್ದು, ರಾಜ್ಯದಲ್ಲಿ ಪಿವಿಸಿ ಪೈಪ್ ಮಾರಾಟದಲ್ಲಿ 2ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಸುಮಾರು 56 ವರ್ಷಗಳ ನಿರಂತರ ಗ್ರಾಹಕರ ವಿಶ್ವಾಸದೊಂದಿಗೆ ಎವನ್​ಪ್ಲಾಸ್ಟ್ ಕಂಪನಿ ಕಾರ್ಯ ನಿರ್ವಹಿಸುತ್ತಾ ಬಂದಿದೆ. ಪ್ರಸ್ತುತ ಬೆಂಗಳೂರು ಹೊರ ವಲಯದ ಬೊಮ್ಮಸಂದ್ರ ಸೇರಿ ಇತರೆಡೆ ಒಟ್ಟು 4 ಉತ್ಪಾದನಾ ಘಟಕಗಳನ್ನು ಹೊಂದಿದೆ. ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ಸೇರಿ 5 ರಾಜ್ಯಗಳಿಗೆ ತನ್ನ ಗುಣಮಟ್ಟದ ಉತ್ಪನ್ನಗಳ ಮಾರಾಟ ಜಾಲವನ್ನು ವಿಸ್ತರಿಸಿಕೊಂಡಿದೆ. 2009ರಲ್ಲಿ ಸುಮಾರು 40 ಕೋಟಿ ರೂ. ವಾರ್ಷಿಕ ವ್ಯಾಪಾರ ವಹಿವಾಟು ಹೊಂದಿದ್ದ, ಎವನ್​ಪ್ಲಾಸ್ಟ್ ಕಂಪನಿಗೆ ಸುನೀಲ್ ಬಜಾಜ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ನಂತರ 13 ವರ್ಷಗಳಲ್ಲಿ ವಾರ್ಷಿಕ ವಹಿವಾಟು 500 ಕೋಟಿ ರೂ.ಗೆ ಏರಿಕೆಯಾಗಿದೆ. ರೈತರು ಮತ್ತು ಕಟ್ಟಡಗಳಿಗೆ ಬೇಕಾದ ಗುಣಮಟ್ಟದ ಪೈಪ್​ಗಳನ್ನು ತಲುಪಿಸುವ ಮೂಲಕ ಮುಂದಿನ 3-5 ವರ್ಷಗಳಲ್ಲಿ ವಾರ್ಷಿಕ ವಹಿವಾಟು 1 ಸಾವಿರ ಕೋಟಿ ರೂ.ಗೆ ಗುರಿ ಹೊಂದಲಾಗಿದೆ ಎನ್ನುತ್ತಾರೆ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ಬಜಾಜ್.

ಶೇ.70 ಕೃಷಿ ಸಂಬಂಧಿತ ಉತ್ಪನ್ನ: ಎವನ್​ಪ್ಲಾಸ್ಟ್ ಕಂಪನಿಯು ಸಿಪಿವಿಸಿ, ಪಿವಿಸಿ, ಪ್ಲಂಬಿಂಗ್, ಎಸ್​ಡಬ್ಲ್ಯುಆರ್, ಮುಖ್ಯವಾಗಿ ನೀರಿನ ಟ್ಯಾಂಕ್​ಗಳು ಮತ್ತು ಎಚ್​ಡಿಪಿ ಪೈಪ್​ಗಳನ್ನು ಉತ್ಪಾದಿಸಲಾಗುತ್ತಿದೆ. ಈ ಪೈಕಿ ನೀರಿನ ಪೈಪ್​ಗಳು, ಕೃಷಿಗಾಗಿ ಹನಿ ನೀರಾವರಿಗೆ ಸ್ಪಿಂಕ್ಲರ್ ಮತ್ತು ಫಿಟ್ಟಿಂಗ್​ಗಳು, ಕಾಲಮ್ ಪೈಪ್​ಗಳು, 1,500 ಅಡಿ ಕೊಳವೆ ಬಾವಿಗೆ ಆಳಕ್ಕೆ ಇಳಿಸುವ ಪೈಪ್​ಗಳು ಹಾಗೂ ಸಬ್​ವುರ್ಸಿಬಲ್ ಪಂಪ್​ಗಳಿಗಾಗಿ ಕೇಸಿಂಗ್ ಪೈಪ್​ಗಳು ಸೇರಿ ಶೇ.70 ಕೃಷಿ ಸಂಬಂಧಿತ ಉಪಕರಣಗಳನ್ನು ಉತ್ಪಾದಿಸಲಾಗುತ್ತಿದೆ. ಜತೆಗೆ, ಮನೆ, ವಸತಿ ಕಟ್ಟಡಗಳು, ಕೈಗಾ ರಿಕಾ ಕಟ್ಟಡಗಳಿಗೆ ಅಗತ್ಯತೆಗೆ ತಕ್ಕಂತೆ ಬಿಸಿ ಮತ್ತು ತಣ್ಣೀರು ಸರಬ ರಾಜಿನ ಪೈಪ್​ಗಳನ್ನು ಉತ್ಪಾದಿಸುತ್ತದೆ. ಕಂಪನಿಯ ಉತ್ಪನ್ನಗಳಿಗೆ ಗುಣಮಟ್ಟ ಸಂಸ್ಥೆಯ 9001:2015 ಪ್ರಮಾಣಪತ್ರ ಸಿಕ್ಕಿದೆ.

ಕೇಂದ್ರದ ಯೋಜನೆಗೆ ಎವನ್​ಪ್ಲಾಸ್ಟ್ ಪೈಪ್​ಗಳು: ಎವನ್​ಪ್ಲಾಸ್ಟ್ ಕಂಪನಿಯ ಪೈಪ್​ಗಳು ಲವಣಾಂಶ, ಬಿಸಿಲು, ಗಾಳಿ ಮತ್ತು ತೇವಾಂಶ ಎಲ್ಲ ನೈಸರ್ಗಿಕ ಹವಾಮಾನದ ತಾಳ್ವಿಕೆ ಸಾಮರ್ಥ್ಯ ಹೊಂದಿವೆ. ಆದ್ದರಿಂದ ಪೈಪ್​ಗಳಿಗೆ ಪೇಂಟಿಂಗ್ ಸೇರಿ ಇತರ ನಿರ್ವಹಣೆಯ ಅಗತ್ಯವಿಲ್ಲ. ಜತೆಗೆ, ಪೈಪ್​ಗಳನ್ನು ಬಿಸಿ ಮಾಡುವ ಮೂಲಕ ಯಾವುದೇ ಆಕಾರಕ್ಕೆ ಬಾಗಿಸಲು ಕೂಡ ಅನುಕೂಲಕರವಾಗಿವೆ. ಇದಲ್ಲದೆ, ‘ಬಜಾಜ್ ಪ್ಲಾಸ್ಟ್’ ಹೆಸರಿನಲ್ಲಿ ಎಲೆಕ್ಟ್ರಿಕಲ್ ಕಂಡ್ಯೂಟ್ ಪೈಪ್​ಗಳನ್ನು ಉತ್ಪಾದಿಸಲಾಗುತ್ತಿದೆ. ಮುಖ್ಯವಾಗಿ ಎವನ್​ಪ್ಲಾಸ್ಟ್ ಕಂಪನಿಯ ಪಿವಿಸಿ ಮತ್ತು ಎಚ್​ಡಿಪಿಇ ಪೈಪ್​ಗಳನ್ನು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾದ ಜೆಎಂಎಂ ಪ್ರಾಜೆಕ್ಟ್ ನಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ ಕಂಪನಿಯ ಮುಖ್ಯಸ್ಥ ಸುನೀಲ್ ಬಜಾಜ್ ತಿಳಿಸಿದ್ದಾರೆ.

3 ಸಾವಿರ ಡೀಲರ್​ಗಳು: ಎವನ್​ಪ್ಲಾಸ್ಟಿಕ್ ಇಂಡಸ್ಟ್ರೀಸ್ ಪ್ರೖೆ.ಲಿ. ಮುಖ್ಯ ಕಚೇರಿ ಮತ್ತು ಪ್ರಧಾನ ಉತ್ಪನ್ನ ಘಟಕವು ಬೊಮ್ಮಸಂದ್ರದ ಜಿಗಣಿ ಲಿಂಕ್ ರಸ್ತೆಯಲ್ಲಿದೆ. ಹುಬ್ಬಳ್ಳಿಯಲ್ಲಿ ಎವನ್​ಪ್ಲಾಸ್ಟ್ ಉತ್ಪನ್ನಗಳ ಸಂಗ್ರಹಾಗಾರವಿದೆ. ರಾಜ್ಯ ಹೊರ ರಾಜ್ಯ ಸೇರಿ ಒಟ್ಟು 3 ಸಾವಿರ ಡೀಲರ್​ಗಳಿದ್ದಾರೆ. ರೈತರು ಮತ್ತು ಯಾವುದೇ ಕಟ್ಟಡಗಳಿಗೆ ಪೈಪ್​ಗಳು ಬೇಕಾದಲ್ಲಿ ಡೀಲರ್​ಗಳನ್ನು ಸಂಪರ್ಕ ಮಾಡಬಹುದು. ಅಲ್ಲಿಂದ ಡಿಸ್ಟ್ರಿಬ್ಯೂಟರ್ ಮೂಲಕ ಆರ್ಡರ್ ಪಡೆದು ಉತ್ಪನ್ನಗಳನ್ನು ತಲುಪಿಸುತ್ತದೆ. ಕಂಪನಿ ಅಧ್ಯಕ್ಷ ಸುನೀಲ್ ಬಜಾಜ್ ವ್ಯವಹಾರಕ್ಕೆ ಮಾತ್ರ ಸೀಮಿತವಾಗದೆ, ವಿದ್ಯಾರ್ಥಿಗಳಿಗೆ ಸಹಾಯಧನ, ಗೋಶಾಲೆ ನಡೆಸುವುದು ಹಾಗೂ ಕಾರ್ಖಾನೆ ಕಾರ್ವಿುಕರಿಗೆ ಒಂದು ಹೊತ್ತಿನ ಊಟ ನೀಡುವುದು ಸೇರಿ ಹಲವು ಸಮಾಜ ಸೇವಾ ಕಾರ್ಯ ಮಾಡುತ್ತಿದ್ದಾರೆ.

ನಮ್ಮ ಕಂಪನಿಯು 4 ಉತ್ಪಾದನಾ ಘಟಕ ಹೊಂದಿದ್ದು, ಇಲ್ಲಿ ಕೆಲಸ ಮಾಡುವ 1 ಸಾವಿರ ಕಾರ್ವಿುಕರ ವಸತಿಗೆ ಮನೆಗಳನ್ನು ನಿರ್ವಿುಸಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ನೌಕರರಿಗೆ 2 ಬಿಎಚ್​ಕೆ ಮನೆ ನಿರ್ವಿುಸಿಕೊಡಲಾಗುವುದು. ಇತ್ತೀಚೆಗೆ ನೀರಿನ ಸಿಂಟೆಕ್ಸ್​ಗಳು ಮತ್ತು ಎಚ್​ಡಿಪಿಇ ಪೈಪ್​ಗಳ ಉತ್ಪಾದನೆ ಆರಂಭಿಸಲಾಗಿದ್ದು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. | ಸುನೀಲ್ ಬಜಾಜ್ ವ್ಯವಸ್ಥಾಪಕ ನಿರ್ದೇಶಕ, ಎವನ್​ಪ್ಲಾಸ್ಟಿಕ್ ಇಂಡಸ್ಟ್ರೀಸ್ ಪ್ರೖೆ.ಲಿ.

ಸಂಪರ್ಕ: ಮೊಬೈಲ್ ಸಂಖ್ಯೆ- 9845354848

ಇಮೇಲ್ ವಿಳಾಸ: avonplast@gmail.com ಅಥವಾ ವೆಬ್​ಸೈಟ್ ವಿಳಾಸ www.avonplast.com ಸಂಪರ್ಕಿಸಬಹುದು.