ಅಂಕಣ

ಉತ್ತಮ ಆದಾಯಕ್ಕೆ ಕ್ಯಾಪ್ಸಿಕಂ ಕೃಷಿ

ಸಾಮನ್ಯವಾಗಿ ರೈತರಿಗೆ ಆದಾಯ ತಂದು ಕೊಡುವ ಕೃಷಿಯಲ್ಲಿ ಕ್ಯಾಪ್ಸಿಕಂ ಬೆಳೆ ಕೂಡ ಒಂದು. ಕೇವಲ 1 ಎಕರೆ ಪ್ರದೇಶದಲ್ಲಿ ಕೃಷಿ ಮಾಡಿದರೆ ಸಾಕು, ವರ್ಷಕ್ಕೆ ರೈತರು ಕನಿಷ್ಠವೆಂದರೂ 17 ಲಕ್ಷ ರೂ. ಆದಾಯ ಪಡೆಯ

ಬಹುದು. ಇಷ್ಟೊಂದು ಬೇಡಿಕೆ ಮತ್ತು ಬೆಲೆ ಹೊಂದಿ ರುವ ಈ ಬೆಳೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆದರೆ ಎಷ್ಟು ಗಳಿಸಬಹುದು ಎಂದು ನೀವೇ ಲೆಕ್ಕ ಹಾಕಿ.

ಪ್ರಸ್ತುತ ಇತ್ತೀಚಿನ ದಿನಗಳಲ್ಲಿ ಫುಡ್ ಇಂಡಸ್ಟ್ರಿಯಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ತರಕಾರಿಗಳಲ್ಲಿ ಕ್ಯಾಪ್ಸಿಕಂ ಕೂಡ ಒಂದಾಗಿದೆ. ಹೋಟೆಲ್ ಮತ್ತು ಕ್ಯಾಟರಿಂಗ್ ಬಿಸಿನೆಸ್​ನಲ್ಲಿ ಇದರ ಬಳಕೆ ದಿನೇದಿನೆ ಹೆಚ್ಚುತ್ತಿದೆ. ಮೂಲತಃ ಉತ್ತರ ಅಮೆರಿಕದ ತರಕಾರಿಯಾದ ಇದನ್ನು ಸ್ಥಳಿಯವಾಗಿ ಸಿಹಿ ಮೆಣಸು, ಶಿಮ್ಲಾ ಮೆಣಸು ಹಾಗೂ ದೊಡ್ಡ ಮೆಣಸು ಸೇರಿ ವಿವಿಧ ಹೆಸರಿನಿಂದ ಕರೆಯಲಾಗುತ್ತದೆ.

ಜೇಡಿ ಮತ್ತು ಮರಳು ಮಿಶ್ರಿತ ಮಣ್ಣಿನ ಪ್ರದೇಶದಲ್ಲಿ ಸುಲಭವಾಗಿ ಬೆಳೆಯಬಹುದಾದ ಈ ತರಕಾರಿಗೆ ಹೆಚ್ಚು ಮಳೆ ಬಿಳುವ ಪ್ರದೇಶ ಸೂಕ್ತವಲ್ಲ. ಇದನ್ನು ನಗರ ಮತ್ತು ಗ್ರಾಮೀಣ ಪ್ರದೇಶ ಎರಡರಲ್ಲೂ ಬೆಳೆಯವುದಕ್ಕೆ ಸಾಧ್ಯ. ಆದರೆ ಗುಣಮಟ್ಟದ ಕಾಯಿಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ ಪಾಲಿಹೌಸ್​ನಲ್ಲಿ ಕೃಷಿ ಮಾಡಿದರೆ ಖಂಡಿತಾ ಹೆಚ್ಚು ಆದಾಯ ಪಡೆಯಬಹುದು.

ಕ್ಯಾಪ್ಸಿಕಂ ಮಾರುಕಟ್ಟೆ ಮೌಲ್ಯ: ಹಸಿರು, ಕೆಂಪು ಮತ್ತು ಹಳದಿ ಬಣ್ಣಗಳ ಕ್ಯಾಪ್ಸಿಕಂಗೆ ಜಾಗತಿಕವಾಗಿ ಮತ್ತು ಸ್ಥಳಿಯವಾಗಿ ಹೆಚ್ಚು ಬೇಡಿಕೆ ಇದೆ. ಇದರಲ್ಲಿ ಜಾಗತಿಕ ಮಾರುಕಟ್ಟೆ ಮೌಲ್ಯ ನೋಡುವುದಾದರೆ 2018ರಲ್ಲಿ 8686.7ಮಿಲಿಯನ್ ಯುಎಸ್ ಡಾಲರ್. ಅಂದರೆ, ಭಾರತದ ರೂಪಾಯಿ ಮೌಲ್ಯ 86867 ಲಕ್ಷ ರೂ. ಅದೇ 2025ಕ್ಕೆ (ಮುಂದಿನ 2.5 ವರ್ಷದಲ್ಲಿ) 12240 ಮಿಲಿಯನ್ ಯುಎಸ್ ಡಾಲರ್ ಆಗುವ ನಿರೀಕ್ಷೆ ಇದೆ, ಅಂದರೆ, ಭಾರತದ ರೂಪಾಯಿ ಮೌಲ್ಯ 122,400 ಲಕ್ಷ ರೂ. ಅಷ್ಟೇ ಅಲ್ಲದೆ, 2019ರಿಂದ 2025ರ ನಡುವೆ ಶೇ.5.0 ಸಿಎಜಿಆರ್ ಪ್ರಗತಿಯಾಗಿದೆ. ಇನ್ನು ರಫ್ತು ವಿಚಾರಕ್ಕೆ ಬಂದರೆ ಜರ್ಮನಿ ಅತೀ ಹೆಚ್ಚು ರಫ್ತು ಮಾಡುತ್ತೆ. ಇದು ಜಾಗತಿಕವಾದರೆ ಭಾರತದಲ್ಲಿ ಕ್ಯಾಪ್ಸಿಕಂ ಪ್ರತಿ ಕಿಲೋಗ್ರಾಂಗೆ 1.77 ಯುಎಸ್ ಡಾಲರ್, ಅಂದರೆ ಕೆ.ಜಿಗೆ 141 ರೂ.

ಕರ್ನಾಟಕದಲ್ಲಿ ಹೆಚ್ಚು ಕ್ಯಾಪ್ಸಿಕಂ ಕೃಷಿ: ಭಾರತದ ತರಕಾರಿಗಳ ಪಟ್ಟಿಯಲ್ಲಿ ಒಂದು ಸ್ಥಾನವನ್ನು ಹೊಂದಿರುವಂತಹ ಕ್ಯಾಪ್ಸಿಕಂ ಕೇವಲ ತರಕಾರಿಯಾಗಿ ಉಪಯೋಗವಾಗದೆ ಆರೋಗ್ಯಕರವಾಗಿಯೂ ಬಳಸಬಹುದು. ಯಾಕಂದರೆ ಇದನ್ನು ಬಳಸುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ - ಎ, ವಿಟಮಿನ್ - ಸಿ, ಕ್ಯಾಲ್ಸಿಯಂ, ರಂಜಕ, ಪೋಟಾಶಿಯಂ ಕೂಡ ದೊರೆಯುವುದರಿಂದ ಹೆಚ್ಚು ಬೇಡಿಕೆ ಹೊಂದಿದೆ. ಭಾರತದಲ್ಲಿ ಸರಿ ಸುಮಾರು 45 ಸಾವಿರಕ್ಕೂ ಹೆಚ್ಚು ಹೇಕ್ಟರ್ ಪ್ರದೇಶದಲ್ಲಿ ಈ ಬೆಳೆ ಕೃಷಿ ಮಾಡಲಾಗುತ್ತಿದೆ. 327 ಸಾವಿರ ಟನ್ ಉತ್ಪಾದನೆ ಮಾಡಲಾಗುತ್ತಿದೆ. ಪ್ರಮುಖವಾಗಿ ಕರ್ನಾಟಕ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಈ ಕೃಷಿ ಮಾಡಲಾಗುತ್ತಿದೆ. ಆದರೆ, ಕರ್ನಾಟಕದಲ್ಲಿಯೇ ಹೆಚ್ಚು ಕ್ಯಾಪ್ಸಿಕಂ ಕೃಷಿ ಮಾಡಲಾಗುತ್ತಿದ್ದು, ಸರಿಸುಮಾರು 4130 ಹೆಕ್ಟರ್ ಪ್ರದೇಶದಲ್ಲಿ 82 ಸಾವಿರ ಟನ್ ಕ್ಯಾಪ್ಸಿಕಂ ಉತ್ಪಾದಿಸಲಾಗುತ್ತದೆ. ಹೀಗೆ ಬೇಡಿಕೆ ಮತ್ತು ಉತ್ತಮ ಪ್ರಗತಿ ನೋಡಿದಾಗ ಪ್ರತಿಯೊಬ್ಬ ರೈತರು ಕೂಡ ಈ ಕೃಷಿ ಮಾಡಿ ಯಶಸ್ಸು ಸಾಧಿಸುವುದಕ್ಕೆ ಅವಕಾಶ ಇದೆ.

ಕಲರ್ ಕ್ಯಾಪ್ಸಿಕಂ ಖರ್ಚು-ಲಾಭದ ಲೆಕ್ಕಚಾರ: ಮೆಣಸಿನ ಜಾತಿಗೆ ಸೇರಿದ ಹಾಗೂ ಎಲ್ಲ ಪ್ರದೇಶದಲ್ಲಿ ಬೆಳೆಯಲು ಸಾಧ್ಯವಾಗುವಂಥ ಕ್ಯಾಪ್ಸಿಕಂ, ನಾಟಿ ಮಾಡಿದ 50-65 ದಿನಗಳಲ್ಲಿ ಕಾಯಿ ಕಟಾವು ಮಾಡಬಹುದು. ಸುಮಾರು 6 ತಿಂಗಳ ಕಾಲ ನಿರಂತರವಾಗಿ ಇಳುವರಿ ನೀಡುತ್ತದೆ. ಒಂದು ಸಸಿಯಿಂದ ವರ್ಷಕ್ಕೆ 10 ಕೆ.ಜಿ. ಕಾಯಿ ಇಳುವರಿ ಬರುವುದರಿಂದ ಎಕರೆಗೆ 35 ಟನ್ ಇಳುವರಿ ಪಡೆಯಲು ಸಾಧ್ಯ. ಒಂದು ಕೆ.ಜಿ. ಕ್ಯಾಪ್ಸಿಕಂಗೆ 50 ರೂ. ಅಂಥ ಮಾರಾಟ ಮಾಡಿದರೂ 35 ಟನ್​ಗೆ 17 ಲಕ್ಷಕ್ಕೂ ಅಧಿಕ ಆದಾಯ ಬರುತ್ತದೆ. ಇದರಲ್ಲಿ ಬೀಜ, ಸಸಿ, ಪಾಲಿಹೌಸ್, ಕಾರ್ವಿುಕರು, ನೀರು, ಗೊಬ್ಬರ ಹಾಗೂ ರಾಸಾಯನಿಕಗಳು ಸೇರಿ ಸುಮಾರು 5 ಲಕ್ಷ ರೂ. ಖರ್ಚು ತೆಗೆದ್ರು ವರ್ಷಕ್ಕೆ 12 ಲಕ್ಷ ರೂ. ರೈತರ ಕೈ ಸೇರುತ್ತೆ. ಇಷ್ಟೇ ಅಲ್ಲದೆ, ಕ್ಯಾಪ್ಸಿಕಂಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಅದರ ಸಸಿಗಳನ್ನು ನರ್ಸರಿ ಮಾಡಿ ಬೆಳೆಸಿ ಅದನ್ನೂ ಮಾರಾಟ ಮಾಡಿ ಉತ್ತಮ ಆದಾಯ ಗಳಿಸಬಹುದು.

ಸರ್ಕಾರದ ಸೌಲಭ್ಯ: ಗುಣಮಟ್ಟದ ಕಾಯಿಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ ಕ್ಯಾಪ್ಸಿಕಂ ಕೃಷಿ ಪಾಲಿಹೌಸ್​ನಲ್ಲಿ ಮಾಡುವುದರಿಂದ ಇಳುವರಿ ಕೂಡ ಹೆಚ್ಚುತ್ತೆ. ಈ ಕೃಷಿಗೆ ಗ್ರಾಮೀಣ ಬ್ಯಾಂಕ್​ಗಳಿಂದ ಸಾಲ ಸೌಲಭ್ಯ ದೊರೆಯುತ್ತದೆ ಹಾಗೂ ಸಂಬಂಧಿತ ಇಲಾಖೆಯಿಂದ ಸಹಾಯಧನ ಕೂಡ ಸಿಗಲಿದೆ.

ffreedom appನಲ್ಲಿ ಕಲರ್ ಕ್ಯಾಪ್ಸಿಕಂ ಕೋರ್ಸ್: ಪ್ರತಿಯೊಬ್ಬ ರೈತರು ಆದಾಯವನ್ನು 10 ಪಟ್ಟು ಹೆಚ್ಚಿಸಿಕೊಳ್ಳಬೇಕು. ಅವರೂ ಆರ್ಥಿಕ ಸ್ವಾತಂತ್ರ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ffreedom app ಕಲರ್ ಕ್ಯಾಪ್ಸಿಕಂ ಕೋರ್ಸ್ ಸಿದ್ಧಪಡಿಸಿದೆ. ಹಲವು ವರ್ಷಗಳಿಂದ ಕ್ಯಾಪ್ಸಿಕಂ ಕೃಷಿ ಮಾಡುತ್ತಿರುವ ಕೋಲಾರ ಜಿಲ್ಲೆ ಕೋಟಿಗಾನಹಳ್ಳಿಯ ಪ್ರಗತಿಪರ ರೈತ ಪ್ರಕಾಶ್ ಅವರೇ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಜತೆಗೆ ನೀವು ffreedom appನಲ್ಲಿ ಕೃಷಿ, ಬಿಸಿನೆಸ್ ಮತ್ತು ಹಣಕಾಸಿಗೆ ಸಂಬಂಧಿಸಿದ 900ಕ್ಕೂ ಹೆಚ್ಚು ಕೋರ್ಸ್ ಗಳನ್ನು ವೀಕ್ಷಿಸಬಹುದು. ಇಷ್ಟೇ ಅಲ್ಲದೆ, ಯಶಸ್ವಿ ಮಾರ್ಗದರ್ಶಕರಿಂದ ಮಾರ್ಗದರ್ಶನ ಪಡೆದು ನೀವೂ ಶ್ರೀಮಂತಿಕೆಯ ಪ್ರಯಾಣ ಆರಂಭಿಸಬಹುದು.

ಉದ್ಯೋಗಾವಕಾಶ: ಮನೆಯಿಂದಲೇ ಉದ್ಯೋಗ ಮಾಡಬಯಸುವವರಿಗೆ ffreedom appನಲ್ಲಿ ಸುವರ್ಣ ಅವಕಾಶವಿದೆ. ಉದ್ಯೋಗಾಕಾಂಕ್ಷಿಗಳು ಈ ನಂಬರಿಗೆ ಮಿಸ್ಡ್ ಕಾಲ್ ಮಾಡಿ - 02262116777.

ಕೋರ್ಸ್​ನಲ್ಲಿ ಏನೇನಿದೆ?

  • ಕೋರ್ಸ್ ಪರಿಚಯ
  • ಮಾರ್ಗದರ್ಶಕರ ಪರಿಚಯ
  • ಏನಿದು ಕಲರ್ ಕ್ಯಾಪ್ಸಿಕಂ ಕೃಷಿ?
  • ಬಂಡವಾಳ, ಸಾಲ, ಸರ್ಕಾರದ ಸೌಲಭ್ಯ
  • ಗ್ರೀನ್ ಹೌಸ್
  • ಭೂಮಿ, ಮಣ್ಣು ಮತ್ತು ವಾತಾವರಣ
  • ನಾಟಿ ಮತ್ತು ಕಾರ್ವಿುಕರು
  • ಕ್ಯಾಪ್ಸಿಕಂ ಜೀವನ ಚಕ್ರ
  • ನೀರು, ಗೊಬ್ಬರ, ರೋಗ ನಿಯಂತ್ರಣ
  • ಕಟಾವು ಮತ್ತು ಶೇಖರಣೆ
  • ಖರ್ಚು ಮತ್ತು ಲಾಭ
  • ಸವಾಲು, ಮಾರ್ಗದರ್ಶಕರ ಕಿವಿಮಾತು