ಆಹಾರೋದ್ಯಮದಲ್ಲಿ ಒಳ್ಳೆಯ ಆದಾಯ ಗಳಿಸುವ ಅವಕಾಶವಿರುವ ಬಿಸಿನೆಸ್ಗಳಲ್ಲಿ ಚಾಟ್ಸ್ ಬಿಸಿನೆಸ್ ಕೂಡ ಒಂದು. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಹೊರಗೆ ಹೋಗಿ ತಮಗಿಷ್ಟದ ತಿಂಡಿ ತಿನಿಸು ತಿನ್ನುವ ರೂಢಿ ಹೆಚ್ಚಾಗುತ್ತಿದೆ. ಹಾಗಾಗಿ ದೊಡ್ಡ ನಗರಗಳು, ಪಟ್ಟಣಗಳಿಗಷ್ಟೇ ಸೀಮಿತವಾಗಿದ್ದ ಚಾಟ್ಸ್ ಸೆಂಟರ್ಗಳು ಈಗ ಹೋಬಳಿ, ಹಳ್ಳಿಗಳಿಗೂ ಕಾಲಿಟ್ಟಿವೆ. ಭಾರತದಲ್ಲಿ ಆಹಾರೋದ್ಯಮದ ಒಟ್ಟು ಮೌಲ್ಯ ಸುಮಾರು ರೂ. 2 ಲಕ್ಷ ಕೋಟಿ. ಗುಣಮಟ್ಟ, ರುಚಿ, ಶುಚಿತ್ವ ಮತ್ತು ಗ್ರಾಹಕ ಸೇವೆ ಇಷ್ಟು ವಿಚಾರಗಳಿಗೆ ನೀವು ಗಮನಕೊಟ್ಟರೆ ಚಾಟ್ಸ್ ಸೆಂಟರ್ ಬಿಸಿನೆಸ್ನಲ್ಲಿ ಗೆಲವು ನಿಶ್ಚಿತ. ನಿರ್ದಿಷ್ಟ ಪ್ರದೇಶಕ್ಕೆ ಅನುಗುಣವಾಗಿ 40-50 ಸಾವಿರದಿಂದ ಹಿಡಿದು ಕೆಲ ಲಕ್ಷಗಳವರೆಗೆ ಹೂಡಿಕೆ ಮಾಡಿ ನೀವು ಚಾಟ್ಸ್ ಸೆಂಟರ್ ಬಿಸಿನೆಸ್ ಶುರು ಮಾಡಬಹುದು. ಬಂಡವಾಳ ಲಭ್ಯತೆಗೆ ಅನುಗುಣವಾಗಿ ತಳ್ಳುವ ಗಾಡಿ, ಫುಡ್ ಟ್ರಕ್ ಮತ್ತು ಸ್ವಂತ ಅಥವಾ ಬಾಡಿಗೆ ಅಂಗಡಿಗಳಲ್ಲಿ ಚಾಟ್ಸ್ ಬಿಸಿನೆಸ್ ಆರಂಭಿಸಬಹುದು.
ಕೌಶಲ್ಯವಿದ್ದರೆ ಎಲ್ಲರಿಗೂ ಸರಿಹೊಂದುವ ಬಿಸಿನೆಸ್!: ಈ ಬಿಸಿನೆಸ್ಗೆ ಅಡುಗೆ ಕೌಶಲ ಎಲ್ಲದಕ್ಕಿಂತಲೂ ಬಹಳ ಮುಖ್ಯ. ಬೇರೆ ಬಿಸಿನೆಸ್ಗೆ ಬೇಕಿರುವಂತೆ ಇದಕ್ಕೆ ದೊಡ್ಡ ಬಂಡವಾಳ ಬೇಕೇ ಬೇಕು ಎಂದೇನಿಲ್ಲ. ಐದಾರು ಸಾವಿರ ಬಂಡವಾಳ ಹಾಕಿ ಒಂದು ಅಂಗಡಿ ಮುಂದೆ ಪಾನಿಪುರಿ ಮಾರಾಟ ಮಾಡಿ ಒಳ್ಳೆಯ ಸಂಪಾದನೆ ಮಾಡುತ್ತಿರುವವರಿದ್ದಾರೆ. 40-50 ಸಾವಿರ ಬಂಡವಾಳದೊಂದಿಗೆ ತಳ್ಳುವ ಗಾಡಿಯಲ್ಲಿ ಚಾಟ್ಸ್ ಬಿಸಿನೆಸ್ ಮಾಡಿ ಸಕ್ಸಸ್ ಆದವರಿದ್ದಾರೆ. ಒಂದೆರಡು ಲಕ್ಷ ಖರ್ಚು ಮಾಡಿ ಫುಡ್ ಟ್ರಕ್ನಲ್ಲಿ ಚಾಟ್ಸ್ ಬಿಸಿನೆಸ್ ಆರಂಭಿಸಿ ಒಳ್ಳೆಯ ಆದಾಯ ಗಳಿಸುತ್ತಿರುವವರಿದ್ದಾರೆ. ಲಕ್ಷಗಟ್ಟಲೆ ಬಂಡವಾಳ ಹಾಕಿ ಒಳ್ಳೆಯ ಆಂಬಿಯನ್ಸ್ ಜತೆ ಸೀಟಿಂಗ್ ವ್ಯವಸ್ಥೆಯೊಂದಿಗೆ ಚಾಟ್ಸ್ ಸೆಂಟರ್ ಶುರು ಮಾಡಿ ಗೆದ್ದಿರುವವರಿದ್ದಾರೆ. ಹಾಗಾಗಿ ಈ ಬಿಸಿನೆಸ್ ಎಲ್ಲ ರೀತಿಯ ಆರ್ಥಿಕ ಹಿನ್ನೆಲೆಯುಳ್ಳವರಿಗೂ ಸರಿ ಹೊಂದುತ್ತದೆ. ಸದ್ಯ ಕೋವಿಡ್ನಿಂದಾಗಿ ಫುಡ್ ಬಿಸಿನೆಸ್ಗಳಿಗೆ ತೊಂದರೆಯಾಗಿದೆ ಅನ್ನೋದು ಬಿಟ್ಟರೆ ಪರಿಶ್ರಮ ಹಾಕಿದ್ರೆ ಈ ಕ್ಷೇತ್ರದಲ್ಲಿ ಲಾಭ ಇದ್ದೇ ಇದೆ, ಪ್ರದೇಶಕ್ಕೆ ಅನುಗುಣವಾಗಿ ಚಾಟ್ಸ್ ಬಿಸಿನೆಸ್ನಲ್ಲಿ ಶೇ 25ರಿಂದ ಶೇ 40ರಷ್ಟು ಲಾಭ ಗಳಿಸಬಹುದು.
ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಚಾಟ್ಸ್ ಸೆಂಟರ್ ಕೋರ್ಸ್: ಸಾವಿರಾರು ಜನರು ಚಾಟ್ಸ್ ಸೆಂಟರ್ ಆರಂಭಿಸುತ್ತಾರೆ. ಆದರೆ ಎಲ್ಲರೂ ಸಕ್ಸಸ್ ಆಗೋಲ್ಲಾ. ಯಾವುದೇ ಉದ್ಯಮದಲ್ಲಿ ಯಶಸ್ಸು ಕಾಣಬೇಕು ಅಂದ್ರೆ ಆ ಬಿಸಿನೆಸ್ನ ಒಳಗುಟ್ಟುಗಳನ್ನು ಅರಿತುಕೊಳ್ಳಬೇಕು. ಗ್ರಾಹಕರ ಮನ ಗೆಲ್ಲುವುದು ಹೇಗೆ, ಅಂಗಡಿಯ ಲೊಕೇಷನ್ ಆಯ್ಕೆ ಹೇಗೆ, ಯಾವ ರೀತಿಯ ಮೆನು ಇರಬೇಕು, ದರ ನಿಗದಿಯನ್ನು ಹೇಗೆ ಮಾಡಬೇಕು, ರುಚಿ- ಶುಚಿಯನ್ನು ಸ್ಥಿರವಾಗಿ ಕಾಯ್ದುಕೊಳ್ಳುವುದು ಹೇಗೆ, ಎಲ್ಲಿಂದ ಚಾಟ್ಸ್ ಸೆಂಟರ್ಗೆ ಬೇಕಾದ ವಸ್ತುಗಳನ್ನು ಖರೀದಿಸಿದ್ರೆ ಲಾಭ, ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಮಾಲೀಕನಿಗೆ ಮಾಹಿತಿ ಇರಬೇಕು.
ಆಗ ಮಾತ್ರ ಚಾಟ್ಸ್ ಬಿಸಿನೆಸ್ನಲ್ಲಿ ಯಶಸ್ಸು ಕಾಣಬಹುದು. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಚಾಟ್ಸ್ ಸೆಂಟರ್ ಬಿಸಿನೆಸ್ನಲ್ಲಿ ಸಕ್ಸಸ್ ಕಾಣೋದು ಹೇಗೆ? ಎನ್ನುವ ಬಗ್ಗೆ ಕೋರ್ಸ್ ರೂಪಿಸಲಾಗಿದೆ. ಚಾಟ್ಸ್ ಬಿಸಿನೆಸ್ನಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿರುವ ತಜ್ಞರೇ ನಿಮಗೆ ಈ ಕೋರ್ಸ್ನಲ್ಲಿ ಮಾರ್ಗದರ್ಶಕರು. ಹಾಗಾದ್ರೆ ಇನ್ನೇಕೆ ತಡ, ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ಲೋಡ್ ಮಾಡಿ, ಚಾಟ್ಸ್ ಸೆಂಟರ್ ಬಿಸಿನೆಸ್ ಬಗ್ಗೆ ಕಲಿತು ಆದಾಯ ಗಳಿಕೆಯ ಮಾರ್ಗ ಕಂಡುಕೊಳ್ಳಿ.
ಬಿಸಿನೆಸ್ ಮಾಡಬೇಕು ಎನ್ನುವವರಿಗೂ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಹತ್ತಾರು ಕೋರ್ಸ್ಗಳಿವೆ. ಫುಡ್ ಟ್ರಕ್ ಬಿಸಿನೆಸ್, ಹಳ್ಳಿಯಿಂದ ಬಿಸಿನೆಸ್ ಕಟ್ಟೋದು, ಹೊಟೇಲ್ ಆರಂಭಿಸೋದು, ಕರಕುಶಲ ವಸ್ತುಗಳ ತಯಾರಿಕೆ ಮತ್ತು ಮಾರಾಟ, ದಿನಸಿ ಅಂಗಡಿ ಆರಂಭಿಸೋದು, ಉಪ್ಪಿನಕಾಯಿ ಬಿಸಿನೆಸ್ ಆರಂಭಿಸೋದು, ಬೇಕರಿ ಶುರು ಮಾಡೋದು, ಹೇರ್ ಕಟ್ಟಿಂಗ್ ಶಾಪ್ ಆರಂಭಿಸೋದು, ಹೋಮ್ ಸ್ಟೇ ಶುರು ಮಾಡೋದು, ನಂದಿನಿ ಮಿಲ್ಕ್ ಪಾರ್ಲರ್ ಫ್ರಾಂಚೈಸಿ ಪಡೆಯೋದು, ತರಕಾರಿ ಅಂಗಡಿ ಪ್ರಾರಂಭ ಮಾಡೋದು, ಸೋಪ್ ತಯಾರಿಕೆ ಬಿಸಿನೆಸ್ ಮಾಡೋದು, ಮನೆಯಿಂದ ಕೇಕ್ ತಯಾರಿಸಿ ಮಾರಾಟ ಮಾಡೋದು, ಹೀಗೆ ಆದಾಯ ಕಂಡುಕೊಳ್ಳುವ ಅನೇಕ ಆಯ್ಕೆಗಳು ಈ ಆಪ್ನಲ್ಲಿವೆ.
ಬಿಸಿನೆಸ್ ಕಲಿಕೆ ಜತೆ ಇಲ್ಲಿದೆ ಕೃಷಿ ಯೂನಿವರ್ಸಿಟಿ: ಬಿಸಿನೆಸ್ ಜತೆಗೆ ಕೃಷಿಯಲ್ಲೂ ಸಾಧನೆ ಮಾಡಬೇಕು ಅಂದ್ರೆ ಹೊಸ ಕಲಿಕೆ ನಿಮ್ಮದಾಗಬೇಕು. ಈ ನಿಟ್ಟಿನಲ್ಲಿ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಹಲವು ಕೋರ್ಸ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಮತ್ತು ಕೃಷಿ ಉಪಕಸುಬುಗಳ ಮಾಹಿತಿಯ ಕಣಜವೇ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿದೆ.
ಕೃಷಿ ಸಂಬಂಧಿತ ಉಪಕಸುಬುಗಳ ಬಗ್ಗೆಯೂ ಕೋರ್ಸ್: ಕೋಳಿ ಸಾಕಣೆ ಕೋರ್ಸ್, ಹಂದಿ ಸಾಕಣೆ ಕೋರ್ಸ್, ಕುರಿ ಮತ್ತು ಮೇಕೆ ಸಾಕಾಣಿಕೆ ಕೋರ್ಸ್, ಮೀನು ಕೃಷಿ ಕೋರ್ಸ್, ಹೈನುಗಾರಿಕೆ ಕೋರ್ಸ್, ಕಡಕ್ನಾಥ್ ಕೋಳಿ ಸಾಕಣೆ ಕೋರ್ಸ್, ಜೇನು ಸಾಕಣೆ ಕೋರ್ಸ್, ಸೀಗಡಿ ಕೃಷಿ ಕೋರ್ಸ್, ಗಾಣದ ಎಣ್ಣೆ ಬಿಸಿನೆಸ್ ಕೋರ್ಸ್ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಫೈನಾನ್ಸಿಯಲ್ ಫ್ರೀಡಂ ಆಪ್ನಲ್ಲಿ ಕೋರ್ಸ್ಗಳಿವೆ.